ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಪಾಲಿಸಿಕೊಂಡು ಬರುತ್ತಿರುವ 9 ತತ್ವಗಳ ಬಗ್ಗೆ ತಿಳಿದುಕೊಂಡರೆ ಅವರ ಮೇಲಿನ ಗೌರವ ಇನ್ನು ಹೆಚ್ಚಾಗುತ್ತೆ

0
2636

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಪಾಲಿಸಿಕೊಂಡು ಬರುತ್ತಿರುವ 9 ತತ್ವಗಳು.. ಮನುಷ್ಯ ಜೀವನದಲ್ಲಿ ಸಾಧಿಸಲು ಈ ತತ್ವಗಳೇ ಸಾಕು.. ಇದಕಿಂತ ಇನ್ನೇನು ಬೇಕು..

1. ಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕುತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿಕೊಳ್ಳಬೇಕು.

2.ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೆ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.

3.ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.

4.ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.

5.ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರಾವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.

6.ಸಾಧಕನೊಬ್ಬನಿಗೆ ಸನ್ಮಾನವೆಂದರೆ ಅವನನ್ನು ಸಭೆಗೆ ಕರೆದು ಶಾಲು,ಪೇಟ ತೊಡಿಸಿ ಫಲ ಪುಷ್ಪಗಳನ್ನಿತ್ತರೆ ಅದು ಸನ್ಮಾನವಲ್ಲ.ಬದಲಾಗಿ ಆ ವ್ಯಕ್ತಿಯಲ್ಲಿ ಇರಬಹುದಾದ ಒಳ್ಳೆಯ ಗುಣವೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ವ್ಯಕ್ತಿಗೆ ಮಾಡಬಹುದಾದ ನಿಜವಾದ ಸನ್ಮಾನ.

7.ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಬೇಕು.

8.ದೇಶ ಭಕ್ತಿಯಿಲ್ಲದವನು ಜೀವಂತವಾಗಿದ್ದರೂ ಮರಣಪ್ರಾಯ.

9.ಜಗತ್ತಿನ ಜೀವನದಲ್ಲಿ ಮನುಷ್ಯ ಧರ್ಮದ ಅವಶ್ಯಕತೆ ಮಿಗಿಲಾಗಿರುವುದು. ಧರ್ಮ ಆಚರಣೆಯಾದಾಗ ಜಗತ್ತು ಶಾಂತಿ ಸಾಮ್ರಾಜ್ಯವಾಗುತ್ತದೆ. ಧರ್ಮ ಉಲ್ಲಂಘನೆಯಾದರೆ ಜಗತ್ತು ಗೊಂದಲ ವಾತಾವರಣಕ್ಕೆ ಈಡಾಗುತ್ತದೆ.

ಸಾಧನೆಗೆ ಸ್ಪೂರ್ತಿ ಅವಷ್ಯಕ.. ಜ್ನಾನ ಇರುವುದು ಹಂಚುವುದಕ್ಕೆ.. ಬಚ್ಚಿಟ್ಟುಕೊಳ್ಳುವುದಕ್ಕಲ್ಲ.. ಶೇರ್ ಮಾಡಿ ಇನ್ನೊಬ್ಬರಿಗೆ ಸ್ಪೂರ್ತಿಯಾಗಿ