ಲೈಂಗಿಕತೆಯಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಸಕ್ತಿಯಂತೆ; ಯಾಕೆ ಅಂತ ಈ ಮಾಹಿತಿ ನೋಡಿ..

0
3145

ಲೈಂಗಿಕ ಕ್ರಿಯೆ ಎನ್ನುವುದು ಪ್ರತಿಯೊಂದು ಜೀವಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ನಿಯಮವಾಗಿದೆ. ಅದರಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮತ್ತು ಹೆಚ್ಚಿನ ತಿಳಿವಳಿಕೆ ಹೊಂದಿದ ಜೀವಿ ಮಾನವನಾಗಿದ್ದಾನೆ. ಇದು ಗಂಡು ಹೆಣ್ಣು ಎನ್ನದೆ ಲೈಂಗಿಕ ಆಸಕ್ತಿ ಎಲ್ಲರಲ್ಲೂ ಮೂಡುತ್ತದೆ. ಈ ವಿಚಾರದಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಯೆಂದರೆ ಮಹಿಳೆಯರಿಗೆ ಲೈಂಗಿಕ ಆಸಕ್ತಿ ಹೆಚ್ಚೋ ಇಲ್ಲ ಪುರುಷರಿಗೆ ಹೆಚ್ಚೋ? ಅಂತ ಎಲ್ಲರಲ್ಲಿರುವ ಕುತೂಹಲವಾಗಿದೆ. ಇದಕ್ಕೆ ಹಲವಾರು ಉತ್ತರಗಳು ಪುರುಷರಿಗೆ ಅಥವಾ ಮಹಿಳೆಯರಿಗೆ ಅಂತ ಬಂದರು ಸರಿಯಾದ ಉತ್ತರ ಮಹಿಳೆಯರಿಗೆ ಎನ್ನುವುದು ಸತ್ಯವಾಗಿದೇ ಅದು ಯಾಕೆ ಅಂತ ಈ ಕೆಳಗಿನ ಕಾರಣಗಳನ್ನು ನೋಡಿ.

ಹೌದು ನಮ್ಮ ಭಾರತೀಯರಲ್ಲಿ ಇವತ್ತಿಗೂ ಮಹಿಳೆಯರು ಬಹಿರಂಗವಾಗಿ ‘ಸೆಕ್ಸ್’ಬಗ್ಗೆ ಮಾತನಾಡುವಂತಿಲ್ಲ. ಒಂದೊಮ್ಮೆ ಸೆಕ್ಸ್ ಬಗ್ಗೆ ಚರ್ಚೆ ಮಾಡಿದ್ದಲ್ಲಿ ಅಂಥ ಮಹಿಳೆಯರನ್ನು ‘ಕೆಟ್ಟ’ ಮಹಿಳೆ ಎಂದು ಸಮಾಜದಲ್ಲಿ ಗುರುತಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಮಹಿಳೆಯರ ಕಾಮಾಸಕ್ತಿ ಪುರುಷರಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಅವರ ಭಾವನೆಗಳನ್ನೂ ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಪುರುಷರಿಗಿಂತ ಮಹಿಳೆಯರಲ್ಲಿನ ಕಾಮಾಸಕ್ತಿ ಜಾಸ್ತಿ ಎಂಬುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಅದರಂತೆ ಮಹಿಳೆಯರಲ್ಲಿ ಯಾಕೆ ಲೈಂಗಿಕ ಆಸಕ್ತಿ ಹೆಚ್ಚು ಎನ್ನುವುದಕ್ಕೆ ಪ್ರಮುಖ್ಯ ಕಾರಣಗಳು ಇಲ್ಲಿವೆ ನೋಡಿ.

ಸ್ಪರ್ಶದಿಂದ:

