ನಿಮ್ಮನ್ನು ನೆನೆಸಿಕೊಳ್ಳದ ದಿನವೇ ಇಲ್ಲ ಶಂಕರಣ್ಣ

0
1511

ಮೂಲ ಕರ್ತೃ :  

ಶಂಕರನಾಗ್ ಅವರು ನಮ್ಮನ್ನು ಅಗಲಿ ದಿನ ಇಂದು. ಅವರು ಬದುಕಿದ್ದರೆ? ಬಹುತೇಕ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಿರುತ್ತಾರೆ. ಕಾರಣ ಅವರು ಶಂಕರ್ನಾಗರ ಕಟ್ಟೆ ಅರ್ಥಾತ್ ‘ಶಂಕರ್ ನಾಗ್’! ಈ ಹೆಸರಿಗೆ ಹೆಚ್ಚಿನ ವಿವರಣೆ ಬೇಕಾಗಿಲ್ಲ. ಅದೇ ಎಲ್ಲವನ್ನೂ ಹೇಳುತ್ತದೆ. ಬದುಕಿದ್ದು ಕೇವಲ 30 ವರ್ಷ ಮಾತ್ರ. ಆದರೆ ಅಷ್ಟರಲ್ಲೇ ಮಾಡಿದ ಸಾಧನೆ ಅಗಾಧ

1

ಉಡುಪಿಯ ಸಾಧಾರಣ ಕುಟುಂಬದಲ್ಲಿ ಜನಿಸಿದ ಶಂಕರ್. ಸಾಧಾರಣ ಶಾಲೆಯಲ್ಲಿ ಕಲಿತರು. ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಾ ತನ್ನ ಕಾಲೇಜಿನ ಫೀಸ್ ಕಟ್ಟಿ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದೆ ಅವಕಾಶಗಳನ್ನು ತಾವೇ ಸೃಷ್ಟಿ ಮಾಡಿಕೊಂಡರು. ಆ ಶಕ್ತಿ ಅವರಲ್ಲಿತ್ತು.

ಕಪ್ಪು ಬಿಳುಪಿನ ಟಿವಿಯಲ್ಲಿ ಮಾಲ್ಗುಡಿ ಡೇಸ್ ಎಂಬ ಧಾರಾವಾಹಿ ಪ್ರತಿನಿತ್ಯವೂ ರಾತ್ರಿ ಹೊತ್ತು ಪ್ರಸಾರವಾಗುತ್ತಿತ್ತು.
ಮಾಲ್ಗುಡಿ ಡೇಸ್ ಭಾರತೀಯ ಧಾರಾವಾಹಿ ಕ್ಷೇತ್ರದಲ್ಲೊಂದು ಕ್ರಾಂತಿ. ಆ ಕ್ರಾಂತಿಯ ಹರಿಕಾರ ನಮ್ಮ ಶಂಕರ್ ನಾಗ್. ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಯನ್ನು ಅದೇ ಹೆಸರಿನಲ್ಲಿ ಧಾರಾವಾಹಿಯಾಗಿ ನಮ್ಮದೇ ಕನ್ನಡ ನಾಡಿನ ಆಗುಂಬೆಯಲ್ಲಿ ಚಿತ್ರೀಕರಿಸಿ ಡಿಡಿ1ರ ಮೂಲಕ ಭಾರತದಾದ್ಯಂತ ಪ್ರಸಾರ ಕಂಡು ಭಾರೀ ಜನಮೆಚ್ಚುಗೆ ಗಳಿಸಿ ಹಲವಾರು ಬಾರಿ ಮರು ಪ್ರಸಾರ ಕಂಡ ಧಾರಾವಾಹಿ ಅದು. ಆ ಮೂಲಕ ಶಂಕರ್‌ನಾಗ್ ಕೇವಲ ಕನ್ನಡ, ಮರಾಠಿ, ಹಿಂದಿ ಮಾತ್ರವಲ್ಲ. ಪ್ರತಿ ಭಾರತೀಯರ ಹೃದಯದಲ್ಲೂ ವಿರಾಜಮಾನರಾದರು. ಈಗಲೂ ಹಲವರು ಕೇಳುವುದುಂಟು ಮಾಲ್ಗುಡಿ ಎಲ್ಲಿದೆ ಎಂದು. ಅಸಲಿಗೆ ಅಂಥ ಊರೇ ಇಲ್ಲ ಎಂಬುದು ಈಗಲೂ ಹಲವರಿಗೆ ಗೊತ್ತಿಲ್ಲ, ಆಗುಂಬೆಯೇ ‘ಮಾಲ್ಗುಡಿ’ಯಾಗಿತ್ತು! ಅಂಥ ಜನಪ್ರಿಯತೆ ಸಿಕ್ಕಿತ್ತು ಮಾಲ್ಗುಡಿಗೆ!
ಶಂಕರ್‌ನಾಗ್ ಪ್ರಾಣಕ್ಕೆ ಸೆ.30ರಂದು ಅಪಾಯವಿದೆ ಎಂದು ಮೊದಲೇ ಜ್ಯೋತಿಷ್ಯರೊಬ್ಬರು ಶಂಕರ್ ತಾಯಿಯಲ್ಲಿ ಎಚ್ಚರಿಕೆ ನೀಡಿದ್ದರಂತೆ! ಅದಕ್ಕಾಗಿ ಶಂಕರ್- ಅನಂತ್ ಇಬ್ಬರನ್ನೂ ಜೋಪಾನವಾಗಿ ಕಾಪಾಡಲು ಮಾಡಿದ ಅಮ್ಮನ ಪ್ರಯತ್ನ ವ್ಯರ್ಥವಾಯಿತು. ಭವಿಷ್ಯ ನಿಜವಾಯಿತು ಎಂದು ಅನಂತನಾಗ್ ಹಿಂದೊಮ್ಮೆ ಹೇಳಿಕೊಂಡಿದ್ದರು.

