ಶಿವನ ದರ್ಶನವನ್ನು ಹೇಗೆ ಮಾಡಬೇಕು…?

0
1669

ಶಿವಾಲಯದಲ್ಲಿ ಮುಂದೆ ಇರುವ ನಂದಿಯ ಡುಬ್ಬವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಿಂದ ನಂದಿಯ ಕೋಡುಗಳ ಮೇಲೆ ಬೆರಳಿಟ್ಟು, ಅದರ ಮಧ್ಯದಿಂದ ಶಿವ ದರ್ಶನ ಮಾಡಬೇಕು ಎಂಬುದು ರೂಢಿ. ಈ ಪದ್ಧತಿ ಸಾಕಷ್ಟು ಜಿಜ್ಞಾಸೆಗೆ ಒಳಗಾಗಿರುವ ಅಂಶ ಬ್ರಹ್ಮಾಂಡಕ್ಕೆ ಪ್ರತೀಕವಾಗಿರುವ ನಂದಿಯ ಮೂಲಕ ಎರಡು ಹುಬ್ಬುಗಳ ಮಧ್ಯೆ ಇರುವ ಅಂತಃಚಕ್ಷುವಿನಿಂದ ಸರ್ವಶಕ್ತ್ಯಾತ್ಮಕನಾದ ಶಿವನನ್ನು ದರ್ಶಿಸಬೇಕು ಎಂಬುದೇ ಇದರ ತಾತ್ಪರ್ಯ.

ವಿಭೂತಿಯ ಮಹತ್ವ:

ವಿಭೂತಿಗೂ ಶಿವನಿಗೂ ಅನನ್ಯ ಸಂಬಂಧ. ಪರಮೇಶ್ವರನಿಗೆ `ಭಸ್ಮೋದ್ಧೂಳಿತ’, `ಭಸ್ಮಾನುಲೇಪಿತ’ ಮೊದಲಾದ ವಿಶೇಷಣಗಳು ವಿಭೂತಿಯ ಧಾರಣೆ ಮಾಡುವುದರಿಂದ ಮೇಧಶಕ್ತಿ ವರ್ಧಿಸುತ್ತದೆ. ಮಿದುಳಿನ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಅದರ ಪರಿಣಾಮವಾಗಿ ಮಾನಸಿಕ ಪ್ರಸನ್ನತೆ ಲಭಿಸುತ್ತದೆ.
ಗರುಡಚಯನ, ಸೋಮಯಾಗ ಮತ್ತು ಅತಿರುದ್ರಾದಿ ಮಹಾಯಾಗಗಳಲ್ಲಿ ಗಣಪತಿ ಹವನ, ಗ್ರಹ ಶಾಂತಿ ಮುಂತಾದ ಹೋಮದಲ್ಲಿ ಹವಿಸ್ಸಿನ ದಹನದಿಂದ ಒದಗಿದ ಭಸ್ಮವು ಉತ್ಕೃಷ್ಟ ವಿಭೂತಿಯೆನಿಸುವುದು.

ಶಿವ ಪರಿವಾರ:

ನಂದಿಯಿಲ್ಲದ ಶಿವಾಲಯವಿಲ್ಲ. ಇವನು ಶಿವಗಣಗಳ ನಾಯಕ. ವೃಷಭವು ಕಾಮದ – ವೀರತ್ವದ ದ್ಯೋತಕ. ಶಿವನು ಇದನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾನೆಂದರೆ ಕಾಮವನ್ನು ಜಯಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಾನೆಂದು ಅರ್ಥ.

ನಂದಿಯ ನಂತರ ಬರುವ ಪ್ರಮುಖ ಭೃಂಗಿ. ಈತನು ಶಿವನಲ್ಲಿ ಏಕನಿಷ್ಠೆಯ ಭಕ್ತ. ಪಾರ್ವತಿಯು ಶಿವನಲ್ಲಿ ಐಕ್ಯವಾಗಿ, ಶಿವ ಅರ್ಧನಾರೀಶ್ವರ ರೂಪ ಪಡೆದಾಗಲೂ ಭೃಂಗಿ (ದುಂಬಿ) ಭೃಂಗದ ರೂಪ ಧರಿಸಿ ಶಿವನಿಗೆ ಪ್ರದಕ್ಷಿಣೆ ಬರುತ್ತ ಅರ್ಧನಾರೀಶ್ವರನನ್ನೇ ಮಧ್ಯದಲ್ಲಿ ಕೊರೆದನಂತೆ. ಆದ್ದರಿಂದಲೇ ಇವನಿಗೆ `ಭೃಂಗ’ ಎಂದು ಹೆಸರು ಬಂತೆಂದು ಪ್ರತೀತಿ.

ಶಿವನೊಂದಿಗೆ ನಿಕಟ ಸಂಬಂಧ ಹೊಂದಿದ ಇನ್ನೊಬ್ಬ ದೇವತೆಯೆಂದರೆ ವೀರಭದ್ರ. ದಕ್ಷ ಸಂಹಾರಕ್ಕಾಗಿ ನಿಯುಕ್ತನಾದ ಶಿವನ ಶಕ್ತಿಯ ಸ್ವರೂಪ. ವೀರಭದ್ರನ ಅನಂತರ ಬರುವ ದೇವರು ಚಂಡೇಶ್ವರ. ಇವನು ಮನುಷ್ಯವರ್ಗದ ಮಹಾಭಕ್ತ. ಶಿವನ ಇತರ ಅನುಚರರೆಂದರೆ ಅವನ ಗಣಗಳು.
ಇವು ಹೆಚ್ಚಾಗಿ ಪ್ರಮಥ ಅಥವಾ ಭೂತಗಣಗಳೆಂದು ಪ್ರಸಿದ್ಧ.

ರುದ್ರಾಕ್ಷಿಯ ಮಹತ್ವ: