ಈ ಕಾಮುಕ ವ್ಯಕ್ತಿಯ ನಡವಳಿಕೆ ಕರ್ನಾಟಕ ಹೈ-ಕೋರ್ಟ್ ಆನ್ ಬೆಚ್ಚಿ ಬೆಳಿಸಿತು!!

0
934

ಬೆಂಗಳೂರು: ತಂದೆಯೇ ಮಗಳನ್ನು ಮೋಹಿಸುವುದು; ಪತ್ನಿಯ ಮೇಲೆಯೇ ಅಮಾನುಷವಾಗಿ ಅತ್ಯಾಚಾರವೆಸಗೋದು. ನಿರಂತರ ಕಾಮ ಕಿರುಕುಳ.. ಉಫ್.. ಎಂತೆಂಥಹಾ ವಿಚಿತ್ರಗಳು ಘಟಿಸುತ್ತೆ. ಜಗತ್ತು ಅಂತಹ ಹಲವು ವಿಚಿತ್ರಗಳಿಗೆ ಸಾಕ್ಷಿ. ಅಂತಹ ವಿಚಿತ್ರಗಳ ಪೈಶಾಚಿಕತೆಯ ಅನಾವರಣವಾಗೋದು ಆಯಾ ಘಟನೆಗಳು ಬೆಳಕಿಗೆ ಬಂದಾಗಲಷ್ಟೇ… ಇಂತಹದ್ದೇ ಒಂದು ಅಮಾನವೀಯ, ಪೈಶಾಚಿಕ ಕೃತ್ಯಕ್ಕೆ ಬೆಂಗಳೂರು ಸಾಕ್ಷಿಯಾಗಿದೆ.

ಅದು ಬೆಂಗಳೂರಿನಲ್ಲಿ ನೆಲೆಸಿದ್ದ ಒಂದು ಡಿಗ್ನಿಫೈಯ್ಡ್ ಕುಟುಂಬ. ಸಮಾಜದ ನಡುವೆ ಸಭ್ಯಸ್ಥ ಮುಖವಾಡ ತೊಟ್ಟು ಬದುಕುತ್ತಿದ್ದ ಆಕೆಯ ಗಂಡನ ಅಸಲೀ ಮುಖವನ್ನು ಆತನ ಪತ್ನಿ ಬಯಲು ಮಾಡುತ್ತಾಳೆ. ಆತ ವಿಕೃತ ಕಾಮಿ, ನಿರಂತರ ಸೆಕ್ಸ್ ಸುಖಕ್ಕಾಗಿ ಹಾತೊರೆಯುತ್ತಿದ್ದ ಆತ ತನ್ನ ಪತ್ನಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಾನೆ. ಪ್ರತಿ ನಿತ್ಯ ವಿಚಿತ್ರ ಭಂಗಿಯಲ್ಲಿ ದೇಹಸುಖ ಬಯಸುತ್ತಿದ್ದ ಆತನ ಮಾನಸಿಕ ಅವಸ್ಥೆಗೆ ಆಕೆ ಬಸವಳಿದು ಬಿಟ್ಟಿದ್ದಳು. ತನ್ನ ಪತಿಯ ವಿಕೃತ ಕಾಮದ ತೆವಲಿಗೆ ಬಸವಳಿದು ಬೆಂಡಾದ ಆಕೆ 11 ವರ್ಷಗಳ ಕಾಲ ಹೇಗೋ ಸಮಾಜಕ್ಕಂಜಿ ಆ ನರಕಯಾತನೆಯಲ್ಲೇ ಬದುಕ ಸಾಗಿಸುತ್ತಿದ್ದಳು. ಆಕೆಗೆ ಕೊನೆಗೂ ಸಹಿಸಲಾಗಲೇ ಇಲ್ಲ.. ಆಗ ಆಕೆ ಒಂದು ನಿರ್ಧಾರಕ್ಕೆ ಬರುತ್ತಾಳೆ. ಬೆಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿಯ ವಿರುದ್ಧವೇ ದೂರು ದಾಖಲಿಸುತ್ತಾಳೆ.. ಅದಕ್ಕೆ ಕಾರಣ…

