ಶಿರಾಡಿ ಘಾಟ್ ರಸ್ತೆ ರಿಪೇರಿಗಾಗಿ ಮತ್ತೆ ಮುಚ್ಚಲಾಗಿದೆ, ಕರಾವಳಿ ತಲುಪಲು ಇಲ್ಲಿದೆ ಬದಲಿ ಮಾರ್ಗಗಳ ಸಂಪೂರ್ಣ ಮಾಹಿತಿ..

0
1703

ಶಿರಾಡಿ ಘಾಟ್, ಇದು ಧರ್ಮಸ್ಥಳ, ಕುಕ್ಕೆ, ಮಂಗಳೂರು ತಲುಪಲು ಬಳಸುವ ಸಾಮಾನ್ಯ ಮಾರ್ಗವಾಗಿದೆ. ಆದರೆ, ನಿತ್ಯ ಹೆಚ್ಚಿನ ವಾಹನ ಸಂಚಾರದಿಂದ ಈ ಮಾರ್ಗ ಹದಗೆಟ್ಟು ನಿಂತಿದೆ. ಅದಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ 48ರ ಶಿರಾಡಿ ಘಾಟ್ ಶನಿವಾರದಿಂದ ಮುಚ್ಚಲ್ಪಡುತ್ತಿದೆ.

ಬಹಳಷ್ಟು ವರ್ಷಗಳಿಂದ 13 ಕಿಲೋಮೀಟರ್ ಇರುವ ಈ ರಸ್ತೆ ದುರಸ್ಥಿಯಾಗದೆ, ಅಪಘಾತಗಳಾಗುವ ಮುನ್ಸೂಚನೆಯನ್ನು ನೀಡುತ್ತಿತ್ತು. ಇನ್ನು ಮಳೆಗಾಲ ಬರುವಷ್ಟರಲ್ಲೇ ಈ ಮಾರ್ಗದ ಕಾಂಕ್ರಿಟಿಕರಣವಾಗಬೇಕಿದೆ. ಇನ್ನು ಶಿರಾಡಿ ಘಾಟ್ ಬದಲು ಪ್ರಯಾಣಿಕರ ಅನುಕೂಲಕ್ಕಾಗಿ ಬೇರೆ ಮಾರ್ಗವನ್ನು ಸೂಚಿಸಲಾಗಿದೆ. ಪರ್ಯಾಯ ಮಾರ್ಗಗಳು ಈ ಕೆಳಗಿನಂತಿವೆ.

ಭಾರಿ ವಾಹನ ಮಾರ್ಗ:
ಭಾರಿ ವಾಹನ, ಎಂದರೆ ರಾಜಹಂಸ, ಐರಾವತ ಬಸ್, ಖಾಸಗಿ ಲಕ್ಸುರಿ ಬಸ್, ಬುಲೆಟ್ ಟ್ಯಾಂಕರ್ಸ್, ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು ಈ ಮಾರ್ಗದಲ್ಲಿ ಮಾತ್ರ ಸಂಚರಿಸತಕ್ಕದ್ದು.

1. ಮಂಗಳೂರು-ಬಿ.ಸಿ.ರೋಡ್-ಮಾಣಿ-ಪುತ್ತೂರು-ಸುಳ್ಯ-ಮಡಿಕೇರಿ-ಹುಣಸೂರು-ಕೆ.ಆರ್.ನಗರ-ಹೊಳೆನರಸಿಪುರ-ಹಾಸನ.
2. ಮಂಗಳೂರು-ಬಿ.ಸಿ.ರೋಡ್- ಮಾಣಿ- ಪುತ್ತೂರು-ಮಡಿಕೇರಿ-ಹುಣಸೂರು-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು.
3. ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ, ಮಾಸ್ತಿಕಟ್ಟೆ-ಬಾಳೆಬಾರೆಘಾಟ್ ಹೊಸಂಗಡಿ ಸಿದ್ದಾಪುರ-ಕುಂದಾಪುರ.        4.ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು.                  5. ಮಂಗಳೂರು – ಬೆಂಗಳೂರು – ಗುಂಡ್ಯದವರೆಗೆ ಮಾತ್ರ ಸಂಚಾರ.
6. ಬೆಂಗಳೂರು- ಮಂಗಳೂರು ಸಕಲೇಶಪುರದ ಆನೆಮಹಲ್ ಕ್ರಾಸ್‍ವರಗೆ ಮಾತ್ರ ಸಂಚಾರ.

ಸಣ್ಣ ವಾಹನ ಮಾರ್ಗ:
ಸಣ್ಣ ವಾಹನ ಮಾರ್ಗ, ಎಂದರೆ ಸಾಮಾನ್ಯ ಬಸ್, ಜೀಪು, ಕಾರು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಬಹುದು.

1. ಬೆಂಗಳೂರು-ಹಾಸನ-ಬೇಲೂರು-ಮೂಡಿಗೆರೆ-ಚಾರ್ಮಾಡಿಘಾಟ್- ಬೆಳ್ತಂಗಡಿ-ಉಜಿರೆ- ಬಿ.ಸಿ.ರೋಡು- ಮಂಗಳೂರು.
2. ಬೆಂಗಳೂರು-ಹಾಸನ-ಸಕಲೇಶಪುರ-ಆನೆಮಹಲ್, ಹಾನ್‍ಬಾಳ್-ಜೆನ್ನಾಪುರ, ಮೂಡಿಗೆರೆ-ಚಾರ್ಮಾಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರೋಡ್-ಮಂಗಳೂರು.
3. ಬೆಂಗಳೂರು-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ-ಕುದುರೆಮುಖ-ಮಾಲಘಾಟ್-ಕಾರ್ಕಳ-ಉಡುಪಿ-ಮಂಗಳೂರು.
4. ಮಂಗಳೂರು-ಬಿ.ಸಿ.ರೋಡ್-ಮಾಣಿ-ಪುತ್ತೂರು-ಮಡಿಕೇರಿ-ಹುಣಸೂರು-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು.
5. ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ ಮಾಸ್ತಿಕಟ್ಟೆ-ಬಾಳೆಬಾರೆಘಾಟ್-ಹೊಸಂಗಡಿ ಸಿದ್ದಾಪುರ-ಕುಂದಾಪುರ.
6. ಬೆಂಗಳೂರು-ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಹೆಬ್ರಿ-ಉಡುಪಿ.