ಶಿವನ ವಾಹನ ಮಹಾನಂದಿ.. ದೇವಾಲಯ..!

0
972

ನಂದಿಯನ್ನು ಸಾಮಾನ್ಯವಾಗಿ ಶಿವನ ವಾಹನ ಎಂದೆ ಕರೆಯಲಾಗಿದೆ. ಆದರೆ ನೆನಪಿರಲಿ ನಂದಿ ಕೇವಲ ಶಿವನ ವಾಹನವಲ್ಲ ಬದಲಾಗಿ ಕೈಲಾಸದ ಮೇಲ್ವಿಚಾರಕ. ಪತಂಜಲಿ, ತಿರುಮೂಲಾರ್ ರನ್ನೊಳಗೊಂಡ ಹದಿನೆಂಟು ಸಿದ್ಧರ ಮುಖ್ಯಸ್ಥ. ಧೈರ್ಯಶಾಲಿ, ಬಲಶಾಲಿ ಹಾಗೂ ಬುದ್ಧಿಶಾಲಿ ಎತ್ತು ನಂದಿ. ಸಾಮಾನ್ಯವಾಗಿ ಪ್ರತಿ ಶಿವನ ದೇವಾಲಯಗಳಲ್ಲಿ ಶಿವನಿಗೆ ಎದುರಾಗಿ ದರ್ಶನ ಪಡೆಯುತ್ತಿರುವ ನಂದಿಯ ವಿಗ್ರಹವನ್ನು ಎಲ್ಲೆಡೆ ಕಾಣಬಹುದು. ಆದರೆ ನಿಮಗೆ ಗೊತ್ತೆ ನಂದಿಗೆಂದೆ ಮುಡಿಪಾದ ಕೆಲವು ದೇವಾಲಯಗಳು ಭಾರತದಲ್ಲಿ ಕಂಡುಬರುತ್ತವೆ. ಅಂತಹ ಒಂದು ದೇವಾಲಯದ ಪೈಕಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ನಂದಿ ಎಂಬ ಶಬ್ದ ಬರಲು ಎರಡು ರೀತಿಯ ಹಿನ್ನಿಲೆಗಳನ್ನು ಇತಿಹಾಸಕಾರರು ಮುಂದಿಡುತ್ತಾರೆ. ಕೆಲವರ ಪ್ರಕಾರ, ಸಂಸ್ಕೃತದಲ್ಲಿ ನಂದಿ ಎಂದರೆ ಸಂತಸದಿಂದಿರುವ ವ್ಯಕ್ತಿ ಎಂಬರ್ಥ ಬರುತ್ತದೆ. ಅದರಂತೆ ನಂದಿಯು ಶಿವನ ಅತಿ ಪರಮ ಭಕ್ತ ಹಾಗೂ ಶಿವನನ್ನು ದರ್ಶಿಸುತ್ತ ಕೈಲಾಸದಲ್ಲಿ ಸದಾ ಸಂತಸದಿಂದಿರುತ್ತಿದ್ದ. ಹೀಗಾಗಿ ನಂದಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಮಹಾನಂದಿ ದೇವಾಲಯ : ಇನ್ನೂ ಕೆಲವರು ತಮಿಳಿನ ಪಂದಿಯಿಂದ ನಂದಿ ಎಂಬ ಹೆಸರು ಚಾಲ್ತಿಯಲ್ಲಿ ಬಂದಿತೆನ್ನಲಾಗಿದೆ. ಸದೃಢ ಮೈಕಟ್ಟನ್ನು ಪ್ರತಿನಿಧಿಸುವ ಸಂಕೇತವಾಗಿ ನಂದಿಯನ್ನು ಕೊಂಡಾಡುತ್ತಿದ್ದರೆನ್ನಲಾಗಿದೆ.

 

ಮಹಾನಂದಿ ದೇವಾಲಯ : ನಂದಿಯ ಕುರಿತು ಹಿನ್ನಿಲೆ ತಿಳಿಯುವುದಕ್ಕಿಂತ ಮುಂಚೆ ಮಹಾನಂದಿಯ ದೇವಾಲಯದ ಕುರಿತು ಮೊದಲು ತಿಳಿಯಿರಿ. ಈ ದೇವಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ನಂದ್ಯಾಳ್ ನಗರದ ಬಳಿಯಿರುವ ನಲ್ಲಮಲ್ಲ ಬೆಟ್ಟಗಳಲ್ಲಿ ಸ್ಥಿತವಿದೆ.

 

ಮಹಾನಂದಿ ದೇವಾಲಯ : ಚಾಲುಕ್ಯ ದೊರೆಗಳಿಂದ ನಿರ್ಮಿತವಾದ ಈ ಮಹಾನಂದೀಶ್ವರನ ದೇವಲಯವು ಸಾಕಷ್ಟು ಪುರಾತನವಾಗಿದ್ದು 1500 ವರ್ಷಗಳಷ್ಟು ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಹೀಗಾಗಿ ಇತಿಹಾಸಪ್ರಿಯ ಪ್ರವಾಸಿಗರ, ಇತಿಹಾಸ ಅಧ್ಯಯನಕಾರರ ಗಮನ ಸಾಕಷ್ಟು ಸೆಳೆಯುತ್ತದೆ.

ಮಹಾನಂದಿ ದೇವಾಲಯ : ಇಲ್ಲಿ ದೊರೆತಿರುವ ಹತ್ತನೇಯ ಶತಮಾನಕ್ಕೆ ಸಂಬಂಧಿಸಿದ ಶಾಸನವೊಂದರಲ್ಲಿ ಬರೆಯಲಾದಂತೆ ಈ ದೇವಾಲಯವನ್ನು ಹಲವು ಬಾರಿ ನವೀಕರಣಗೊಳಿಸಲಾಗಿರುವುದರ ಕುರಿತು ತಿಳಿದು ಬರುತ್ತದೆ.

 

 

ಮಹಾನಂದಿ ದೇವಾಲಯ : ನಗರ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದಲ್ಲಿ ಪ್ರತಿ ವರ್ಷ ಬರುವ ಮಹಾಶಿವರಾತ್ರಿಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಪ್ರಮಾಣದಲ್ಲಿ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಮಹಾನಂದಿ ದೇವಾಲಯ : ಇನ್ನೂ ಈ ದೇವಾಲಯ ಮಂಡಳಿಯು ಹೇಳುವಂತೆ ಕೆಲವು ಮೂಲಗಳ ಪ್ರಕಾರ, ಹಿಂದೆ ಕೃತಯುಗ ಪ್ರಾರಂಭದಲ್ಲಿ ಪರ್ವತನಿಗೆ ಇಬ್ಬರು ಮಕ್ಕಳಿದ್ದರು ಒಬ್ಬನು ಶಿಲದ ಹಾಗೂ ಇನ್ನೊಬ್ಬ ನಂದಿ ಎಂದು ಅವರ ಹೆಸರುಗಳು.

 

ಮಹಾನಂದಿ ದೇವಾಲಯ : ದೊಡ್ಡವನಾಗಿದ್ದ ಶಿಲದ ದೇವರ ಕುರಿತು ಅತಿ ಕಠಿಣವಾದ ತಪಸ್ಸನ್ನಾಚರಿಸಿದ. ಅದರ ಭಾಗವಾಗಿ ಆಹಾರ ತ್ಯಜಿಸಿ ಕೇವಲ ಶಿಲೆಗಳನ್ನೆ ತಿಂದು ತಪಗೈದ. ಇದರಿಂದ ಪ್ರಸನ್ನನಾದ ದೇವರು ಅವನನ್ನು ಬೆಟ್ಟವಾಗುವಂತೆ ಹರಸಿ ಅದರ ಮೇಲೆ ತಾನು ವಾಸಿಸತೊಡಗಿದ.

ಮಹಾನಂದಿ ದೇವಾಲಯ : ನಂದಿಯೂ ಸಹ ದೈವಭಕ್ತನಾಗಿದ್ದು ಅಣ್ಣನಂತೆಯೆ ಶಿವನನ್ನು ಕುರಿತು ತಪಗೈದ. ಅವನ ತಪಸ್ಸಿನಿಂದ ಪ್ರಸನ್ನನಾದ ಶಿವನು ನಂದಿಗೆ ಪ್ರತ್ಯಕ್ಷನಾಗಿ ಅವನನ್ನು ಹರಸಿ ತನ್ನ ವಾಹನವನ್ನಾಗಿ ಮಾಡಿಕೊಂಡ. ನಂದಿಯು ತಪಗೈದ ಆ ಸ್ಥಳವೆ ಇಂದಿನ ಮಹಾನಂದಿಯಾಗಿದೆ ಎನ್ನಲಾಗುತ್ತದೆ.

 

ಮಹಾನಂದಿ ದೇವಾಲಯ : ಇನ್ನೂ ಒಂದು ಮೂಲದ ಪ್ರಕಾರ, ಹಿಂದೆ ನಂದರು ಈ ಪ್ರದೇಶವನ್ನಾಳುತ್ತಿದ್ದರು. ಅವರ ಕುಲದ ದೇವತೆಯಾದ ನಂದಿಯನ್ನು ಆರಾಧಿಸಲು ಈ ದೇವಾಲಯ ನಿರ್ಮಾಣ ಮಾಡಿದರೆನ್ನಲಾಗಿದೆ.