ಇಂತಹಾ ವಿಕೃತ ಪತಿಯ ಮಾನಸಿಕ, ದೈಹಿಕ ಹಿಂಸೆಯನ್ನು ಸಹಿಸಿಕೊಂಡು ಬದುಕಿದ್ದ ಆಕೆಗೆ ಕೊನೆಗೂ ಸಹಿಸಲಾಗಲೇ ಇಲ್ಲ. ಅದಕ್ಕೆ ಕಾರಣ ತನ್ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳು. ಸದಾ ವಿಕೃತನಂತೆ ಕಾಮದ ತೆವಲಿನಲ್ಲಿ ಪತ್ನಿಯ ತೆಕ್ಕೆ ಸೇರುತ್ತಿದ್ದ ಆತನ ಕಣ್ಣು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಬಿದ್ದಿತ್ತು. ಮಗಳ ಮೇಲೆ ಲೈಂಗಿಕ ಕಿರುಕಿಳ ಶುರುವಿಟ್ಟುಕೊಳ್ಳುತ್ತಾನೆ ಈ ಕಾಮ ಪಿಶಾಚಿ. ಮಗಳ ಮುಂದೆ ಬೆತ್ತಲಾಗಿ ದೇಹ ಸುಖ ನೀಡುವಂತೆ ಪತ್ನಿಯನ್ನು ಪೀಡಿಸತೊಡಗುತ್ತಾನೆ. ಯಾವಾಗ ತನ್ನ ಮಗಳ ಮೇಲೆ ಲೈಂಗಿಕವಾಗಿ ಪೀಡಿಸತೊಡಗಿದನೋ ಸಹಿಸಿಕೊಳ್ಳದ ಆತನ ಪತ್ನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ದಾಖಲಿಸ್ತಾಳೆ.

ಫೋಸ್ಕೋ ಸಹಿತ ಹಲವು ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು. ಆರೋಪಿ ಸೈಕೋ ಕಾಮುಕನನ್ನು ಬಂಧಿಸಿದ್ದರು. ಮೊನ್ನೆ ಮೊನ್ನೆಯಷ್ಟೇ ಜಾಮೀನಿಗಾಗಿ ಆತ ಅರ್ಜಿ ಹಾಕಿಕೊಂಡು ಕಾದಿದ್ದ. ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಾಧೀಶರೇ ಈತನ ಕಾಮುಕ ವರ್ತನೆಗೆ ಶಾಕ್ ಆಗಿದ್ದಾರೆ.. ಸಧ್ಯ ಹೈಕೋರ್ಟ್ ಈತನ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕಾಮುಕನ ಪರ ವಕೀಲ, ‘ತನ್ನ ಕಕ್ಷಿಧಾರನ ಮೇಲೆ ಹನ್ನೊಂದು ವರ್ಷಗಳ ನಂತರ ಪಿತೂರಿಯಿಂದ ದೂರು ದಾಖಲಿಸಿ ಸಮಾಜದಲ್ಲಿ ತತನಿಗಿರುವ ಗೌರವಕ್ಕೆ ಧಕ್ಕೆ ತರಳು ಆತನ ಪತ್ನಿ ಯತ್ನಿಸಿದ್ದಳು. ಲೈಂಗಿಕ ಶೋಷಣೆಯ ದೂರು ದಾಖಲಿಸಲು ಹನ್ನೊಂದು ವರುಷಗಳು ಬೇಕೇ?’ ಎಂಬ ನಿಟ್ಟಿನಲ್ಲಿ ವಾದ ಮುಂದಿಟ್ಟಿದ್ದರು. ಸಂತ್ರಸ್ಥೆಯ ಪರ ವಾದಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಸಮಾಜಕ್ಕೆ ಅಂಜಿ ಮಹಿಳೆ ದೂರು ನೀಡಿರಲಿಲ್ಲ; ಯಾವಾಗ ತನ್ನ ಮಗಳ ಮೇಲೆಯೇ ದೌರ್ಜನ್ಯ ಶುರುವಿಟ್ಟನೋ ಆಗ ಮಹಿಳೆ ವಿಧಿ ಇಲ್ಲದೆ ದೂರು ದಾಖಲಿಸಿದ್ದಾರೆ. ಅಲ್ಲದೆ ವೈದ್ಯಕೀಯ ತಪಾಸಣೆಯಲ್ಲೂ ಅಪ್ರಾಪ್ತೆಯ ಮೇಲೆ ದೌರ್ಜನ್ಯ ನಡೆದಿರುವುದು ಧೃಡಪಟ್ಟಿದೆ’ ಎಂಬ ವಾದ ಹೂಡಿದ್ದರಲ್ಲದೆ ಯಾವುದೇ ಕಾರಣಕ್ಕೂ ಸೈಕೋ ಕಾಮುಕನಿಗೆ ಜಾಮೀನು ನೀಡದಂತೆ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಸಧ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಪುರಸ್ಕರಿಸಿದ ಘನ ನ್ಯಾಯಾಲಯ ಕಾಮುಕನ ಜಾಮೀನು ಅರ್ಜಿ ತಿರಸ್ಕರಿಸಿದೆ.

(ವಿಷಯ ಸೂಚನೆ: ಫೋಸ್ಕೋ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತಿಲ್ಲ. ಉದಾಹರಣೆಗೆ: ಆರೋಪಿಯ ಹೆಸರು, ಸಂತ್ರಸ್ಥೆಯ ಸುಳಿವು ಹೀಗೆ)