ಬಾಹ್ಯಾಕಾಶ ಯಾತ್ರೆಗೆ ಭಾರತೀಯ ಮೂಲದ ಶಾವ್ನಾ ಆಯ್ಕೆ

0
562

ಮುಂಬೈ: ಮುಂಬೈ ಮೂಲದ ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಡಾ. ಶಾವ್ನಾ ಪಾಂಡ್ಯ(32) 2018 ರಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ.

ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ನಂತರ ಈಗ ಮುಂಬೈ ಮೂಲದ ಡಾ. ಶಾವ್ನಾ ಪಾಂಡ್ಯ ಅಮೇರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಬಾಹ್ಯಾಕಾಶ ಯಾತ್ರೆ ಭಾರತದ 3 ನೇ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ.

ಕೆನಡಾದ ಅಲ್ ಬೆರ್ಟಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ. ಶಾವ್ನಾ ಪಾಂಡ್ಯ ಬಹುಮುಖ ಪ್ರತಿಭೆ. ಗಾಯಕಿ, ಬಾಕ್ಸರ್ ಕೂಡ ಆಗಿರುವ ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಇದೆ. ನಾಸಾದಿಂದ 2018 ರಲ್ಲಿ ಕೈಗೊಂಡಿರುವ ವಿಶೇಷ ಬಾಹ್ಯಾಕಾಶ ಯಾತ್ರೆಗೆ ಶಾವ್ನಾ ಆಯ್ಕೆಯಾಗಿದ್ದಾರೆ.

ಬಾಹ್ಯಾಕಾಶ ಯಾತ್ರೆಗೆ ವಿಶ್ವಾದ್ಯಂತ ಸುಮಾರು 3200 ಮಂದಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಿದ್ದರಂತೆ. ಆದರೆ ಈ ಪೈಕಿ ಆಯ್ಕೆಯಾಗಿದ್ದು ಮಾತ್ರ ಇಬ್ಬರು. ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರು.