ಪ್ರಧಾನಿ ಮೋದಿ ಉದ್ಘಾಟಿಸಿದ ಶಿವನ ಪ್ರತಿಮೆ ಈಗ ವಿವಾದದಲ್ಲಿ ಸಿಲುಕಿದೆ!!!

0
629

ಮಹಾಶಿವರಾತ್ರಿ ಎಂದು ದೊಡ್ಡ ಶಿವ ವಿಗ್ರಹವನ್ನು ದೇಶದ ಪ್ರಧಾನಿ ಮೋದಿ ಅವರಿಂದ ಅನಾವರಣ ಗೊಳಿಸಿದ ಇಶ್ ಯೋಗಾ ಕೇಂದ್ರಕ್ಕೆ ಕಂಠಕ ಎದುರಾಗಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿ ಈಶ್ ಯೋಗಾ ಕೇಂದ್ರದ ವಿರುದ್ಧ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ.

Image result for isha shiva statue

ಪಟ್ಟಣ ಮತ್ತು ದೇಶ ಯೋಜನಾ ನಿರ್ದೇಶನಾಲಯ, ಈಶ್ ಸಂಸ್ಥೆಯ ವಿರುದ್ಧ ದೂರು ದಾಖಲಿಸಿದೆ. ಅಲ್ಲದೆ ೧೧೨ ಅಡಿ ಶಿವ ವಿಗ್ರಹ ಸ್ಥಾಪಿಸಲು ಪರವಾನಿಗೆ ಪಡೆದಿಲ್ಲ. ದೇವಸ್ಥಾನ ಮುಂಬಾಗದಲ್ಲಿ ಆರ್ಚ್, ರೋಡ್, ಪಾರ್ಕಿಂಗ್ ಲಾಟ್, ಮುಂತಾದವಗಳನ್ನು ನಿರ್ಮಿಸಲು ಸಹ ಸರ್ಕಾರದಿಂದ ಪರವಾನಿಗೆ ಪಡೆದಿಲ್ಲ ಎಂದು ಈಶ್ ಯೋಗಾ ಕೇಂದ್ರದ ವಿರುದ್ಧ ಪಿಐಎಲ್ ದಾಖಲಿಸಲಾಗಿದೆ. ಈ ಅರ್ಜಿ ಕೋಯಿಮುತ್ತೂರಿನ ಪಟ್ಟಣ ಮತ್ತು ದೇಶ ಯೋಜನಾ ನಿರ್ದೇಶನಾಲಯದ ನಿರ್ದೇಶಕ ಆರ್.ಸೆಲ್ವರಾಜ್ ದಾಖಲಿಸಿದ್ದಾರೆ.

ಸೆಲ್ವರಾಜ್ ಅವರು ಹೇಳುವಂತೆ ಇಂತಹ ದೊಡ್ಡ ವಿಗ್ರಗಳನ್ನು ಕಟ್ಟುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ ನಮ್ಮ ಇಲಾಖೆಯಿಂದ ಪರವಾನಿಗೆ ಪಡೆದಿಲ್ಲ. ಅಗತ್ಯ ಮುಂಜಾಗರು ಕ್ರಮ ಕೈಗೊಂಡಿಲ್ಲ ಎಂದು ಮಾರ್ಚ್ ೧ರಂದು ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

Image result for isha shiva statueತಮಿಳುನಾಡು ಸರ್ಕಾರ ಮಹಾಶಿವರಾತ್ರಿ ಉತ್ಸವನ್ನು ನಿಲ್ಲಿಸುವಂತೆ ಸಲಹೇ ನೀಡಬಹುದಿತ್ತು. ಆದರೆ ಪ್ರಧಾನಿ ಅವರ ಕಾರ್ಯಲದಿಂದ ಈ ಉದ್ಘಾಟನೆಗೆ ಅವರೇ ಬರುತ್ತಿದ್ದಾರೆ ಎಂದು ತಿಳಿದಾಗ ಸುಮ್ಮನೇ ಕುಳಿತುಕೊಳ್ಳಬೇಕಾಯಿತು ಎಂದು ಸಮಾಜಿಕ ಹೋರಟಗಾರರು ತಿಳಿಸಿದ್ದಾರೆ.

ಈಶ್ ಯೋಗಾ ಕೇಂದ್ರದ ವಿರುದ್ಧ ಮೊದಲೇ ನೋಟೀಸ್ ನೀಡಲಾಗಿತ್ತಾದರೂ, ಕೆಲಸ ನಿಂತಿರಲಿಲ್ಲ. ೧೦೯ ಏಕರೆ ಸ್ಥಳದಲ್ಲಿ ಈಶ್ ಸಂಸ್ಥೆ ಯೋಗಾ ಕೇಂದ್ರ ಸ್ಥಾಪಿಸುವ ಗುರಿಯನ್ನು ಹೊಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೧೨ ಜನರು ಹೊಣೆಗಾರರು ಆಗಿರುತ್ತಾರೆ. ಕೋರ್ಟ್ ಅವರು ಉತ್ತರಕ್ಕಾಗಿ ಕಾಯುತ್ತಿದೆ ಎಂದು ತಿಳಿದು ಬಂದಿದೆ.