ಮಹಾನಂದಿ ಕ್ಷೇತ್ರ

ಸರ್ವೇಶ್ವರನು, ಸರ್ವಮಯನು ಅಂದರೇ ವಿಶ್ವದಲ್ಲಿ ಎಲ್ಲೆಲ್ಲಿಯೂ ತುಂಬಿರುವನು, ಹಸುವಿನ ಶರೀರದಲ್ಲಿ ಎಲ್ಲಾ ಭಾಗಗಳಿಂದಲೂ ಹಾಲು ತಯಾರಾಗಿದ್ದರೂ ಕೆಚ್ಚಲಲ್ಲಿ ನಿಂತಿರುವಂತೆ, ಭಗವಂತನೇ ಪುಣ್ಯತೀರ್ಥ ಕ್ಷೆತ್ರಗಳಲ್ಲಿ ಸರ್ವಸಾಮಾನ್ಯ ಜನಗಳು ಸೇವಿಸುವುದಕ್ಕಾಗಿ ನಿಂತಿರುವನು. ಅಂಥಾ ಪುಣ್ಯಕ್ಷೇತ್ರ ತೀರ್ಥಗಳು ಪಾವನವಾದ ಭಾರತ ಭೂಮಿಯಲ್ಲಿ ಲೆಕ್ಕಕ್ಕೆ ಮಿಕ್ಕಿರುವವು ದಕ್ಷಿಣ ಭಾರತದಲ್ಲಿನ ಕರ್ನೂಲು ಜಿಲ್ಲೆಯಲ್ಲಿನ ಶಿವಕ್ಷೇತ್ರಗಳಲ್ಲಿ ಶ್ರೀಶೈಲ ಮತ್ತು ಮಹಾನ್ಂದಿ ಎಂಬಯ್ರಯೆರಡು ಸುಪ್ರಸಿದ್ಧಗಳಾಗಿರುವವು.

 

ಮಹಾನಂದಿ ಕ್ಷೇತ್ರ ಶ್ರೀಶೈಲದ ದಕ್ಷಿಣ ದ್ವಾರಗಳೊಳಗಿರುವ ಕ್ಷೇತ್ರಗಳಲ್ಲಿ ಒಂದಾಗಿ ತಿಳಿದು ಬರುತ್ತದೆ. ಇದು ನಂದ್ಯಾಲ ತಾಲೂಕಿನ ತಂಬಳಪಲ್ಲೆ ಎಂಬ ಗ್ರಾಮಕ್ಕೆ ಐದು ಮೈಲುಗಳ ದೂರದಲ್ಲಿದೆ. ಇದು ತಿಮ್ಮಾಪುರ ಎಂಬ ಗ್ರಾಮಕ್ಕೆ ಮೂರು ಮೈಲುಗಳ ಮತ್ತು ಗಜುಲಪಲ್ಲೆ ರೈಲ್ವೆ ಸ್ಟೇಷನಿಗೆ ನಾಲ್ಕು ಮೈಲುಗಳ ದೂರದಲ್ಲಿ ಇದೆ. ಈ ಕ್ಷೇತ್ರವನ್ನು ಕುರಿತು ಎರಡು ವಿಧವಾದ ಕಥೆಗಳು ಕೇಳಿಬರುತ್ತಿರುವವು.

 

