ಕ್ಷೌರಿಕನಾದ ತಂದೆ ಅನಾರೋಗ್ಯದಿಂದ ಬಳಲುವಾಗೆ ಈ ಎರಡು ಹೆಣ್ಣುಮಕ್ಕಳು ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗುತ್ತೆ..

0
453

ಹೆಣ್ಣು ಮಕ್ಕಳಿಂದ ಏನು ಮಾಡಲು ಸಾದ್ಯ ಎನ್ನುವ ಕಾಲ ಹಿಂದೆ ಇತ್ತು. ಈಗ ಗಂಡುಮಕ್ಕಳಿಂದ ಆಗದ ಕೆಲಸಗಳನ್ನು ಹೆಣ್ಣುಮಕ್ಕಳು ಮಾಡಿ ತೋರಿಸಿದ ಹಲವಾರು ಉದಾಹರಣೆಗಳಿಗೆ. ಅದರಂತೆ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆ ಅನಾರೋಗ್ಯಕ್ಕೆ ಒಳಗಾದಾಗೆ ಮನೆಯ ಜವಾಬ್ದಾರಿ ಹೊತ್ತು ಮಾಡಿರುವ ಕೆಲಸಕ್ಕೆ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ.


Also read: ಫುಟ್-ಪಾತ್ ನಲ್ಲಿ ಟಿಶರ್ಟ್ ಮಾರುತ್ತಿದ್ದ ವ್ಯಕ್ತಿ ಇಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವ್ಯಾಪಾರ ನಡೆಸುತ್ತಿರುವ ಕಥೆ ಕೇಳಿ ನಿಮಗೂ ಸ್ಫೂರ್ತಿ ಬರುತ್ತೆ..

ಹೌದು ಬಡ ಕ್ಷೌರಿಕನೊಬ್ಬ ರೋಗದಿಂದ ಮನೆಯಲ್ಲೇ ಮಲಗಿದಾಗ ಅವನ ಇಬ್ಬರು ಹೆಣ್ಣು ಮಕ್ಕಳು ಹುಡುಗರಂತೆ ವೇಷ ತೊಟ್ಟು 4 ವರ್ಷಗಳಿಂದ ಕ್ಷೌರ ವೃತ್ತಿ ಮಾಡುತ್ತ, ಶಿಕ್ಷಣವನ್ನು ಮುಂದುವರಿಸಿ ಬದುಕುವ ಛಲ ಹೊಂದಿರುವವರಿಗೆ ಸ್ಪೂರ್ತಿಯಾಗಿದ್ದಾರೆ. ಈ ಸುದ್ದಿ ಈಗೀಗ ಬೆಳಕಿಗೆ ಬಂದಿದ್ದು ವಿಶೇಷ ಅಂದರೆ 4 ವರ್ಷಗಳಿಂದ ಇವರು ಹುಡುಗಿಯರು ಎನ್ನುವ ವಿಷಯ ಯಾರೊಬ್ಬರಿಗೂ ತಿಳಿದಿರಲಿಲ್ಲವಂತೆ. ಇದೆಲ್ಲ ನಡೆದಿರುವುದು ಉತ್ತರ ಪ್ರದೇಶದಲ್ಲಿ. ತಂದೆ ರೋಗಪೀಡಿತರಾಗಿ ಕೆಲಸ ಮಾಡಲಾಗದ ಸ್ಥಿತಿಗೆ ಬಂದಾಗ, ಅನಿವಾರ್ಯವಾಗಿ ಇಬ್ಬರು ಹೆಣ್ಣು ಮಕ್ಕಳು ಹುಡುಗರಂತೆ ಕೂದಲು ಕತ್ತರಿಸಿಕೊಂಡು ಶರ್ಟ್‌, ಪ್ಯಾಂಟ್‌ ಧರಿಸಿ ಕ್ಷೌರವೃತ್ತಿ ಆರಂಭಿಸಿದ್ದಾರೆ. ಇದೇ ರೀತಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.


Also read: ಕೇವಲ ಹಸು ಸಾಕಣೆ ಮಾಡಿ ಲಕ್ಷಾಂತರ ರೂಪಾಯಿ ದುಡಿದು BMW ಕಾರ್ ಖರೀದಿಸಿದ ಇವರು ಅನೇಕ ಯುವಕ ಯುವತಿಯರಿಗೆ ಮಾದರಿ!!

ಇವರೇ ಸಾಹಸ ಯುವತಿಯರು:

18 ವರ್ಷದ ಜ್ಯೋತಿಕುಮಾರಿ ಮತ್ತು 16 ವರ್ಷದ ನೇಹಾ ಇವರು ದೀಪಕ್‌ ಮತ್ತು ರಾಜು ಎಂದು ಹೆಸರು ಬದಲಾಯಿಸಿಕೊಂಡ ಸಹೋದರಿಯರು ಕತ್ತರಿ ಮತ್ತು ಶೇವಿಂಗ್‌ ಬ್ಲೇಡ್ ಹಿಡಿದಿದ್ದಾರೆ. ಈ ವಿಚಾರ 100 ಮನೆಗಳಿರುವ ಸ್ವಂತ ಊರಲ್ಲಿ ಮಾತ್ರ ಸಹೋದರಿಯರ ವಿಚಾರ ತಿಳಿದಿತ್ತು. ಆದರೆ ಅಕ್ಕಪಕ್ಕದ, ಊರಿನವರಿಗೆ ವಿಚಾರ ತಿಳಿದಿರಲಿಲ್ಲ ಎಂದು ನೇಹಾ ತಿಳಿಸಿದ್ದಾರೆ. ಈ ವಿಚಾರ ತಿಳಿದ ದಿ ಗಾರ್ಡಿಯನ್‌ ಯುವತಿಯರನ್ನು ಮಾತನಾಡಿಸಿದೆ. ಆಗ ಮಾತನಾಡಿದ ಮತ್ತೊಬ್ಬ ಸಹೋದರಿ ನಮಗೀಗ ಸಾಕಷ್ಟು ಆತ್ಮವಿಶ್ವಾಸ ಬಂದಿದೆ. ಯಾರಿಗೂ ಭಯ ಪಡುತ್ತಿಲ್ಲ. ಈಗ ಹೆಚ್ಚಿನವರಿಗೆ ನಾವು ಹುಡುಗಿಯರು ಎಂಬುದು ತಿಳಿದು ಬಂದಿದೆ. ನಾವೀಗ ಕೂದಲನ್ನು ಎಲ್ಲ ಹುಡುಗಿಯರಂತೆ ಉದ್ದ ಬೆಳೆಸಿದ್ದೇವೆ ಎಂದು ಜ್ಯೋತಿ ತಿಳಿಸಿದ್ದಾರೆ.


