ಚುನಾವಣೆಯಲ್ಲಿ ಮತದಾನ ಮಾಡದೆ ಸಿಕ್ಕ ರಜೆಯಲ್ಲಿ ಮೋಜು ಮಸ್ತಿಗೆ ತೆರಳುವ ಟೆಕ್ಕಿಗಳಿಗೆ ಚುನಾವಣಾ ಆಯೋಗದಿಂದ ಬಿಗ್ ಶಾಕ್..

0
521

ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಬಹಳಷ್ಟು ಹಣ ಖರ್ಚು ಮಾಡಿ ಮತದಾನ ಮಾಡಿ ಎಂದು ಅರಿವು ಮೂಡಿಸಿ ಪ್ರಚಾರ ಮಾಡುತ್ತವೆ. ಆದರೆ ಬಹಳಷ್ಟು ಜನರು ಮತದಾನದ ದಿನ ರಜೆ ಜೊತೆಗೆ ಸಂಬಳ ಸಿಕ್ಕಿತು ಎಂದು ಮತದಾನ ಮಾಡದೇ ಪ್ರವಾಸಕ್ಕೆ, ಇಲ್ಲ ಫ್ಯಾಮಿಲಿ ಜೊತೆಯಲ್ಲಿ ಕಾಲಕಳೆಯಲು ಅಥವಾ ಸ್ನೇಹಿತರ ಜೊತೆಯಲ್ಲಿ ಮೋಜು ಮಸ್ತಿ ಮಾಡಲು ಹೊರಡುತ್ತಾರೆ. ಅದರಲ್ಲಿ ಚುನಾವಣಾ ಆಯೋಗವೇ ಮತದಾನ ಮಾಡುವವರಿಗೆ ವೇತನದ ಜೊತೆಗೆ ರಜೆ ನೀಡಬೇಕು ಎಂದು ತಾಕಿತ್ತು ಮಾಡಿದ್ದು, ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿದ್ದ ಟೆಕ್ಕಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್ ಕೊಟ್ಟಿದೆ.

Also read: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ; ದೇಶದಲ್ಲೆ ಕರ್ನಾಟಕದಿಂದ ಚುನಾವಣಾ ಆಯೋಗಕ್ಕೆ ಹೆಚ್ಚು ದೂರು..

ಹೌದು ಈ ಬಾರಿ ಲೋಕಸಭಾ ಚುನಾವಣೆಗೆ ಬಾರಿ ಬಿಗಿ ಭದ್ರತೆ ಮಾಡಲಾಗಿದ್ದು. ನೂರಕ್ಕೆ ನೂರು ಮತದಾನ ಮಾಡುವಂತೆ ಚುನಾವಣಾ ಆಯೋಗ ತಯಾರಿ ನಡೆಸಿದೆ ಇದರ ನಡುವೆ ಬಹಳಷ್ಟು ಮತಗಳು ಮಿಸ್ ಆಗುವುದು ಟೆಕ್ಕಿಗಳದೆ ಎನ್ನುವ ವಿಚಾರಗಳು ಹೊರಬಂದಿದೆ. ಅದರಂತೆ ಇದೇ 18 ಮತ್ತು 23ರಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಆಯೋಗ ಎಷ್ಟೇ ಕ್ರಮ ಕೈಗೊಂಡರೂ ಚುನಾವಣೆಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಟೆಕ್ಕಿಗಳು ಇರುತ್ತಾರೆ. ಇದನ್ನು ತಪ್ಪಿಸಲು ಚುನಾವಣಾ ಆಯೋಗ ಈಗಾಗಲೇ ಐಟಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದೆ. ಮತದಾನದಂದು ನೀವು ರಜೆ ನೀಡಿದರೆ ಮತಗಟ್ಟೆಗೆ ಬಂದು ನಿಮ್ಮ ಉದ್ಯೋಗಿಗಳು ಮತ ಚಲಾಯಿಸುವುದಿಲ್ಲ.

Also read: ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ನಟರಿಬ್ಬರ ವಿರುದ್ದ ಚುನಾವಣಾ ಆಯೋಗಕೆ ದೂರು; ಜೆಡಿಎಸ್ ಶಾಸಕರಿಂದ ಯಶ್, ದರ್ಶನ್ ಗೆ ಎಚ್ಚರಿಕೆ??

