ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಮೂವರು ಸಚಿವರು ಜನರ ಹಣವನ್ನು ದುರುಪಯೋಗ ಮಾಡಿದ್ದಾರೆಂದು ರಾಜ್ಯಪಾಲರಿಗೆ ದೂರು..

0
403

Kannada News | Karnataka News

ಮಂಗಳೂರಿನ ಶಶಿಧರ್ ಶೇಟ್ಟಿ ಎಂಬವವರು ದಾಖಲೆಗಳ ಸಮೇತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೂವರು ಸಚಿವರ ವಿರುದ್ಧ ದೂರು ದಾಖಲಿಸಿರುವ ಘಟನೆಯೊಂದು ನಡೆದಿದೆ..

ಏನಿದು ಪ್ರಕರಣ??

ಹೌದು ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂಬ ಆರೋಪವನ್ನು ಮಾಡಿರುವ ಶಶಿಧರ್ ಶೆಟ್ಟಿ, ಮಾಹಿತಿ ಹಕ್ಕು ಕಯ್ದೆಯಡಿ ಸೂಕ್ತ ದಾಖಲೆಗಳನ್ನು ಕಲೆ ಹಾಕಿಕೊಂಡು ರಾಜ್ಯಪಾಲರಿಗೆ ನೀಡಿದ್ದಾರೆ.. ಜೊತೆಗೆ ನಾಲ್ವರ ಮೇಲೂ ಎಫ್ ಐ ಆರ್ ಹಾಕಬೇಕೆಂದು ಮನವಿ ಮಾಡಿದ್ದಾರೆ..

ನಡೆದದ್ದಾದರು ಏನು??

ಅಕ್ಟೋಬರ್ 22ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಬಂಟ್ವಾಳದಲ್ಲಿ ನಡೆದ ಮಿನಿ ವಿಧಾನಸೌದ ಉದ್ಘಾಟನೆ ಕಾರ್ಯಕ್ರಮದಲ್ಲಿ ಇತರ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದರು.. ಅದೊಂದು ಸಂಪೂರ್ಣ ಸರ್ಕಾರಿ ಆಯೋಜಿತ ಕಾರ್ಯಕ್ರಮವಾಗಿತ್ತು.. ಆದರೆ ಮುಖ್ಯಮಂತ್ರಿಗಳು ಅದನ್ನು ಮರೆತು ಇತರ ಪಕ್ಷದ ವಿರುದ್ಧ ಮಾತನಾಡುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದರು..

ಅವರು ಮಾಡಿದ್ದು ಸರಿಯಿರಲಿಲ್ಲ.. ಅದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ದೂರನ್ನು ನೀಡಿದ್ದಾರೆ..

ಇದೇ ವೇದಿಕೆಯಲ್ಲಿ ಇದ್ದ ಇಂಧನ ಸಚಿವರಾದ ಡಿ ಕೆ ಶಿವಕುಮಾರ್ ಅರಣ್ಯ ಸಚಿವರಾದ ರಮಾನಾಥ ರೈ ಮತ್ತು ಯು ಟಿ ಖಾದರ್ ರವರೂ ಕೂಡ ಇದೇ ಕೆಲಸವನ್ನು ಮಾಡಿದ್ದರು.. ಅವರೂ ಕೂಡ ಕಾಂಗ್ರೇಸ್ ಪರ ಮಾತನಾಡುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದರು.. ಆದ್ದರಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ..

ಮಾಹಿತಿ ಹಕ್ಕಿನ ಕಾಯ್ದೆಯಡಿ ತಿಳಿದುಕೊಂಡಿರುವ ಪ್ರಕಾರ ಆ ಕಾರ್ಯಕ್ರಮಕ್ಕೆ ಒಟ್ಟು 2,65,752 ರೂ ಗಳು ಖರ್ಚಾಗಿದೆ.. ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಮಾಡಿರುವ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ?? ನಾಲ್ವರ ವಿರುದ್ಧವೂ ಎಫ್ ಐ ಆರ್ ದಾಖಲಿಸಬೇಕೆಂದು ಕೇಳಿಕೊಂಡಿದ್ದಾರೆ..

Also Read: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಜ್ಯೋತಿರಾಜ್, ಚಿತ್ರಗಳನ್ನು ನೋಡಿ ಪೊಲೀಸರು ಅಚ್ಚರಿಯಾಗಿದ್ದಾರೆ…!