ಎಳ್ಳಿನ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ

0
2726

*ಎಳ್ಳೆಣ್ಣೆ ನಿಮ್ಮ DNA ಕಣಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಅದಲ್ಲದೆ ಪ್ರತೀದಿನ 100 ಮಿ.ಗ್ರಾಂ ಎಳ್ಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು.

*ಎಳ್ಳೆಣ್ಣೆಯಲ್ಲಿ antioxidants ಅಂಶವಿದ್ದು ಎದೆ ಉರಿ ಮುಂತಾದ ಹೃದಯ ಸಂಬಂಧಿ ಕೆಲಸಗಳ ವಿರುದ್ಧ ಹೋರಾಡುತ್ತದೆ.

*ಇದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

*ಉಸಿರಾಟದ ತೊಂದರೆ ಇರುವವರು ಎಳ್ಳು ತಿಂದರೆ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

*ಇದರಲ್ಲಿರುವ ಮೆಗ್ನಿಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಎಳ್ಳೆಣ್ಣೆ ಬಳಸಿ ಪ್ರಯೋಜನ ಪಡೆಯಬಹುದು.

*ಎಳ್ಳೆಣ್ಣೆಯಲ್ಲಿ antioxidants ಅಂಶವಿದ್ದು ಎದೆ ಉರಿ ಮುಂತಾದ ಹೃದಯ ಸಂಬಂಧಿ ಕೆಲಸಗಳ ವಿರುದ್ಧ ಹೋರಾಡುತ್ತದೆ.

*ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ತಿಂದ ಆಹಾರ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೈಹಿಕ ಕ್ರಿಯೆಗಳೆಲ್ಲ ಸರಾಗವಾಗಿ ಆಗುತ್ತವೆ.

*ಎಳ್ಳಿನಲ್ಲಿರುವ ಸತುವಿನ ಅಂಶ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಚರ್ಮದ ಆರೋಗ್ಯವನ್ನು ಕಾಪಾಡುವ ಜೀವಕೋಶಗಳು ಹಾನಿಯಾಗಿದ್ದಲ್ಲಿ ಅವನ್ನೆಲ್ಲ ಸ್ವಾಸ್ಥ್ಯಪೂರ್ಣವಾಗುವಂತೆ ಮಾಡುವಲ್ಲಿಯೂ ಎಳ್ಳಿನ ಪಾತ್ರ ಮಹತ್ವದ್ದು.

*ಸೂರ್ಯನ ಕಿರಣದಿಂದ ನಿಮ್ಮ ಚರ್ಮ ಬಹುಬೇಗನೇ ಕಪ್ಪಾಗುತ್ತಿದೆ ಅನ್ನಿಸಿದರೆ ಎಳ್ಳನ್ನು ಸೇವಿಸಿ. ದೇಹಕ್ಕೆ ಅಗತ್ಯವಿರುವಷ್ಟು ಎಳ್ಳನ್ನು ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದು, ಬಹುಬೇಗನೆ ಕಪ್ಪಾಗುವುದು ನಿಲ್ಲುತ್ತದೆ.

Health-Benefits-Of-Sesame-Seeds-To-Your-Diet

*ಎಳ್ಳಿನ ಎಣ್ಣೆಯನ್ನು ಲೇಪಿಸಿಕೊಳ್ಳುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಕೂದಲು ಕಾಂತಿಯುಕ್ತವೂ, ದಟ್ಟವೂ ಆಗುತ್ತದೆ.

*ಸತು, ಕ್ಯಾಲ್ಷಿಯಂ, ಪಾಸ್ಪರಸ್‌ಗಳ ಆಗರವೇ ಆಗಿರುವ ಎಳ್ಳಿನ ಸೇವನೆಯಿಂದ ಮೂಳೆಯ ಆರೋಗ್ಯ ಹೆಚ್ಚುತ್ತದೆ. ದುರ್ಬಲ ಮೂಳೆಗಳು ಸದೃಢವಾಗುತ್ತವೆ.

*ಗಾಯದಿಂದಾಗಿ ಮೂಳೆಗೇನಾದರೂ ಏಟಾಗಿದ್ದರೆ ಎಳ್ಳಿನ ಸೇವನೆಯಿಂದ ಸುಸ್ಥಿತಿಗೆ ಬರುತ್ತದೆ.

*ಆರ್ಥರೈಟಿಸ್, ಆಸ್ಟೋಪೊರೋಸಿಸ್ ಸಮಸ್ಯೆಯಿಂದ ಬಳಲುತ್ತಿರು ವವರಿಗೆ ಸಹ ಎಳ್ಳು ಉತ್ತಮ ಪರಿಹಾರ.

*ಶ್ವಾಸಕೋಶವನ್ನು ಶುದ್ಧಿಗೊಳಿಸುವಲ್ಲಿಯೂ ಎಳ್ಳಿನ ಪಾತ್ರ ಹಿರಿದು. ಅಸ್ತಮಾ ಸಮಸ್ಯೆಯಿಂದ ಬಳಲುವವರಿಗೂ ಎಳ್ಳಿನ ಸೇವನೆ ಒಳ್ಳೆಯದು.

*ಹಲ್ಲಿನ ಆರೋಗ್ಯವನ್ನು ಹೆಚ್ಚಿಸಿ, ದಂತಪಂಕ್ತಿಗಳು ಗಟ್ಟಿಯಾಗುವಂತೆ ಮಾಡುವಲ್ಲಿಯೂ ಎಳ್ಳು ಸಹಕಾರಿ.

*ಎಳ್ಳಿನ ಸೇವನೆಯಿಂದ ಸುಸ್ತು ಕಡಿಮೆಯಾಗುವುದಲ್ಲದೆ, ದೇಹದ ಶಕ್ತಿ ಹೆಚ್ಚುತ್ತದೆ.

*ಎಳ್ಳೆಣ್ಣೆಯನ್ನು (til oil)ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಇರುವುದು, ಅಕಾಲಿಕ ನೆರೆ ಕಂಡು ಬರುವುದಿಲ್ಲ, ಕೂದಲು ಕವಲೊಡೆಯುವ ಸಮಸ್ಯೆ ಕಂಡು ಬರುವುದಿಲ್ಲ, ಕೂದಲು ಆರೋಗ್ಯಕರವಾಗಿ, ಸೊಂಪಾಗಿ ಬೆಳೆಯುವುದು

ಈ ಎಲ್ಲವೂ ಎಳ್ಳಿನ ಉಪಯೋಗ. ಆದರೆ ಎಳ್ಳನ್ನು ಮಿತವಾಗಿ ಸೇವಿಸ ಬೇಕು. ಅಗತ್ಯಕ್ಕಿಂತ ಹೆಚ್ಚು ಸೇವನೆ ಆರೋಗ್ಯಕ್ಕೆ ಹಾನಿಕರ.