ಶಿವರಾತ್ರಿ ದಿನ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆಗೊಳಿಸಿದ ನರೇಂದ್ರ ಮೋದಿ

0
499

ಕೊಯಂಬತ್ತೂರು: ದೇಶಾದಾದ್ಯಂತ ಶುಕ್ರವಾರ ಸಡಗರ ಸಂಭ್ರಮದಿಂದ ಮಹಾಶಿವರಾತ್ರಿ ಆಚರಣೆಯಲ್ಲಿ ಮೂಳಿಗಿತ್ತು. ಈ ಮಹಾಶಿವ ರಾತ್ರಿ ದಿನದಂದು ಕೊಯಂಬತ್ತೂರಿನಲ್ಲಿ ಇಶಾ ಫೌಂಡೇಷನ್ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶಿವರಾತ್ರಿಯಂದು ಲೋಕಾರ್ಪಣೆಗೊಳಿಸಿದ್ದಾರೆ.

ಶುಕ್ರವಾರ ಸಂಜೆ 6.30ರ ಸುಮಾರಿಗೆ ಧ್ಯಾನ ಭಂಗಿಯಲ್ಲಿ ಕುಳಿತಿರುವ 112 ಅಡಿ ಎತ್ತರದ ಪರಶಿವನ ಪ್ರತಿಮೆಯನ್ನು ಸದ್ಗುರು ವಾಸುದೇವ ಅವರ ಇಶಾ ಫೌಂಡೇಶನ್ ರವರು ನಿರ್ಮಿಸಿದ ಮೂರ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು.

Adiyogi statue

ಪ್ರತಿಮೆಯನ್ನು ಲೋಕಾರ್ಪಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾದಾದ್ಯಂತ ನಡೆಯಲಿರುವ ಮಹಾ ಯೋಗ ಯಜ್ಞಕ್ಕೆ ಅಗ್ನಿಯನ್ನು ಪ್ರತಿಷ್ಠಾಪಿಸಿದರು. ಮುಂದಿನ ವರ್ಷದ ವೇಳೆ 100 ಜನರಿಗೆ ಸರಳ ಯೋಗವನ್ನು ಕಲಿಸಿಕೊಡುವುದಾಗಿ ಕನಿಷ್ಠ 1 ಮಿಲಿಯನ್ ಜನರು ಪ್ರತಿಜ್ಞೆ ಕೈಗೊಳ್ಳುವುದು ಮಹಾ ಯೋಗ ಯಜ್ಞದ ಮುಖ್ಯ ಉದ್ದೇಶವಾಗಿದೆ.

ಪ್ರಪಂಚದಲ್ಲೆ ಅತ್ಯಂತ ದೊಡ್ಡ ಮುಖ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಮುಕ್ತಿ ಹಾಗೂ ಯೋಗವಿದ್ಯೆ ಮೂಲಕ ತನ್ನನ್ನು ತಾನು ಅರಿತುಕೊಳ್ಳವ 112 ದಾರಿಗಳನ್ನು ಇದು ಪ್ರತಿನಿಧಿಸುತ್ತದೆ. ಮಹಾಯೋಗ ಯಜ್ಞವನ್ನು ಜಗತ್ತಿನಾದ್ಯಾಂತ ಆರಂಭಿಸುವುದರ ಸಂಕೇತವಾಗಿ, ಪ್ರಧಾನಿ ಮೋದಿ ಅವರು ಕಾರ್ಯ ಕ್ರಮದಲ್ಲಿ ಜ್ಯೋತಿ ಬೆಳಗಿದರು.