ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬದಲು ಚರಂಡಿ ನೀರು ಪೂರೈಸಲಾಗಿದೆ!!

0
789
ನೀರು ಮನಷ್ಯನಿಗೆ ಬದುಕಲು ಬೇಕಾಗಿರುವ ಮೂಲಭೂತಗಳಲ್ಲಿ ಒಂದು. ನಾವೇಲ್ಲಾ ಒಂದು ದಿನ ಊಟಾ ಬೇಕಾದ್ರು ಬಿಟ್ಟೇವು.. ಹೊರತು ನೀರು ಕುಡಿಯುವದನ್ನು ಬಿಡುವುದಿಲ್ಲ. ಬೆಳಗ್ಗಿನ ಸುಪ್ರಭಾತದೊಂದಿಗೆ ಜಲದೊಂದಿಗೆ ಮನುಷ್ಯನ ನಂಟು ಇಂದು ನಿನ್ನೆಯದಲ್ಲಾ. ಶುದ್ಧ ನೀರು.. ಶುದ್ಧ ಗಾಳಿ.. ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತವೆ ಎನ್ನುವದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಹಣವಂತರೂ ಬೇರೆ ಊರಿಗೆ ಹೋದರು ಬಾಟಲ್ ನೀರು ಕುಡಿಯುತ್ತಾರೆ.
ಇಷ್ಟಕ್ಕೂ ನಾವೇಕೆ ಈ ನೀರಿನ ಬಗ್ಗೆ ಇಷ್ಟೋಂದು ಹೇಳುತ್ತಿದ್ದೇವೆ ಅಂದ್ರಾ. ಬೆಂಗಳೂರಿನಲ್ಲಿ ಕಾವೇರಿ ನೀರು ಎಂದು ಕಲುಷಿತ ನೀರು ಪೂರೈಕೆ ಆಗುತ್ತಿದೆ. ನಗರವಾಸಿಗಳೇ ಇನ್ನು ಕುಡಿಯುವ ಮುನ್ನ ನೀರನ್ನು ಒಮ್ಮೆ ನೋಡಿ ಕುಡಿದರೆ ಒಳ್ಳೆಯದು.
ಬೆಂಗಳೂರಿನ ಕಲ್ಯಾಣ ನರದಲ್ಲಿ ಕಾವೇರಿ ನೀರು ಅಂತ, ಕಲುಷಿತ ನೀರನ್ನು ಪೂರೈಸಲಾಗುತ್ತಿದೆ. ಈ ನೀರನ್ನು ಕುಡಿದ ಜನ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾಗುತ್ತದೆ. ಈ ಬಗ್ಗೆ ಸ್ಥಳೀಯರು ಧ್ವನಿ ಎತ್ತಿದರೂ ಸಹ ಕ್ಯಾರೇ ಎನ್ನುತ್ತಿಲ್ಲ. ಇಲ್ಲಿನ ನಿವಾಸಿಗಳು ಮೊದಲು ನೀರನ್ನು ಶೇಖರಿಸಿ ಕೊಳ್ಳಲು ಹೆಣಗಾಟ ನಡೆಸಿದರೆ, ನಂತರ ನೀರನ್ನು ಹೊರ ಹಾಕಲು ಕಷ್ಟ ಪಡುವ ಪರೀಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ಕಲುಷಿತ ನೀರು ಬರುತ್ತಿದ್ದೂ, ಇದನ್ನು ಕುಡಿದ ಸಾರ್ವಜನಿಕರು ಆಸ್ಪತ್ರೆಯ ಮೆಟ್ಟಿಲು ಹತ್ತುವಂತೆ ಮಾಡಿದೆ. ಈ ಬಗ್ಗೆ ದೂರು ನೀಡಿದ್ರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ಮುಕ್ತಿಗಾಗಿ ಜನ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಈ ಬಗ್ಗೆ ಜಲ ಮಂಡಳಿ ಜನರ ಕಷ್ಟ ಆಲಿಸದೇ ಇರುವುದು ನಿಜಕ್ಕೂ ನೋವಿನ ಸಂಗತಿ.