Also read: ಭಿಕ್ಷೆ ಬಿಟ್ಟು ಕೃಷಿ, ಹೈನುಗಾರಿಕೆ ಮಾಡುತ್ತಿರುವ ಮಂಗಳಮುಖಿಯರು; ಯಾವ ರೈತನಿಗೂ ಕಡಿಮೆಯಿಲ್ಲವಂತೆ..

ದಿನಕ್ಕೆ 400 ಗಳಿಸುತ್ತಿದ ಯುವತಿಯರು:

ಮಧ್ಯಾಹ್ನದ ವರೆಗೆ ಕಲಿಕೆ ಮತ್ತು ಮಧ್ಯಾಹ್ನದ ನಂತರ ಕ್ಷೌರದಂಗಡಿಯಲ್ಲಿ ದುಡಿಮೆ ಮಾಡುತ್ತ ಬದುಕು ಕಟ್ಟಿಕೊಂಡಿರುವ. ಜ್ಯೋತಿ ಪದವಿ ಮುಗಿಸಿದ್ದು, ನೇಹಾ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ತಮ್ಮ ಕುಟುಂಬಕ್ಕೆ ಅನಿವಾರ್ಯವಿರುವ ಹಣವನ್ನು ಗಳಿಸುತ್ತಿದರಂತೆ. ಪ್ರತಿದಿನ ಇಬ್ಬರು 400 ರೂ. ದುಡಿಯುತ್ತಿದ್ದರು. ತಂದೆಯ ಚಿಕಿತ್ಸೆಗೆ ಮತ್ತು ಮನೆ ನಡೆಸಲು ಈ ದುಡ್ಡು ಸಾಕಾಗುತ್ತಿತ್ತು. 2014ರಲ್ಲಿ ಈ ವೃತ್ತಿ ಆರಂಭಿಸಿದಾಗ ತುಂಬ ಸಮಸ್ಯೆಗಳು ಎದುರಾದವು. ಊರಲ್ಲಿ ಕೆಲವರು ತಮಾಷೆ ಮಾಡಲು ಆರಂಭಿಸಿದರು. ಎಲ್ಲವನ್ನು ನಿರ್ಲಕ್ಷಸಿ ವೃತ್ತಿ ಮತ್ತು ತಂದೆಯ ಆರೋಗ್ಯದ ಕಡೆಗೆ ಗಮನ ಕೊಟ್ಟೆವು. ಬೇರೆ ದಾರಿಯೇ ನಮಗೆ ತೋಚಲಿಲ್ಲ ಎಂದು ಇಬ್ಬರು ಸಹೋದರಿಯರು ತಿಳಿಸಿದ್ದಾರೆ.

ಇಬ್ಬರಿಗೂ ಸರ್ಕಾರದಿಂದ ಪ್ರೋತ್ಸಾಹ:

ಅಲ್ಲಿನ ಸರಕಾರವು ಜ್ಯೋತಿ ಮತ್ತು ನೇಹಾ ಅವರನ್ನು ಗುರುತಿಸಿ, ಅವರ ಬದುಕಿನ ಛಲವನ್ನು ಬೆಂಬಲಿಸಿ, ಪ್ರೋತ್ಸಾಹ ನೀಡಿದೆ. ಈ ವಿಷಯ ಕುರಿತು ತಂದೆಯಾದ ಬಡ ಕ್ಷೌರಿಕ ಮಾತನಾಡಿ ಮಕ್ಕಳು ಕೆಲಸ ಮಾಡುವುದನ್ನು ಕಂಡಾಗ ನನಗೆ ಸಾಕಷ್ಟು ನೋವಾಗುತ್ತದೆ. ಆದರೆ ನನ್ನ ಮಕ್ಕಳ ಬಗ್ಗೆ ಹೆಮ್ಮೆಯಿದೆ. ಅನಿರೀಕ್ಷಿತ ಸಂಕಷ್ಟ ಎದುರಾದಾಗ ನಮ್ಮ ಕುಟುಂಬಕ್ಕೆ ಆಸರೆಯಾಗಿ ನಿಂತರು ಎಂದು ತಂದೆ ಧ್ರುವ ನಾರಾಯಣ್‌ ತಿಳಿಸಿದ್ದಾರೆ. ಇವರ ದೈರ್ಯ ಇತರೆ ಹೆಣ್ಣು ಮಕ್ಕಳಿಗೆ ಮಾದರಿಯಾಗಿದೆ ಎಂದು ಅಲ್ಲಿನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.