ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರು ಭಾರತದಲ್ಲೇ ಹೆಚ್ಚು

0
1411

 

ಅಲ್ಲಲ್ಲಿ, ಎಲ್ಲೆಲ್ಲಿ ಬೇಕೋ ಅಲ್ಲಲ್ಲೇ ಸೆಲ್ಫಿ ಕ್ಲಿಕ್ಕಿಸೋರು ಮಿಸ್ ಮಾಡದೇ ಓದಿ. ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರು ಭಾರತದಲ್ಲೇ ಹೆಚ್ಚು.

ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ ಮತ್ತು ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಮಾಹಿತಿ ದೆಹಲಿ ವಿದ್ವಾಂಸರು ಹೊಸ ಅಧ್ಯಯನ ಸಂಶೋಧನೆಗಯ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರು ಭಾರತದಲ್ಲೇ ಹೆಚ್ಚುಎಂದು ವರದಿಯಾಗಿದೆ.

ಯುವಜನರಲ್ಲಿ ಇತ್ತೀಚೆಗೆ ಸೆಲ್ಫಿ ಹುಚ್ಚು ಅತಿಯಾಗುತ್ತಿದೆ. ಮೊಬೈಲ್ ಹಿಡಿದು ನಾನಾ ಭಂಗಿಗಳಲ್ಲಿ ಫೋಟೊ ತೆಗೆದುಕೊಳ್ಳುತ್ತಿರುತ್ತಾರೆ. ಸಮಯ, ಸ್ಥಳ, ಪರಿಸ್ಥಿತಿ, ಪ್ರಯೋಜನ, ಉದ್ದೇಶ ಯಾವುದೂ ಇದರ ಹಿಂದೆ ಇರುವುದಿಲ್ಲ. ಅದೇನೋ ಖುಷಿ, ಸಂತಸ, ಸಡಗರ.ಮನುಷ್ಯ ಖುಷಿ ಬಯಸುವುದು ಸಹಜ.ಈ ಸೆಲ್ಫಿ ಹುಚ್ಚಿನಿಂದ ಜೀವಹಾನಿಯಗುತ್ತಿರುವುದು ಹೆಚ್ಚಾಗಿದೆ.

 

selfie1

ಈ  ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭಾರತದಲ್ಲಿ 76 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಾಹಿತಿ ಅಮೆರಿಕ ಮೂಲದ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಇಂದ್ರಪ್ರಸ್ಥ ಮಾಹಿತಿ ತಂತ್ರಜ್ಞಾನ ಇನ್ಸ್ಟಿಟ್ಯೂಟ್ ಅಧ್ಯಯನದಿಂದ ತಿಳಿಯಲಾಗಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಕೂಲೆಸ್ಟ್ ಸೆಲ್ಫಿ ಕ್ಲಿಕ್ಕಿಸಲು ಹೋದ ಹೆಚ್ಚಿನ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡವರಲ್ಲಿ ಪ್ರಪಂಚ ಒಟ್ಟಾರೆ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚು ಎಂದು “Me, Myself and My Killfie:Characterising and Preventing selfie Deaths” ಹೆಸರಿನ ಅಧ್ಯಯನದ ಪ್ರಕಾರ ತಿಳಿಯಲಾಗಿದೆ.

selfie

ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಸರ್ಚ್ ತಂತ್ರ ಬಳಸಿದ ಸಂಶೋಧಕರು ಮಾರ್ಚ್‌ 2014 ರಿಂದ ಈವರೆಗೆ 127 ಸೆಲ್ಫಿ ಮರಣಗಳನ್ನು ಪತ್ತೆಹಚ್ಚಿದ್ದಾರೆ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್‌ಗಳು ಮತ್ತು ವಿಮರ್ಶೆಗಳನ್ನು ಪಡೆಯಲು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಸಂಶೋಧಕರು ಆರೋಪಿಸಿದ್ದಾರೆ. ಪ್ರಪಂಚದಾದ್ಯಂತ ಶಾರ್ಕ್‌ ದಾಳಿಗಿಂತ ಭಯಾನಕ ಸೆಲ್ಫಿ ಕ್ಲಿಕ್ಕಿಸಲು ಹೋಗಿ 2015 ರಲ್ಲಿ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಶೋಧಕರು ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

selfie-haram

ಬರುತ್ತಿರುವ ರೈಲಿನ ಮುಂದೆ ನಿಂತು ಡಾರ್ಲಿಂಗ್ ಸೆಲ್ಫಿ ತೆಗೆದುಕೊಂಡು ಉತ್ತರ ಭಾರತದ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ, ಜಾಗತಿಕವಾಗಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವಿಗೀಡಾದವರ ಸಂಖ್ಯೆಯಲ್ಲಿ ಎರಡನೇ ಹೆಚ್ಚು ಜನರನ್ನು ಹೊಂದಿದ್ದು, ಭಾರತದ ನಂತರದಲ್ಲಿ ಎರಡನೇ ಶ್ರೇಣಿಯಲ್ಲಿದೆ.

selfies

ಆದರೆ ಅತಿಯಾದ ಸೆಲ್ಫಿ ಹುಚ್ಚು ಎಂತೆಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ನಿತ್ಯ ನೋಡುತ್ತಿದ್ದೇವೆ. ಅತಿಯಾದರೆ ಅದರಿಂದ ತಮ್ಮ ಅಮೂಲ್ಯ ಸಮಯ ಹಾಳಾಗುತ್ತದೆ ಎಂಬುದನ್ನು ಯುವಜನ ಮರೆಯಬಾರದು. ಕೆಲವೊಮ್ಮೆ ಇದು ಸಾವಿಗೂ ಕಾರಣವಾಗುತ್ತಿದೆ.