ಬಾಕ್ಸ್ ಆಫೀಸ್-ನಲ್ಲಿ ಶಾರುಖ್ ಖಾನ್-ರ Zero ಚಿತ್ರವನ್ನೂ ಹಿಂದಿಕ್ಕಿ ಮುನ್ನುಗ್ಗುತಿದೆ ಕೆ.ಜಿ.ಎಫ್. ಕನ್ನಡಿಗರ ಚಿತ್ರ ಯಾರಿಗಿಂತ ಕಮ್ಮಿಯಿಲ್ಲ ಅನ್ನೋದನ್ನು ಸಾಧಿಸಿಯೇ ಬಿಟ್ಟರು ಯಶ್!!

0
380

ಶಾರುಖ್ ಖಾನ್ ಅವರ ಝೀರೋ ಚಿತ್ರವನ್ನು ಕನ್ನಡ ಚಿತ್ರ ಕೆ.ಜಿ.ಎಫ್. ಬಾಕ್ಸ್ ಆಫೀಸ್ ಕಲೆಕ್ಷನ್-ನಲ್ಲಿ ಹಿಂದಿಕ್ಕಿದೆ. ನಿರ್ದೇಶಕ ಆನಾಂಡ್ ಎಲ್ ರಾಯ್ ಅವರ ‘ಝೀರೋ’ ಸಿನಿಮಾ ಶಾರೂಖ್ ಖಾನ್ ಅವರ ವೃತ್ತಿಜೀವನದ ಅತ್ಯಂತ ದುಬಾರಿ ಚಿತ್ರವಾಗಿತ್ತು. ಇಷ್ಟೊಂದು ಹವಾದಲ್ಲಿರುವ ಚಿತ್ರಕ್ಕಿಂತ ಯಶ್ ಅವರ ಕನ್ನಡ ಚಿತ್ರ ಕೆ.ಜಿ.ಎಫ್. ಹೆಚ್ಚು ಹಣಗಳಿಸಿ ಬಾಲಿವುಡ್ ಸಿನಿಮಾವನ್ನು ಝೀರೋ ಮಾಡಿದೆ ಇದು ನಿಜಕ್ಕೂ ಕನ್ನಡ ಚಿತ್ರರಂಗದ ಸಾಧನೆಯಾಗಿದೆ. ಕನ್ನಡ ಚಲನಚಿತ್ರೋದ್ಯಮದ ದಾಖಲಾತಿ ಬಜಟ್-ನಲ್ಲಿ ರೂ 59.61 ಕೋಟಿ, ಗಳಿಸಿದರೆ. ಝೀರೊ ಆರಂಭಿಕ ವಾರಾಂತ್ಯದ ಕಲೆಕ್ಷನ್ 59.07 ಕೋಟಿ ರೂ. ತಲುಪಿದೆ.

ಕೆಜಿಎಫ್ ಸಿನಿಮಾ ಬಹುಭಾಷೆಯಲ್ಲಿ ಬಿಡುಗಡೆಯಾಗಿದೆ ಹಾಗೆಯೇ 0 ಸಿನಿಮಾ ಕೂಡ ಬಿಡುಗಡೆಯಾಗಿದೆ. ಹಿಂದಿ ಡಬ್ ಆವೃತ್ತಿಯಲ್ಲಿ 10 ಕೋಟಿ ರೂ. ಗಡಿ ದಾಟಿದೇ ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ. ಕನ್ನಡ ಕೆಜಿಎಫ್ ಗಳಿಕೆ ದಿನದಿಂದ ದಿನಕ್ಕೆ ಬೆಳಿತ್ತಾನೆ ಹೋಗಿದ್ದು ಶುಕ್ರವಾರ 18.1 ಕೋಟಿ ರೂ., ಶನಿವಾರ 19.2 ಕೋಟಿ ರೂ. ಮತ್ತು ಭಾನುವಾರ 21.8 ಕೋಟಿ ರೂ. ಸೋಮವಾರ 19.3 ಕೋಟಿ ರೂ ಗಳಿಸಿದೆ. ಹಿಂದಿ ಸಿನಿಮಾ ಝೀರೊ 20.1 ಕೋಟಿ ರೂ.ಗೆ ಪ್ರಾರಂಭವಾಗಿ, ಶನಿವಾರ ಮತ್ತು ಭಾನುವಾರ 18.2 ಕೋಟಿ ರೂ. ಮತ್ತು 20.7 ಕೋಟಿ ರೂ. ಗಳಿಸಿ ಕನ್ನಡ ಸಿನಿಮಾ ಮುಂದೆ ತಲೆ ತಗ್ಗಿಸಿದೆ.