ಅವುಗಳಲ್ಲಿ ಒಂದು:- ಪೂರ್ವದಲ್ಲಿ ಒಬ್ಬ ಋಷಿಯು ನಲ್ಲಮಲ ಎಂಬ ಪರ್ವತದಲ್ಲಿ ಒಂದು ಕಡೆಯಲ್ಲಿ ಸಣ್ಣ ಆಶ್ರಮದಲ್ಲಿ ಕುಟುಂಬ ಸಮೇತರಾಗಿ ಜೀವಿಸುತಿದ್ದರು. ಆ ಋಷಿಯ ಶಿಲಾಭಕ್ಷನಾಗಿ ಸದಾ ತಪೋಧ್ಯಾವಾಸಕ್ತನಾಗಿ ಇದ್ದನು. ಆ ಕಾರಣದಿಂದಲೇ ಇರಬಹುದು ಆತನಿಗೆ ಶಿಲಾದ ಎಂಬ ಹೆಸರುಬಂದಿತು. ಆತನಿಗೆ ಸಂತಾನವಿಲ್ಲದರಿಂದ ಆತನ ಗೃಹಿಣಿ ಹೇಗಾದರು ಸಂತನವನ್ನು ಪ್ರಸಾದಿಸಬೇಕೆಂದು ಆ ತಪೋದನನ್ನು ಪ್ರಾರ್ಥಿಸಿದಳು. ಆತ ಅದಕ್ಕೆ ಸಂತುಷ್ಟನಾಗಿ ಅರ್ಧಾಂಗಿಯ ಅಭಿಲಾಷೆಯನ್ನು ನೆರವೇರಿಸಲು ನಿಶ್ಚಯ ಮಾಡಿ ಸರ್ವೇಶ್ವರನನ್ನು ಕುರಿತು ನಿಯಮ ನಿಷ್ಠೆಗಳಿಂದ ತಪಸ್ಸು ಮಾಡ ತೊಡಗಿದನು. ಭಗವಂತನಾದ ಶಂಕರನು ಆತನ ತಪಸ್ಸಿಗೆ ಮೆಚ್ಚಿ ಆತನ ಸಮೀಪದಲ್ಲಿಯೇ ಒಂದು ಹುತ್ತವಾಗಿ ವೃದ್ಧಿ ಹೊಂದುತ್ತಲಿದ್ದನು. ಶಿಲಾದನು ಅದನ್ನು ನೋಡಿ ಇದು ಪರಮೇಶ್ವರನ ಮಹಿಮೆಯೇ ಎಂದು ಗ್ರಹಿಸಿ ಸಂತೋಷಿಸುತ್ತಿದ್ದನು.

 

ಕೆಲವು ದಿನಗಳ ಮೇಲೆ ಶಿಲಾದನಿಗೆ ಶಿವನು ಪ್ರತ್ಯಕ್ಷನಾಗಿ, ಬೇಕಾದ ವರವನ್ನು ಬೇದಡಿಕೋ ಎಂದು ಹೇಳಿದನು ಆಗ ಆ ಶಿಲಾದನು ಅರ್ಧಾಂಗಿಯ ಅಭಿಲಾಷೆಯನ್ನು ಮರೆತು, ತನಗೆ ವಾಂಛನೀಯವಾದ ವಿಷಯವನ್ನು ನೆನೆದು ಸ್ವಾಮಿ, ನನಗೆ ನಿನ್ನ ನಿರಂತರ ಸೇವೆ ಮಾಡುವ ಭಾಗ್ಯವನ್ನು ಪ್ರಸಾದಿಸು, ಎಂದು ಪ್ರಾರ್ಥಿಸಿದನು. ಆಗ ಸರ್ವಜ್ಞನೂ, ಸರ್ವಶಕ್ತನೂ, ಆದ ಸರ್ವೇಶ್ವರನು ಆತನ ವರವನ್ನು ತಿಳಿದು ಅದನ್ನು ಕೂಡ ನೆರವೇರಿಸಲು ಇಚ್ಚಿಸಿ ಮುಗುಳ ನಗೆಯಿಂದ ಭಕ್ತಶೇಖರ ನಿನ್ನ ಇಷ್ಟದಂತೆ ಆಗಲಿ, ಮತ್ತು ನಿನ್ನ ಅರ್ಧಾಂಗಿಯ ಅಭಿಲಾಷೆಯು ಸಿದ್ಧಿಸಲಿ” ಎಂದು ಆಶಿರ್ವಾದಿಸಿ ಅದೃಶ್ಯವಾದನು.

 

ಆ ಕ್ಷಣದಲ್ಲಿಯೇ ಆ ಹುತ್ತದಿಂದ ಒಬ್ಬ ಬಾಲಕ ಉದ್ಬವಿಸಿ ಬಂದು ಶಿಲಾದನ ಎದುರಿನಲ್ಲಿ ನಿಂತನು. ಆಗ ಆ ಋಷಿಯ ಪರಮಾನಂದದಿಂದ ತನ್ನ ಪತ್ನಿಯನ್ನು ಕರೆದು ಆ ಬಾಲಕನನ್ನು ಆ ಸಾದ್ವಿಗೆ ಕೊಟ್ಟನು. ಆ ಋಷಿ ದಂಪತಿಗಳಿಬ್ಬರೂ ಆ ಬಾಲಕನನ್ನು ಎತ್ತಿ ಮುದ್ದಾಡುತ್ತಾ ಮಹಾನಂದದಲ್ಲಿ ಮಗ್ನರಾದರು. ಆ ರೀತಿ ಮಹಾನಂದದಿಂದ ಬಾಲಕನಿಗೆ ಆ ಮಾತ-ಪಿತೃಗಳು “ಮಹಾನಂದ”ನೆಂದು ನಾಮಕರಣ ಮಾಡಿದರು. ಅವನ ಖ್ಯಾತಿ ಜಗಕ್ಕೆ ಸಾರಿತು.