ಚಂಡೀಗಢದ ಈ ರೈತ ಈಗ ಶತಾಬ್ದಿ ರೈಲಿನ ಒಡೆಯ!!

0
787

೨೦೦೭ರಲ್ಲಿ ಲೂಧೀಯಾನದ ಚಂಡೀಗಡ್‌ದಲ್ಲಿ ರೈಲ್ವೆ ಲೈನ್‌ಗಾಗಿ ರೈತರ ಜಮೀನು ಸ್ವಾಧಿನಕ್ಕೆ ಪಡೆದಿತ್ತು. ಭೂಮಿ ಕಳೆದು ಕೊಂಡ ರೈತನಿಗೆ ಪರಿಹಾರನೀಡುವಂತೆ ಆದೇಶಿಸಲಾಗಿತ್ತು. ಆದರೆ ಸೂಚಿಸಿದಷ್ಟು ಹಣ ನೀಡದಿದ್ದಾಗ, ಭೂಮಿ ನೀಡಿದ ಸಂಪೂರಣ್ ಸಿಂಗ್ ಅವರು ಕೋರ್ಟ್‌ನಲ್ಲಿ ದಾವೆಯನ್ನುಹೂಡಿದರು. ಇದರ ತೀರ್ಪೂ ಇತ್ತೀಚೀಗೆ ಹೊರ ಬಿದ್ದಿದ್ದು, ಎಲ್ಲರಿಗೂ ಕೋರ್ಟ್ ಆದೇಶ ಅಚ್ಚರಿನೀಡಿದೆ.

ಹೌದು.. ಅಮೃತಸರ್ ಹಾಗೂ ನವದೆಹಲಿ ನಡುವಣ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ಸಂಚರಿಸುತ್ತದೆ. ಈ ರೈಲು ಹೋಗುವ ಸ್ಥಳದಲ್ಲೇ ಸಂತ್ರಸ್ತ ರೈತನ ಭೂಮಿಯೂಇತ್ತು. ೨೦೧೫ರಲ್ಲಿ ಸಂಪೂರಣ್ ಸಿಂಗ್ ಪರಿಹಾರ ನೀಡಿಲ್ಲ ಎಂದು ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ರೈಲ್ವೆ ಇಲಾಖೆ ಮಾತ್ರ ಪರಿಹಾರ ನೀಡಿರಲಿಲ್ಲ.ಕೋರ್ಟ್ ಆದೇಶದಂತೆ ಎಕರೆ ೨೫ ಲಕ್ಷ ನೀಡಬೇಕಿದ್ದ ಹಣವನ್ನು ೫೦ ಲಕ್ಷ ನೀಡುವಂತೆ ಸೂಚಿಸಿತ್ತು. ಇದರ ಅನ್ವಯ ಸಂಪೂರಣ್ ಸಿಂಗ್ ಅವರಿಗೆ ಸುಮಾರು೧.೪೭ ಕೋಟಿ ಪರಿಹಾರ ಸಿಗಬೇಕಿತ್ತು. ಆದ್ರೆ ರೈಲ್ವೆ ಇಲಾಖೆ ೪೨ ಲಕ್ಷ ನೀಡಿತ್ತು. ಇದನ್ನು ಪ್ರಶ್ನಿಸಿ ಮತ್ತೆ ಇವರು ಕೋರ್ಟ್ ಮೊರೆ ಹೋಗಿದ್ದರು. ಪರಿಹಾರದಹಣವನ್ನು ನೀಡುವಂತೆ ರೈಲ್ವೆ ಇಲಾಖೆಗೆ ಕೋರ್ಟ್ ಸೂಚನೆ ನೀಡಿತ್ತು. ಆದರೂ ಹಣ ನೀಡದಾಗ ಕೋರ್ಟ್ ಶತಾಬ್ದಿ ರೈಲ್ವೆಯನ್ನು ಸಂಪೂರಣ್ ಸಿಂಗ್ ಅವರಿಗೆನೀಡುವಂತೆ ಆದೇಶ ಹೊರಡಿಸಿತ್ತು.

Swarna Shatabdiರೈಲ್ವೆ ಇಲಾಖೆ ಹೇಳಿಕೆ: ಸಂಪೂರಣ್ ಸಿಂಗ್ ಅವರಿಗೆ ನೀಡಬೇಕಿದ್ದ ಹಣ ನೀಡುವಲ್ಲಿ ತೊಡಕಿನ ಬಗ್ಗೆ ಪರಿಶೀಲಿಸಿ ಹಣ ನೀಡುವಲಾಗುವುದು. ಅಲ್ಲದೆ ರೈತರೈಲ್ವೆಯನ್ನು ಪಡೆದು ಏನು ಮಾಡುತ್ತಾರೆ ಎಂದು ಕೇಳಿದೆ.

ಪ್ರಯಾಣಿಕರ ಅನುಕೂಲವನ್ನು ಅರಿತು ರೈಲನ್ನು ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ ಎಂದು ಸಂಪೂರಣ್ ಸಿಂಗ್ ತಿಳಿಸಿದ್ದಾರೆ.