ಅಗತ್ಯಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಕೂಡಲೇ ಖಾತೆಯನ್ನು ಮುಚ್ಚಿ ಇಲ್ಲವಾದಲ್ಲಿ ಬೀಳುತ್ತೆ ಭಾರಿ ದಂಡ!!

0
467

ಪ್ರತಿಯೊಬ್ಬರೂ ನಾಲ್ಕೈದು ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆದು ಅದರಲ್ಲಿ ಒಂದೇರಡು ಬ್ಯಾಂಕ್ ಖಾತೆಯನ್ನು ಉಪಯೋಗಿಸಿ ಉಳಿದ ಕೆಲವು ಬ್ಯಾಂಕ್ ಖಾತೆಗಳನ್ನು ಕಾಲಿ ಬಿಟ್ಟಿರುತ್ತಾರೆ. ಅದರಲ್ಲಿ ಮಿನಿಮಂ ಬ್ಯಾಲೆನ್ಸ್ ಕೂಡ ಇರುವುದಿಲ್ಲ, ಇಂತಹ ಖಾತೆಯನ್ನು ನೀವೂ ಹೊಂದಿದರೆ ಕೂಡಲೇ ಕ್ಲೋಸ್ ಮಾಡಿಸಿ ಇಲ್ಲವಾದರೆ ಬ್ಯಾಂಕ್​ಗೆ ನೀವು ಹೆಚ್ಚಿನ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಇದರಲ್ಲಿ ಬಹಳ ದಿನಗಳಿಂದ ಬಳಸದೆ ಇರುವ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡಿಸಬೇಕಾಗುತ್ತೆ.

ಹೌದು ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದರೆ, ತುಂಬಾ ಸಮಯದಿಂದ ಆ ಖಾತೆಯನ್ನು ಬಳಸದಿದ್ದರೆ ಕೂಡಲೇ ಆ ಅಕೌಂಟ್​​ನ್ನು ಕ್ಲೋಸ್​ ಮಾಡಿಸಬೇಕಾಗುತ್ತದೆ. ಒಂದು ವೇಳೆ, ಅಕೌಂಟ್​ ಕ್ಲೋಸ್​ ಮಾಡಿಸದಿದ್ದರೆ, ಬ್ಯಾಂಕ್​ಗೆ ನೀವು ಹೆಚ್ಚಿನ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ನಿಮ್ಮ ಹೆಸರಿನಲ್ಲಿ ಬ್ಯಾಂಕ್​ ಖಾತೆಯನ್ನು ನೀವು ತುಂಬಾ ದಿನಗಳಿಂದ ಬಳಸದಿದ್ದರೆ, ಈಗ ಆ ಖಾತೆಯನ್ನು ಮುಚ್ಚುವುದು ಉತ್ತಮ. ಬ್ಯಾಂಕ್​​​ನ ನಿಯಮದ ಪ್ರಕಾರ, ಗ್ರಾಹಕ ತನ್ನ ಖಾತೆಯಲ್ಲಿ ಕನಿಷ್ಠ ಹಣವನ್ನು ಇಟ್ಟು, ನಿಯಮಿತವಾಗಿ ಹಣ ವ್ಯವಹಾರ ಮಾಡಬೇಕು. ಇಲ್ಲವಾದರೆ ಬ್ಯಾಂಕ್​ ನಿಮಗೆ ಹೆಚ್ಚಿನ ದಂಡ ವಿಧಿಸುತ್ತದೆ.