2 3

ಶಂಕರ್ ನಾಗ್ – ಅನಂತನಾಗ್ ಸಹೋದರರು ಕಲಿತದ್ದು ಹಿಂದಿ, ಮರಾಠಿ, ಇಂಗ್ಲೀಷ್. ಮನೆ ಭಾಷೆ ಕೊಂಕಣಿಯಾದ್ದರಿಂದ ಕನ್ನಡ ಅಷ್ಟಕ್ಕಷ್ಟೇ. ಆದರೆ, ಅಣ್ಣ ತಮ್ಮ ಇಬ್ಬರೂ ಮನೆ ಭಾಷೆ ಕೊಂಕಣಿಯಾದರೂ ಬೆಂಗಳೂರಿಗೆ ಬಂದ ಮೇಲೆ ಮನೆಯಲ್ಲೂ ಕನ್ನಡ ಮಾತಾಡಿ ಕನ್ನಡ ಕರಗತ ಮಾಡಿಕೊಂಡು ಕನ್ನಡದಲ್ಲಿ ಬೆಳೆದ ಹಾದಿಯಿದೆಯಲ್ಲ ಅದು ಅನನ್ಯವಾದದ್ದು ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು.

5 4

ಮುಂಬೈನ ಇಂಗ್ಲೀಷ್ ನಾಟಕವೊಂದರಲ್ಲಿ ಅಮೋಘವಾಗಿ ಅಭಿನಯಿಸಿದ ಶಂಕರ್ ನಾಗ್ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಗಮನ ಸೆಳೆದರು. ನಂತರ ಕಾರ್ನಾಡ್ ತಮ್ಮ `ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ನಾಯಕನನ್ನಾಗಿ ಮಾಡಲು ಬೆಂಗಳೂರಿಗೆ ಶಂಕರನ್ನು ಕರೆತಂದರು. ಇದೇ ಶಂಕರ್ ನಾಗ್ ನಟಿಸಿದ ಮೊದಲ ಚಿತ್ರ. ಮೊದಲು ನಟಿಸಿದ ಚಿತ್ರ ‘ಸೆವೆನ್ ಸಮುರೈ’ ಎಂಬ ಜಪಾನೀಸ್ ಚಿತ್ರದಿಂದ ಪ್ರೇರಿತವಾಗಿತ್ತು

ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.

7 11

ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಸರ್ಕಾರದ ಮುಂದೆ ಇಟ್ಟಿದ್ದು ನಮ್ಮ ಶಂಕರ್ ನಾಗ್.ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ.

‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು.
ಆಟೋ ಚಾಲಕರು ಶಂಕರಣ್ಣನನ್ನು ದೇವರಂತೆ ಕಾಣುವುದಕ್ಕೆ ಕಾರಣ ‘ಆಟೋರಾಜ’ ಚಿತ್ರ

8 9

ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು . ಶಂಕರ್ ನಾಗ್ ಪತ್ನಿ ಹಾಗೂ ಓರ್ವ ಮಗಳಾದ ಕಾವ್ಯ ಅವರನ್ನು ಅಗಲಿದರು ಶಂಕರ್ ನಾಗ್

10

ಶಂಕರ್ ನಾಗ್ ರ ಇನ್ನೂ ಕೆಲವು ಚಿತ್ರಗಳು ನಿಮಗಾಗಿ
ವೀ ಮಿಸ್ ಯು ಶಂಕ್ರಣ್ಣ