ಜಯಾ ಅವರ ಆಪ್ತೆ ‘ಚಿನ್ನಮ್ಮ’ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನ ಪಡೆಯುತ್ತಾರ?

0
679

ತಮಿಳುನಾಡು: ‘ಜಯಾ ನಿಧನದ ನಂತರ ನೀವೇ ಮುಖ್ಯಮಂತ್ರಿಯಾಗಿ ಎಂದು ಪನ್ನೀರ್‍ ಸೆಲ್ವಂ ಒತ್ತಾಯಿಸಿದ್ದರು’ ಎಂದು ಶಶಿಕಲಾ ಅವರು ಮಾಧ್ಯಮದವರಿಗೆ ಹೇಳಿಕೆ ನೀಡುವವರೆಗೂ ಶಶಿಕಲಾ ಏನೂ ಮಾತನಾಡದೆ ಎಲ್ಲವನ್ನೂ ನಿಯಂತ್ರಿಸುತ್ತಾ ಬಂದರು.

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ತುದಿಗಾಲಲ್ಲಿ ನಿಂತಿರುವ ಶಶಿಕಲಾ ಅವರಿಗೆ ಈ ಆರೋಪ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ.

ಎಐಎಡಿಎಂಕೆ ಹಿರಿಯ ನಾಯಕ ಪಿ ಎಚ್ ಪಾಂಡಿಯನ್ ಅವರು ಜೆ ಜಯಲಲಿತಾ ಅವರ ಸಾವಿನಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸುವ ಮೂಲಕ ಹೊಸ ವಿವಾದ ಸೃಷ್ಟಿಸಲು ಯತ್ನಿಸಿದ ಕೆಲವೇ ತಾಸುಗಳ ಬಳಿಕ ಎಐಎಡಿಎಂ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿ “ಚಿನ್ನಮ್ಮ ಶಶಿಕಲಾ ಅವರು ತಮಿಳು ನಾಡಿನ ಮುಖ್ಯಮಂತ್ರಿ ಆಗೇ ಆಗ್ತಾರೆ; ಅದನ್ನು ಯಾರಿಂದಲೂ ತಡೆಯಲು ಆಗದು’ ಎಂದು ಸ್ಪಷ್ಟಪಡಿಸಿತು.

ಈಗ ಜಯಾ ಅವರ ಆಪ್ತೆ ‘ಚಿನ್ನಮ್ಮ’ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವೇರುತ್ತಿದ್ದಾರೆ. ತಮಿಳುನಾಡಿನ ಜನತೆ ಅಮ್ಮನಿಗೆ ನೀಡಿದ ಬೆಂಬಲವನ್ನು ಚಿನ್ನಮ್ಮನಿಗೂ ನೀಡುತ್ತಾ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.