ಸಿಎಂ ಆಪ್ತ ಮರಿಗೌಡ ವಿರುದ್ಧ ದೂರು ನೀಡಿದ್ದ ಮೈಸೂರು ಡಿ.ಸಿ.ಶಿಖಾ ಎತ್ತಂಗಡಿ

0
1324

ಬೆಂಗಳೂರು: ಶಿಖಾ ಅವರಿಗೆ ಅವಾಜ್ ಹಾಕಿ ತಲೆಮರಿಸಿಗೊಂಡಿದ್ದ ಸಿಎಂ ಆಪ್ತ  ಮರಿಗೌಡ ಬಂಧಿತನಾಗಿ ಜೈಲುಗೆ ಹೋದ ಬೆನ್ನಲ್ಲೆ ಸಿ.ಶಿಖಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಸಿಎಂ ಆಪ್ತ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಗೌಡ ತನ್ನ ಬೆಂಬಲಿಗರೊಂದಿಗೆ ಬಂದ ವಾಗ್ವಾದ ನಡೆಸಿ, ಬೆದರಿಕೆ ಹಾಕಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಸಿ.ಶಿಖಾ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಶಿಖಾ ಅವರು, ನಜರಾಬಾದ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಆದಾದ ನಂತರ ಮರಿಗೌಡ ತಲೆ ಮರೆಸಿಕೊಂಡಿದ್ದು, ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ತಿಂಗಳಾದರೂ ಪೊಲೀಸರು ಮರಿಗೌಡನನ್ನು ಬಂಧಿಸಿರಲಿಲ್ಲ. ಜಾಮೀನು ಅರ್ಜಿ ಕೋರ್ಟ್ ನಲ್ಲಿ ವಜಾಗೊಂಡ ನಂತರ, ಮರಿಗೌಡ ಪೊಲೀಸರಿಗೆ ಶರಣಾಗಿದ್ದು, ಅವರು ಮೈಸೂರಿನ ಕಾರಾಗೃಹದಲ್ಲಿದ್ದಾರೆ.

ಇಂದು 11 ಮಂದಿ ಐ.ಎ.ಎಸ್. ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ನಿಯೋಜಿಸಲಾಗಿದೆ. ಸಾವಿತ್ರಿ ಅವರನ್ನು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ, ಡಾ.ಅಜಯ್ ನಾಗಭೂಷಣ್ ಅವರನ್ನು ಆಹಾರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಸಿ.ಶಿಖಾ ಅವರ ಜಾಗಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿ ಡಿ.ರಂದೀಪ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.ಈ ಹಿಂದೆ ಡಿ.ರಂದೀಪ್ ವಿಜಯಪುರ ಜಿಲ್ಲೆಯ ಡಿ.ಸಿ ಆಗಿದ್ದರು