ಮಹಿಳೆಯರು ಮೊದಲು ಭಾವನೆಗಳ ಮೂಲಕ ಸಂಬಂಧವನ್ನು ಬೆಸೆದು ನಂತರ ಸೆಕ್ಸ್‌ಗೆ ಅಣಿಯಾಗುತ್ತಾರೆ. ಆದರೆ ಈ ಕ್ರಿಯೆ ಪುರುಷರಲ್ಲಿ ವಿಭಿನ್ನವಾಗಿರುತ್ತದೆ. ಪುರುಷ ಮೊದಲು ಸೆಕ್ಸ್ ಮುಗಿಸಿ ನಂತರ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಮಾತನಾಡಲು ಬಯಸುತ್ತಾನೆ. ಈ ವಿಷಯದಲ್ಲಿ ಮಹಿಳೆಯರು ಬಹಳ ಜಾಗೃತಿ ವಹಿಸುತ್ತಾರೆ. ಅವರು ಮೊದಲಿಗೆ ಸ್ಪರ್ಶ, ಅದರ ನಂತರ ಮಾತು ಹಾಗೂ ಕೊನೆಯದಾಗಿ ಸೆಕ್ಸ್ ನಡೆಯಬೇಕೆಂದು ಬಯಸುತ್ತಾರೆ. ಪರಾಕಾಷ್ಠೆ ತಲುಪಿದ ನಂತರವೂ ಮತ್ತೆ ಮಹಿಳೆಯರಲ್ಲಿ ಬೇಗನೆ ಕಾಮಾಸಕ್ತಿ ಹುಟ್ಟಿಕೊಳ್ಳುವುದು ಸಾಧ್ಯ.

ವಿಭಿನ್ನ ಲೈಂಗಿಕ ಆಸಕ್ತಿ:

ಸೆಕ್ಸ್ ವಿಷಯದಲ್ಲಿ ಮಹಿಳೆಯರು ವಿಭಿನ್ನ ಆಯ್ಕೆಗಳಿಗೆ ಮುಕ್ತ ಮನಸ್ಸು ಹೊಂದಿರುತ್ತಾರೆ. ಪುರುಷ-ಪುರುಷ ಸೆಕ್ಸ್, ಪುರುಷ-ಮಹಿಳೆ ಸೆಕ್ಸ್ ಮತ್ತು ಮಹಿಳೆ-ಮಹಿಳೆ ಸೆಕ್ಸ್‌ಗಳನ್ನು ಕೆಲ ಆಯ್ದ ಪುರುಷರಿಗೆ ತೋರಿಸಿದಾಗ ಅವರು ಪುರುಷ-ಪುರುಷ ಸೆಕ್ಸ್ ಬಗ್ಗೆ ಅಂಥ ಆಸಕ್ತಿಯನ್ನು ತೋರಲಿಲ್ಲ. ಆದರೆ ಮಹಿಳೆ ಇರುವ ರೀತಿಗಳನ್ನು ಮಾತ್ರ ಅವರು ಆಸಕ್ತಿಯಿಂದ ನೋಡಿದರು. ಇದೇ ಪ್ರಯೋಗವನ್ನು ಮಹಿಳೆಯರ ಮೇಲೆ ಮಾಡಿದಾಗ ಅವರು ಮೂರು ವಿಧಗಳ ಸೆಕ್ಸ್ ಬಗ್ಗೆಯೂ ಆಸಕ್ತಿಯಿಂದ ವೀಕ್ಷಿಸಿದರು. ಮಹಿಳೆಯರಿಗೆ ಲೈಂಗಿಕ ಸುಖ ಯಾರಿಂದ ಸಿಗುತ್ತದೆ ಎನ್ನುವುದಕ್ಕಿಂತ ಒಟ್ಟಾರೆ ಸುಖ ಸಿಗುವುದು ಮುಖ್ಯವಂತೆ.

ಹೊಸ ರಕ್ತದ ಬೆಳವಣಿಗೆ:

ಮಹಿಳೆಯರಲ್ಲಿ ಮುಟ್ಟಿನ ನಂತರ ಹೊಸ ರಕ್ತದ ಚಲನೆಯಾಗುತ್ತದೆ. ಇದರಿಂದ ವಿಚಾರ ಶಕ್ತಿ ವಿಶಾಲವಾದ ಭಾವನೆಗಳು ಮೂಡಿ ಲೈಂಗಿಕ ಆಸಕ್ತಿ ಹೆಚ್ಚುತ್ತದೆ. ಹಾಗೆಯೇ ಮಹಿಳೆಯರು ಹೆಚ್ಚು ವ್ಯಯಕ್ತಿಕ ಸುಖದ ಬಗ್ಗೆ ಯೋಚನೆಯಲ್ಲಿ ಹೆಚ್ಚು ತೊಡಗುವುದರಿಂದ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

ತೀವ್ರ ಕಾಮಾಸಕ್ತಿ:

ಒಂದು ಬಾರಿ ಮಹಿಳೆ ತನ್ನ ಪುರುಷ ಸಂಗಾತಿಯನ್ನು ಆರಿಸಿಕೊಂಡ ನಂತರ ಅವರು ಆತನಿಂದ ಕೇವಲ ಸೆಕ್ಸ್ ಮಾತ್ರವಲ್ಲದೆ ಇನ್ನಿತರ ಎಲ್ಲ ಬಯಕೆಗಳನ್ನೂ ಈಡೇರಿಸಿಕೊಳ್ಳಲು ಬಯಸುತ್ತಾರಂತೆ. ಒಬ್ಬ ಪುರುಷನೊಂದಿಗೆ ಒಂದು ಬಾರಿ ಲೈಂಗಿಕ ಜೀವನ ಆರಂಭಿಸಿದ ನಂತರ ತನಗೆ ಬೇಕಾದ ಎಲ್ಲ ಲೈಂಗಿಕ ಕಾಮನೆಗಳನ್ನು ಆತನಿಂದಲೇ ಈಡೇರಿಸಿಕೊಳ್ಳಲು ಮಹಿಳೆಯರು ಬಯಸುತ್ತಾರೆ ಎನ್ನಲಾಗಿದೆ.

ಲೈಂಗಿಕ ಆಕರ್ಷಣೆ:

ಮಹಿಳೆಯರ ದೇಹದ ಬಗ್ಗೆ ಪುರುಷರಲ್ಲಿ ಲೈಂಗಿಕ ಕಾಮನೆಗಳು ಜಾಸ್ತಿಯಾಗಿರುತ್ತವೆ. ಆದರೆ ಪುರುಷರ ದೇಹದ ಬಗ್ಗೆ ಮಹಿಳೆಯರಲ್ಲಿ ಸೆಕ್ಸ್ ಆಕರ್ಷಣೆ ಕಡಿಮೆಯಾಗಿದ್ದರೂ ಕೆಲ ಇತರ ಪ್ರಮುಖ ಅಂಶಗಳಿಂದ ಅವರಲ್ಲಿ ‘ಸೆಕ್ಸ್’ ಕಾಮನೆ ಹೆಚ್ಚಾಗಿರುತ್ತದೆ.

ಸೂಕ್ತವಾದ ಸಂಬಂಧದಲ್ಲಿ ಸೆಕ್ಸ್ ಪರಾಕಾಷ್ಠೆ:

ಮಹಿಳೆಯರ ಸೆಕ್ಸ್ ಭಾವನೆಗಳು ಪುರುಷರಿಗಿಂತ ವಿಭಿನ್ನವಾಗಿದ್ದು, ಅವರು ಏಕಕಾಲಕ್ಕೆ ಹಲವಾರು ರೀತಿಯ ಲೈಂಗಿಕ ಪರಾಕಾಷ್ಠೆಯ ಸುಖಗಳನ್ನು ಅನುಭವಿಸಬಲ್ಲರು. ಒಬ್ಬ ಪುರುಷ ಒಂದೇ ಮಿಲನ ಮಹೋತ್ಸವದಲ್ಲಿ ಆಕೆಗೆ ಬೇಕಾದ ಎಲ್ಲ ಸುಖ ನೀಡುವುದು ತುಸು ಕಷ್ಟವೆಂದೇ ಹೇಳಲಾಗಿದೆ.

ಮಧ್ಯ ವಯಸ್ಸಿನ ಬೆಳವಣಿಗೆ:

20 ರ ಹದಿಹರೆಯದ ಹುಡುಗಿಗಿಂತ ಮಧ್ಯ ವಯಸ್ಸು ಸಮೀಪಿಸುತ್ತಿರುವ ಹೆಣ್ಣು ಮಕ್ಕಳಿಗೆ ಸೆಕ್ಸ್ ಆಸಕ್ತಿ ಜಾಸ್ತಿಯಾಗಿರುತ್ತದಂತೆ. ಮೆನೊಪಾಸ್ ಸಮಯ ಹತ್ತಿರ ಬರುತ್ತಿದ್ದಂತೆಯೇ ಇನ್ನು ತಮ್ಮ ಸೆಕ್ಸ್ ಆಸಕ್ತಿ ಕಡಿಮೆ ಆಗಬಹುದು ಎಂಬ ಆತಂಕದಿಂದ ಅವರು ಆದಷ್ಟು ಬೇಗ ಹೆಚ್ಚು ಸೆಕ್ಸ್ ಅನುಭವಿಸಲು ಬಯಸುತ್ತಾರಂತೆ.