ರಮ್ಯಾ ರವರ ಅಕ್ಕ ಸಿಕ್ಕಿದ್ದಾರೆ !

0
1593

ಕುಡಿಯುವ ನೀರು ಬಿಟ್ಟರೆ ಕೊನೆಗೆ ಹನಿ ಹನಿ ನೀರಿಗೂ ತತ್ವಾರ ಪಡಬೇಕಾಗುತ್ತದೆ ಎಂದು ಕನ್ನಡಿಗರು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ, ಜೊತೆಗೆ “ಬಿಜೆಪಿ ನಾಯಕರು ಸರ್ವಪಕ್ಷ ಸಭೆಗೆ ಬಂದಿಲ್ಲ‌ ಯಾಕೆ ಬಿಜೆಪಿ ನಾಯಕರು‌ ಬಂದಿಲ್ಲ ಗೊತ್ತಿಲ್ಲ. ನಾವು ಆಹ್ವಾನ ನೀಡಿದ್ವಿ” ಸಿಎಂ ಸಿದ್ದರಾಮಯ್ಯ ಅಸಹಾಯಕ ಹೇಳಿಕೆ ನೀಡುತ್ತಿದ್ದಾರೆ.

manish_shaina

ಸರ್ವಪಕ್ಷಗಳ ಸಭೆಗೆ ಹೋದರೆ ನ್ಯಾಯಾಂಗ ನಿಂದನೆ ಆಗುತ್ತೆ ಎಂದು ಹೇಳಿಕೆ ನೀಡಿ ಬಿಜೆಪಿ ಹೊರತುಪಡಿಸಿ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ರು ಎಂಬುದು ಹಳೆಯ ಸುದ್ದಿ, ಈಗ ತನ್ನ ವಕ್ತಾರೆಯ ಮೂಲಕ ಮತ್ತೊಂದು ಹೇಳಿಕೆ ಕೊಡಿಸಿ ಮತ್ತೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. “ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ, ಕುಡಿವ ನೀರಿಗೂ ತತ್ವಾರವಾಗುತ್ತಿದೆ ಎಂದು ಕರ್ನಾಟಕ ಹೇಳುತ್ತಿದ್ದರೆ, ಬಿಜೆಪಿ ರಾಷ್ಟ್ರೀಯ ವಕ್ತಾರೆ ಎನ್‌.ಸಿ. ಶೈನಾ ಅವರು ಸ್ವಾರ್ಥವನ್ನು ಬದಿಗಿಟ್ಟು ಕರ್ನಾಟಕ ತಮಿಳುನಾಡಿಗೆ ನೀರು ಬಿಡಬೇಕೆಂದು ಆಗ್ರಹಿಸಿದ್ದಾರೆ.”

hello-magazine-coffee-table-book-launch-5

“ಸುಪ್ರೀಂಕೋರ್‌r ಕರ್ನಾಟಕ ಸರ್ಕಾರಕ್ಕೆ ನೀರನ್ನು ಬಿಡುವಂತೆ ಸ್ಪಷ್ಟವಾಗಿ ಆದೇಶಿಸಿದೆ. ಸ್ವಾರ್ಥವನ್ನು ಬದಿಗೊತ್ತಿ ಆ ರಾಜ್ಯ ನೀರು ಬಿಡಬೇಕು. ಭಾರತ ಒಂದೇ ದೇಶ ಎಂದು ಕರ್ನಾಟಕ ಮನಗಾಣಬೇಕು” ಎಂದು ಹೇಳಿದ್ದಾರೆಂದು
ಮಾಧ್ಯಮಗಳು ವರದಿ ಮಾಡಿವೆ.

hpse_fullsize__2131572129_varsha-usgaonkar-at-shaina-nc-preview-for-pidilite-show-in-mumbai-on-26th-feb-2015-14_54f06d5be3be1

ದಿನಕ್ಕೊಂದು ಪಾರ್ಟಿಯಲ್ಲಿ ಭಾಗವಹಿಸುತ್ತಾ, ಚೀನಿ ತಾರೆಯರೊಂದಿಗೆ ರಾಂಪ್ ವಾಕ್ ಮಾಡಿಕೊಂಡು, ಪಕ್ಷದ ಹವಾನಿಯಂತ್ರಿತ ಕಚೇರಿಯಲ್ಲಿ ಕುತ್ಕೊಂಡು, ಗುಡ್ ಡೇ ಬಿಸ್ಕೆಟ್ ಮೇಯುತ್ತಾ, ಬಿಸ್ಲೇರಿ ನೀರು ಕುಡಿಯುತ್ತ ತನ್ನ ‘ಮೂರ್ಖತನದ ಪ್ರದರ್ಶನ’ ಮಾಡುತ್ತಿರುವ ಬಿ.ಜೆ.ಪಿ ಪಕ್ಷದ ವಕ್ತಾರೆ ಏನ್.ಸಿ.ಶೈನಾ-ರವರು ರಮ್ಯಾ ರವರ ‘elite league’ ಸೇರಿದ್ದಾರೆ. ಇಷ್ಟು ದಿನ ರಮ್ಯಾ ಅವರ ತಲೆ ಬುಡವಿಲ್ಲ ಹೇಳಿಕೆಗಳಿಗೆ ಕಿವಿಗೊಟ್ಟು ಹೈರಾಣಾಗಿದ್ದ ಕನ್ನಡಿಗ ಇನ್ಮೇಲೆ ಈಕೆಯ ವಿವಾದಾತ್ಮಕ ಹೇಳಿಕೆಗಳಿಗೆ ತಲೆ ಕೊಡಬೇಕೋ…? ಕಿವಿಕೊಡಬೇಕೋ…? ತಿಳಿಯುತ್ತಿಲ್ಲ

-ಗಿರೀಶ್ ಗೌಡ