ಬದಲಿಗೆ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ನಾವು ಮತದಾನದ ಪ್ರಮಾಣ ಹೆಚ್ಚಿಸಲು ಸಂಘಸಂಸ್ಥೆಗಳು, ವಿದ್ಯಾರ್ಥಿಗಳು, ನಾಗರಿಕರು ಸೇರಿದಂತೆ ಮತ್ತಿತರ ಜೊತೆ ನಿರಂತರವಾಗಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ವಿದ್ಯಾವಂತರೇ ಮತದಾನದ ಬಗ್ಗೆ ಅಸಡ್ಡೆ ವಹಿಸಿದರೆ ಹೇಗೆ? ಎಂದು ಪ್ರಶ್ನಿಸಿ ಚುನಾವಣಾ ಆಯೋಗ ಮತದಾನದ ದಿನದಿಂದ ವೇತನ ಸಹಿತ ರಜೆಕ್ಕೆ ಕೆಲವು ನಿಯಮಗಳನ್ನು ಜಾರಿ ಮಾಡಿ ಮತದಾನದ ದಿನದಂದು ವೇತನ ಸಿಗಬೇಕಾದರೆ ನೀವು ಮತ ಚಲಾಯಿಸಿರುವುದಕ್ಕೆ ಸಾಕ್ಷಿ ನೀಡಬೇಕು. ಅದನ್ನು ಆಯಾ ಕಂಪನಿಯ HR ಗಳಿಗೆ ಮತದಾನ ನೀಡಿದ ಬಗ್ಗೆ ಸಾಕ್ಷಿ ನೀಡಬೇಕು ಇಲ್ಲದಿದ್ದರೆ. ಪೇಮೆಂಟ್ ಕಟ್ ಆಗುತ್ತದೆ ರಜೆ ಕೂಡ ಕಟ್ ಆಗುತ್ತದೆ ಎಂದು ಚುನಾವಣೆ ಆಯೋಗ ಬಾರಿ ಎಚ್ಚರ ನೀಡಿದ್ದು.

ನಗರ ಪ್ರದೇಶಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮತದಾನವಾಗುತ್ತದೆ. ಈ ಬಾರಿ ಮತದಾನದಂದು ರಜೆ ನೀಡಬಾರದೆಂದು ಐಟಿ ಮುಖ್ಯಸ್ಥರಿಗೆ ಆಯೋಗ ಮನವಿ ಮಾಡಿದೆ. ಇದೆ ವಿಷಯವಾಗಿ ಈಗಾಗಲೇ ಹಲವು ಪ್ರವಾಸಿ ಪ್ರದೇಶಗಳಲ್ಲಿ ಮತದಾನ ದಿನ ಬರುವ ಪ್ರವಾಸಿಗರ ಮೇಲೆ ನಿಗಾ ಇಡಲಾಗುತ್ತದೆ. ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ಜೊತೆಗೆ ಕುಡಿಯಲು ನೀರು ಊಟ ಏನನ್ನು ನೀಡುವುದಿಲ್ಲ ಎಂದು ಎಚ್ಚರಿಸಿದ್ದು. ಮತದಾನ ದಿನದ ಮೋಜು ಮಾಡುವ ಯುವಕರ ಪ್ಲಾನ್‍ಗೆ ಬ್ರೇಕ್ ಹಾಕಲು ವಾಟ್ಸಾಪ್‍ನಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಆಗುತ್ತಿದೆ. ಏಪ್ರಿಲ್ 18 ಮತ್ತು 23 ರಂದು ಮತದಾನ ಮಾಡಿ. ವೋಟ್ ಹಾಕದೆ ಪ್ರವಾಸಕ್ಕೆ ಬಂದರೆ ತೊಂದರೆ ಕೊಡುತ್ತೇವೆ ಎಂದು ಚಿಕ್ಕಮಗಳೂರು, ಮಡಿಕೇರಿ ಹಾಗೂ ಮೈಸೂರಿನ ಯುವಕರು ಎಚ್ಚರಿಗೆ ನೀಡುತ್ತಿದ್ದಾರೆ.

Also read: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಮಾಜಿ ಸಂಸದೆ ರಮ್ಯಾ..

ಒಟ್ಟಾರೆಯಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಮತದಾನದ ಅರಿವು ಹೆಚ್ಚುತ್ತಿದೆ. ಮತ್ತು ಚುನಾವಣಾ ಆಯೋಗವು ಕೂಡ ಟೆಕ್ಕಿಗಳಿಗೆ ನಿರ್ಬಂಧ ಹೇರಿದ್ದು ಇದರಿಂದ ಮತದಾನ ಹೆಚ್ಚಾಗಲಿದೆ.