ಮೋದಿಯನ್ನು ಗುಂಡಿಟ್ಟು ಕೊಲ್ಲಿ: ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ; ಮೋದಿಯವರ ಜನಪ್ರಿಯತೆಯ ಹೊಟ್ಟೆಕಿಚ್ಚಿನಿಂದ ಇಂತಹ ನೀಚ ಮಟ್ಟಕ್ಕೆ ಇಳಿತಾ ಕಾಂಗ್ರೆಸ್??

0
295

ನರೇಂದ್ರ ಮೋದಿಯವರು ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಭರವಸೆ ಹುಸಿಯಾಗಿದೆ ಎಂದಾದರೆ ನಿಮ್ಮ ಪ್ರಧಾನಿ ಮೋದಿಯನ್ನು ತಾಕತ್ ಇದ್ದರೆ ಗುಂಡಿಟ್ಟು ಸಾಯಿಸಿ ಬೇರೆ ಯಾರನ್ನೂ ಸಾಯಿಸುವುದು ಬೇಡ. ನಾಥುರಾಮ್ ಗೋಡ್ಸೆ ಪರ ಮಾತನಾಡುವವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನೀಡಿದ ಬೇಳೂರಿನ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಅವರು ಬಿಜೆಪಿಯಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Also read: ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿಯ ನಾಯಕರು ಎನ್ನುವ ಆಡಿಯೋ ಹಿಂದೆ ಇರುವ ಸತ್ಯ ಏನು ಗೊತ್ತಾ?

ಹೌದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಬೇಳೂರು ಗೋಪಾಲಕೃಷ್ಣ ಅವರು ಒಂದು ತಿಂಗಳ ಹಿಂದೆ ಅಂದರೆ ಫೆ.4 ರಂದು ನೀಡಿದ ಹೇಳಿಕೆಯನ್ನ ಕರ್ನಾಟಕ ಬಿಜೆಪಿ ವಕ್ತಾರರು ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಕೇಂದ್ರ ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸರ ಟ್ವಿಟ್ಟರ್ ಖಾತೆಗಳನ್ನು ಟ್ಯಾಗ್ ಮಾಡಿ ಕ್ರಮಕೈಗೊಳ್ಳಲು ಮನವಿ ಮಾಡಿಕೊಂಡಿದ್ದು ಎಲ್ಲೆಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ತಾಕತ್ ಇದ್ರೆ ಮೋದಿ ಹತ್ಯೆ ಮಾಡಲಿ;

ಗಾಂಧಿ ಪ್ರತಿಕೃತಿಯನ್ನು ದಹಿಸಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರ ವಿರುದ್ಧ ಮೊನ್ನೆ 4ರಂದು ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಗಾಂಧಿ ಬದುಕಿದ್ದರೆ ಗುಂಡಿಟ್ಟು ಸಾಯಿಸುತ್ತೇವೆ ಎಂದು ಹಿಂದೂ ಮಹಾಸಭಾ ನಾಯಕಿ ಹೇಳುತ್ತಾರೆ. ಅದರಂತೆ ಮೋದಿ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಭರವಸೆ ಹುಸಿಯಾಗಿದೆ ಎಂದಾದರೆ ನಿಮ್ಮ ಪ್ರಧಾನಿ ಮೋದಿಯವರನ್ನು ಶೂಟ್ ಮಾಡಿ ಎಂದು ಬಲಪಂಥೀಯ ಕಾರ್ಯಕರ್ತರನ್ನು ಕೆರಳಿಸುವಂತಹ ಹೇಳಿಕೆ ಕೊಟ್ಟಿದ್ದರು.

Also read: ಇನ್ನು ಮುಂದೆ ವಿದ್ಯುತ್ ಬಳಕೆಗೂ ಮೊದಲೇ ರಿಚಾರ್ಜ್; ಶೀಘ್ರದಲ್ಲೇ ಬೆಸ್ಕಾಂ ವ್ಯಾಪ್ತಿಯ ನಗರಸಭೆಗಳು ಹಾಗೂ ಗ್ರಾಮಪಂಚಾಯಿತಿಗಳಲ್ಲಿ ನಿಯಮ ಜಾರಿ..

ಶಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ?

ಕಾಂಗ್ರೆಸ್ ಶಾಸಕರು ನೀಡಿರುವ ಈ ಹೇಳಿಕೆ ಆಘಾತಕಾರಿ. ಅವರನ್ನು ಕೂಡಲೇ ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ಹೇಳಿದ್ದಾರೆ. ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ನಾಯಕನಾಗಿರುವುದರಿಂದ ಸರ್ಕಾರ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದೆ ಎಂದರು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಗೋಪಾಲಕೃಷ್ಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಗೋಪಾಲಕೃಷ್ಣ ಅವರ ಈ ಹೇಳಿಕೆಯನ್ನು ಒಪ್ಪುತ್ತಿಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ. ಅವರ ವಿರುದ್ಧ ಅಂತಹ ಹೇಳಿಕೆ ನೀಡುವುದು ಸರಿಯಲ್ಲ. ಮೋದಿಯವರ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅಂತಹ ಹೇಳಿಕೆ ಸಂಜಸವಲ್ಲ ಎಂದು ಹೇಳಿದ್ದಾರೆ.

Also read: ಪ್ರಧಾನಿ ಮೋದಿಯವರಿಗೆ ಮತ್ತೆ ರಮ್ಯಾ ಟ್ವೀಟ್; ಪಾಕಿಗೆ ಹೋಗಿ ಬಿರಿಯಾನಿ ತಿಂದು ಬಂದ ನಿಮ್ಮನ್ನು ನಂಬುವುದು ಹೇಗೆ..

ಇದೇ ವೇಳೆ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಖಾಸಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೇಳೂರು ಗೋಪಾಲ ಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಯಿಸಿ ಎಂದು ಹೇಳಿದ್ದರೆ ಅದು ತಪ್ಪು, ಆದರೆ ಹತ್ಯೆ ಮಾಡಿ ಎಂದು ಹೇಳಿಕೆ ನೀಡಿಯೇ ಇಲ್ಲ. ಹತ್ಯೆ ಮಾಡಿ ಎಂದು ಹೇಳಿಕೆ ನೀಡಿದ್ದಲ್ಲಿ ನಾನು ಕ್ಷಮೆ ಕೇಳುತ್ತಿದ್ದೆ, ಆದರೆ ನಾನು ಆ ರೀತಿ ಹೇಳಿಕೆ ಕೊಟ್ಟೇ ಇಲ್ಲ, ಪ್ರಧಾನಿ ಮೋದಿ ಅವರನ್ನು ಸಾಯಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದೇನೆ ಎಂದು ಹಿಂದೂ ಸಭಾಗೆ ನಾನು ಪ್ರಶ್ನೆ ಮಾಡಿದ್ದೇನೆ ಎಂದಿದ್ದಾರೆ.