ಸದ್ಯದಲ್ಲೇ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಭಾರೀ ಏರಿಕೆ; ಬೆಲೆಯಲ್ಲಿ ಎಷ್ಟೊಂದು ಏರಿಕೆ ಆಗಲಿದೆ ಗೊತ್ತಾ??

0
581

ಸ್ವಲ್ಪ ದಿನಗಳಿಂದ ಪೆಟ್ರೋಲ್ ಡೀಸೆಲ್ -ಗಳ ಬೆಲೆ ಸಾಧಾರಣವಾಗಿದ್ದು ನೆಮ್ಮದಿಯಿಂದ ಇದ್ದ ವಾಹನ ಮಾಲಿಕರಿಗೆ ಬಿಗ್ ಶಾಕ್-ಯೊಂದು ಕಾದಿದ್ದು, ಕೆಲವು ತಿಂಗಳ ಹಿಂದೆ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಮಾಲಿಕರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಇಂಧನ ದರದಲ್ಲಿ ಭಾರೀ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಲೀಟರ್​​ಗೆ 5 ರೂ.ನಿಂದ 10 ರೂ. ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

Also read: ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ, ಹಿಂದೆಂದೂ ನೋಡದ ಜನ ಸಾಗರ ಮೋದಿ ಜೊತೆಗಿತ್ತು!! “ಮೋದಿ ಮತ್ತೊಮ್ಮೆ”??

ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಲೆ ಏರಿಕೆಗೆ ಕಾರಣ?

Also read: ಯೋಧ ಗುರುವಿಗೆ ಸಹಾಯ ಧನವಾಗಿ ಬಂದ ಹಣವೇ ಕುಟುಂಬದ ಜಗಳಕ್ಕೆ ಕಾರಣವಾವಾಯಿತ್ತ? ಹಣಕ್ಕಾಗಿ ಕಚ್ಚಾಡುತ್ತಿದ್ದರೇ ಹುತಾತ್ಮ ಯೋಧನ ವರ್ಚಸ್ಸು ಏನಾಗುತ್ತೆ??

ಇರಾನ್​​ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ನೀಡಿದ್ದ ವಿನಾಯಿತಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದೆ. ಈ ಆಮದು ಮೇಲಿನ ನಿರ್ಬಂಧ ಹೇರಿದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5 ರಿಂದ 10 ರೂ.ವರೆಗೆ ಏರಿಕೆಯಾಗಲಿದೆ ಎಂದು ಮೂಲಗಳಿಂದ ತಿಳಿದಿದ್ದು ಇತ್ತೀಚೆಗೆ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 75.33 ಇದೆ. ಡೀಸೆಲ್‌ ದರ 68.61 ರೂ. ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 72.95 ರೂ. ಮತ್ತು ಡೀಸೆಲ್‌ ದರ 66.46 ರೂ. ಇದೆ.

ಮೂಲಗಳಂತೆ ಒಂದೇಡೆ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆ ಕಂಡರೆ, ಇನ್ನೊಂದೆಡೆ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಭಾರತ ಮತ್ತು ಇತರೆ ಏಳು ದೇಶಗಳಿಗೆ ಅಮೆರಿಕ ಸೂಚನೆ ನೀಡಿದೆ. ಹೀಗಾಗಿ ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ಇದರಿಂದ ತೈಲ ಆಮದು ವೆಚ್ಚ ಏರಿಕೆಯಾಗಲಿದೆ.

ಬೆಲೆ ಪ್ರತಿ ಬ್ಯಾರಲ್‌ಗೆ ರೂ?

Also read: ಚಿಪ್ಸ್ ತಯಾರಕ ಲೇಸ್ ಕಂಪನಿ ಬಳಸುವ ಆಲುಗಡ್ಡೆ ಬೆಳೆದದ್ದಕ್ಕೆ ಬಡ ರೈತರ ಮೇಲೆ 1.05 ಕೋಟಿ ದಂಡದ ದಾವೆ ಹಾಕಿದ ಪೆಪ್ಸಿ!! ಕೋಟ್ಯಂತರ ದಂಡ ಕೇಳುವುದು ನ್ಯಾಯವೇ??

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 75.71 ರೂ. ಮತ್ತು ಡೀಸೆಲ್‌ ದರ 70.17 ರೂ, ಪಶ್ಚಿಮ ಬಂಗಾಳ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 74.97 ರೂ. ಮತ್ತು ಡೀಸೆಲ್‌ ದರ 68.20 ರೂ, ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ದರ 78.52 ರೂ. ಮತ್ತು ಡೀಸೆಲ್‌ ದರ 69.56 ರೂ. ಆಗಿದೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ರೂ. 4636 ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪೆಟ್ರೋಲ್-​​ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.