ಈ ಇಬ್ಬರು ಸಹೋದರರು ಪೊಲೀಸರನ್ನೇ ಮೀರಿಸುವಂತಹ ಕೆಲಸ ಮಾಡಿದರು ಗೊತ್ತಾ?

0
414

ಈ ಯುವಕರ ಸಾಹಸ ನಿಜಕ್ಕೂ ಮೆಚ್ಚುವಂತಹುದು, ಸಾಮಾನ್ಯ ಜನರು ಯೋಚಿಸಲು ಹೆದರುವ ಇಂತಹ ಕೆಲಸವನ್ನು ಶಿವಮೊಗ್ಗ ಜಿಲ್ಲೆಯ ಈ ಇಬ್ಬರು ಸಹೋದರರು ಸರಾಗವಾಗಿ ಮಾಡಿದ್ದಾರೆ. ಈ ಮೂಲಕ ಎಲ್ಲರಿಗು ಸಹಾಯ ಮಾಡುವ ಪೊಲೀಸರಿಗೆ ಇವರು ಸಹಾಯ ಮಾಡಿದ್ದಾರೆ. ಏನದು ಆ ಯುವಕರು ಮಾಡಿದ ಕೆಲಸ, ಪೊಲೀಸರಿಗೆ ಅವರು ಏನು ಸಹಾಯ ಮಾಡಿದರು, ಅಂತೀರ ನೀವೇ ನೋಡಿ.

ಶಿವಮೊಗ್ಗ ತಾಲ್ಲೂಕಿನ ಸಂತೆಕಾದುರಿನ ಬಸ್ ನಿಲ್ದಾಣದ ಬಳಿ ಇರುವ ಕೆನರಾ ಬ್ಯಾಂಕಿನ ATM ನಲ್ಲಿರುವ ಹಣವನ್ನು ದರೋಡೆ ಮಾಡಲು ಮಂಗಳವಾರ ಬೆಳಗ್ಗೆ ಆರು ಜನ ಕಳ್ಳರು ಒಂದು ಕಾರಿನಲ್ಲಿ ಬಂದಿದ್ದರು. ಅದರಲ್ಲಿ 3 ಜನ ಕಬ್ಬಿಣದ ಸಲಾಕೆಗಳನ್ನು ಬಳಸಿ ATM ಮಶೀನಿನ ಬಾಗಿಲನ್ನು ಮುರಿದು ಹಣವನ್ನು ಲಪಟಾಯಿಸಲು ಯತ್ನಿಸುತ್ತಿದ್ದಾರೆ, ಇನ್ನು ಮೂವರು 50 ಮೀ ದೂರದಿಂದ ಕಾರಿನ ಬಳಿ ನಿಂತು ಕಾವಲು ಕಾಯುತ್ತಿದ್ದರು.

ATM ಇರುವ ಜಾಗದಿಂದ ಏನೋ ಶಬ್ದ ಬರುತ್ತಿದೆ ಎಂದು ಗಮನಿಸಿದ ಕಟ್ಟಡದ ಮಾಲೀಕ ಮುರುಗೇಶ್ ಅವರು ತಕ್ಷಣ ಅವರ ಸಹೋದರ ವೆಂಕಟೇಶ್ ಅವರಿಗೆ ಶಬ್ದದ ಬಗ್ಗೆ ತಿಳಿಸಿದರು ಹಾಗು ATM ಆಸುಪಾಸಿನಲ್ಲಿ ಯಾರೋ ಅನುಮಾನಾಸ್ಪದ ವ್ಯಕ್ತಿಗಳನ್ನು ನೋಡಿರುದಾಗಿಯೂ ಹೇಳಿದರು.

ಈ ಇಬ್ಬರು ಸಹೋದರರು ತಕ್ಷಣ ATM ಬಳಿ ಹೋಗಿ, ಒಳಗಡೆ ಹಣ ದೋಚುತ್ತಿದ್ದ ಕಳ್ಳರನ್ನು ಏಟಿಎಂ ಕೊನೆಯ ಶೆಟ್ಟರ್ ಹಾಕಿ ಒಳಗಡೆಯೇ ಬಂಧಿಸಿ, ಸಹಾಯಕ್ಕಾಗಿ ಕೂಗಿದರು. ಗ್ರಾಮದ ಜನರೆಲ್ಲಾ ಬರುತ್ತಿರುವುದನ್ನು ನೋಡಿ ಕಾರಿಂದ ಬಳಿ ಇದ್ದ ಇನ್ನು 3 ಜನ ಪರಾರಿಯಾಗಿದ್ದಾರೆ. ಶೆಟ್ಟರ್ ಹಾಕುವಾಗ ಕಳ್ಳರು ಮಾರಾಕಾಸ್ತ್ರದಿಂದ ಈ ಇಬ್ಬರು ಸಹೋದರರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಈ ವಿಷಯ ತಿಳಿದ ಪೊಲೀಸರು ಅಲ್ಲಿಗೆ ಆಗಮಿಸಿ ಕಳ್ಳರನ್ನು ಬಂಧಿಸಿ, ಯುವಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇನ್ನು ಇವರನ್ನು ಬಂಧಿಸಿದ ನಂತರ, ಹಲವು ದಿನಗಳಿಂದ ಸಂಚು ರೂಪಿಸಿದ ಈ ಕಳ್ಳರು, ATM ಸುತ್ತ-ಮುತ್ತಲಿನ ಬೀದಿ ದೀಪ ಮತ್ತು CCTV ಗಳನ್ನೂ ನಿಷ್ಕ್ರಿಯೆ ಗೊಳಿಸಿರುವುದು ಗೊತ್ತಾಗಿದೆ.

ಕೆನರಾ ಬ್ಯಾಂಕಿನ ಆ ATM ಮಶೀನಿನಲ್ಲಿ ಒಟ್ಟು 10 ಲಕ್ಷ ರೂಪಾಯಿ ನಗದು ಇತ್ತು ಎಂದು ಪೊಲೀಸರಿಗೆ ತನಿಖೆಯ ನಂತರ ತಿಳಿದು ಬಂದಿದೆ.