ಎರಡು ಚಲನಚಿತ್ರಗಳು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಕೆಜಿಎಫ್ 50 ಕೋಟಿ ರೂಪಾಯಿಗಳ ಬಜೆಟ್-ನಲ್ಲಿ ನಿರ್ಮಾಣಗೊಂಡಿದು, ಶಾರುಕ್ ಖಾನ್ ಅವರ ಝೀರೋ ಸಿನಿಮಾ 200 ಕೋಟಿ ರೂ. ಬಜೆಟ್ -ನಲ್ಲಿ ರ್ಮಾಣಗೊಂಡಿದೆ. ಕ್ರಿಸ್ಮಸ್ ನಂತರ ಚಲನಚಿತ್ರದ ‘ನೈಜ ಪರೀಕ್ಷೆ’ ಬುಧವಾರ ಮತ್ತು ಗುರುವಾರ ನಡೆಯಲಿದೆ
ಎಂದು ತಾರಾನ್ ಹೇಳಿದ್ದಾರೆ.

ಅಮೆರಿಕದಲ್ಲೂ ಕೆಜಿಎಫ್ ಹವಾ ಜೋರಾಗಿದೆ. ಬೇರೆ ದಕ್ಷಿಣ ಭಾರತೀಯ ಭಾಷೆಯ ಹೊಸ ಸಿನಿಮಾಗಳಿಗೆ ಹೋಲಿಸಿದರೆ ಕೆಜಿಎಫ್​ನ ವೀಕೆಂಡ್ ಕಲೆಕ್ಷನ್ ಜೋರಾಗಿದೆ. ಮೊದಲ ವೀಕೆಂಡ್​ನಲ್ಲಿ ಅಮೆರಿಕದಲ್ಲಿ ಕೆಜಿಎಫ್ 2 ಕೋಟಿ ರೂ.ಗೂ ಹೆಚ್ಚು ಹಣ ಬಾಚಿದೆ.

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕೆಜಿಎಫ್ ಹವಾ:

ತಮಿಳುನಾಡಿನಲ್ಲಿ ಕೆಜಿಎಫ್ ದಿನೇದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಬಿಡುಗಡೆಯಾಗಿರುವ ಥಿಯೇಟರ್​ಗಳು ಬಹುತೇಕ ಹೌಸ್​ಫುಲ್ ಹೋಗುತ್ತಿದ್ದು, ಮುಂಬರುವ ವಾರಗಳಲ್ಲಿ ಥಿಯೇಟರ್​ಗಳ ಸಂಖ್ಯೆ ಹೆಚ್ಚಾಗಲಿದೆ. ಸದ್ಯಕ್ಕೆ ಚೆನ್ನೈನಲ್ಲಿ ಕೆಜಿಎಫ್ ನಂ. 9ರಲ್ಲಿದೆಯಾದರೂ ಮುಂದಿನ ವಾರ ಸ್ಥಾನಮಾನ ಹೆಚ್ಚಾಗುವ ನಿರೀಕ್ಷೆ ಇದೆ. ಹಿಂದಿ ಕೆಜಿಎಫ್ ಕೂಡ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಮಲಯಾಳಂ ಪ್ರೇಕ್ಷಕರಿಗೂ ಕೆಜಿಎಫ್ ಇಷ್ಟವಾಗಿದೆ. ಕರ್ನಾಟಕದಲ್ಲಂತೂ ಅಣ್ತಮ್ಮನ ಹವಾ ಕೇಳೋದೇ ಬೇಡ. ಹಿಂದಿ ಕೆಜಿಎಫ್​ನ ಬಿಡುಗಡೆಯಲ್ಲಿ ಭಾಗಿಯಾಗಿರುವ ಫರ್ಹಾನ್ ಅಖ್ತರ್ ಅವರು ಸಿನಿಮಾದ ಯಶಸ್ಸಿಗೆ ಫುಲ್ ಖುಷ್ ಆಗಿದ್ದಾರೆ.

ಒಟ್ಟಾರೆ ಕೆಜಿಎಫ್ ಸಿನಿಮಾ ಬಿಡುಗಡೆಯಾದ 4 ದಿನದಲ್ಲಿ ಮಾಡಿದ ನಿವ್ವಳ ಗಳಿಕೆ ಸುಮಾರು 80 ಕೋಟಿಯ ಹತ್ತಿರದಲ್ಲಿದೆ. ಅದರ ಒಟ್ಟಾರೆ ಕಲೆಕ್ಷನ್ 100 ಕೋಟಿಗೂ ಹೆಚ್ಚು ಎಂಬ ವರದಿಗಳಿವೆ. ಈ ವಿಚಾರದಲ್ಲಿ ಶಾರುಕ್ ಖಾನ್ ಅಭಿನಯದ ಝೀರೋ ಸಿನಿಮಾವನ್ನೂ ಕೆಜಿಎಫ್ ಹಿಂದಿಕ್ಕಿದೆ. ಜೀರೋ ಸಿನಿಮಾ 4,380 ಪರದೆಗಳಲ್ಲಿ ತೆರೆಕಂಡರೆ, ಕೆಜಿಎಫ್ 2,460 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಕಡಿಮೆ ಕಡೆ ಬಿಡುಗಡೆಯಾದರೂ ಗಳಿಕೆಯಲ್ಲಿ ಕೆಜಿಎಫ್​ಗೆ ಸರಿಸಾಟಿ ಇಲ್ಲವಾಗಿದೆ ಎಂದು ತಿಳಿದುಬಂದಿದೆ.