ರುಚಿಯಾದ ಶಾವಿಗೆ ಉಪ್ಪಿಟ್ಟು ಮಾಡುವ ಸಿಂಪಲ್ ವಿಧಾನ..!!

0
1585

ಬೇಕಾಗುವ ಪದಾರ್ಥಗಳು:

  • 1.5 ಕಪ್ ಶಾವಿಗೆ
  • ಸಾಸಿವೆ
  • ಉದ್ದಿನಬೇಳೆ
  • ಕಡ್ಲೆಬೇಳೆ
  • ಈರುಳ್ಳಿ
  • ಟೊಮ್ಯಾಟೋ
  • ಹಸಿ ಮೆಣಸಿನಕಾಯಿ
  • ಕರಿಬೇವು
  • ಕೊತ್ತಂಬರಿ ಸೊಪ್ಪು
  • ಶುಂಠಿ
  • ಅರಶಿನ ಪುಡಿ
  • ಎಣ್ಣೆ
  • ರುಚಿಗೆ ತಕ್ಕಷ್ಟು ಉಪ್ಪು
  • ನಿಂಬೆ ಹಣ್ಣಿನ ರಸ
  • ತೆಂಗಿನತುರಿ

ಮಾಡುವ ವಿಧಾನ:

  • ಸ್ವಲ್ಪ ತುಪ್ಪದಲ್ಲಿ ಶಾವಿಗೆಯನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  • ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
  • ನಂತರ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಸ್ವಲ್ಪ ಸಮಯದ ನಂತರ ಟೊಮ್ಯಾಟೋ ಹಾಕಿ ಬೇಯಿಸಿ.
  • ನಂತರ ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಮಗುಚಿ. ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
  • ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ನಂತರ ನಿಂಬೆ ರಸ ಹಾಕಿ ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ. ಸ್ಟವ್ ಆಫ್ ಮಾಡಿ.
  • ಬಿಸಿ ಬಿಸಿಯಾದ ಶಾವಿಗೆ ಉಪ್ಪಿಟ್ಟು ಸಿದ್ದ.