ಅದಕ್ಕಾಗಿ ಬ್ಯಾಂಕ್​ ಖಾತೆಯನ್ನು ನಿಷ್ಕ್ರಿಯೆಗೊಳಿಸಲು ಬ್ಯಾಂಕ್ ಮೂಲಗಳು ಸಲಹೆ ನೀಡಿವೆ. ಆದರಿಂದ ನಿಮ್ಮ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೊತೆ ಕೂಡಲೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಕ್ಲೋಸ್​ ಮಾಡಿಸುವುದು ಒಳಿತು. ಯಾಕೆಂದರೆ, ನಿಮ್ಮ ಎಲ್ಲಾ ಹೂಡಿಕೆಗಳು, ಸಾಲ, ವ್ಯಾಪಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್​​ ಮತ್ತು ವಿಮೆ ಯೊಂದಿಗೆ ಸಂಪರ್ಕ ಹೊಂದಿರುವ ಪೇಮೆಂಟ್​​​​​ಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್​ ಮಾಡಲಾಗಿರುತ್ತದೆ. ಅದರಲ್ಲಿ ಉದ್ಯೋಗ ಬದಲಿಸುವ ಪ್ರತಿಯೊಬ್ಬರೂ ಕಂಪನಿಯ ನಿಯಮದಂತೆ ಹೊಸ ಬ್ಯಾಂಕ್​ ಖಾತೆ ತೆರೆಯಬೇಕಾಗುತ್ತದೆ. ಈ ವೇಳೆ, ನೀವು ಹಿಂದಿನ ಸಂಸ್ಥೆಯಲ್ಲಿ ಬಳಸುತ್ತಿದ್ದ ಸಂಬಳ ಖಾತೆ ನಿಷ್ರ್ಕಿಯಗೊಳ್ಳುತ್ತದೆ. ಸಂಬಳ ಬರುವುದು ನಿಂತಾಗ, ಅದು ಸೇವಿಂಗ್ಸ್​ ಅಕೌಂಟ್ ಆಗಿ ಮಾರ್ಪಡುತ್ತದೆ.

ಇದರಿಂದ ಆಗುವ ನಷ್ಟವೇನು?

ಒಂದಕ್ಕಿಂತ ಹೆಚ್ಚಿನ ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಆದಾಯ ತೆರಿಗೆ ಸಲ್ಲಿಸುವಾಗ(ಐಟಿ ರಿಟನ್​​​) ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನೀವು ಎಲ್ಲಾ ಖಾತೆಗಳ ಪ್ರತಿಯೊಂದು ವಿವರವನ್ನು ತಪ್ಪದೇ ನೀಡಬೇಕಾಗುತ್ತದೆ. ಐಟಿ ರಿಟನ್​​ ಸಲ್ಲಿಸುವ ವೇಳೆ, ಎಲ್ಲಾ ಅಕೌಂಟ್​​ಗಳ ಸ್ಟೇಟ್​​ಮೆಂಟ್ಸ್​​ನ್ನು ಕೂಡ ನೀಡಬೇಕಾಗುತ್ತದೆ. ಇದು ನಿಮನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುತ್ತದೆ. ನಿಷ್ಕ್ರಿಯ ಖಾತೆಯನ್ನು ಸರಿಯಾಗಿ ಬಳಸದಿದ್ದರೆ ಅದು ನಿಮಗೆ ನಷ್ಟವಾಗುತ್ತದೆ. ಬ್ಯಾಂಕ್​ ನಿಮಗೆ ದಂಡ ವಿಧೀಸುವುದರಿಂದ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ 4 ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಕನಿಷ್ಠ 10 ಸಾವಿರ ಹಣವನ್ನು ಖಾತೆಯಲ್ಲಿ ಇಡಬೇಕಾಗುತ್ತದೆ.

ಖಾತೆಯನ್ನು ಕ್ಲೋಸ್​ ಮಾಡುವುದು ಹೇಗೆ?

1. ಖಾತೆ ಕ್ಲೋಸ್ ಮಾಡುವ ಅಫ್ಲಿಕೇಶನ್​ನಲ್ಲಿ ಮಾಹಿತಿ ಭರ್ತಿ ಮಾಡಬೇಕು.
2. ಖಾತೆ ಮುಚ್ಚಲು ಕಾರಣ ಏನೆಂದು ನಮೂದಿಸಬೇಕು. ಜಂಟಿ ಖಾತೆಯಾಗಿದ್ದರೆ, ಎಲ್ಲಾ ಖಾತೆದಾರರು ಸಹಿ ಮಾಡಬೇಕು.
3. ನಿಮ್ಮ ಹಣ ವರ್ಗಾಯಿಸಲು ನೀವು ಬಯಸುವ ನಿಮ್ಮ ಖಾತೆಯ ವಿವರಗಳನ್ನು ಒದಗಿಸಬೇಕು.
4. ಖಾತೆಯನ್ನು ಮುಚ್ಚಲು ಖಾತೆದಾರರು ಬ್ಯಾಂಕ್​ಗೆ ಹೋಗಬೇಕು. ಆನ್​ಲೈನ್​ ಮೂಲಕ ಸಾಧ್ಯವಿಲ್ಲ.

ಖಾತೆ ಕ್ಲೋಸ್​ ಮಾಡಿಸಲು ಶುಲ್ಕ ಕಟ್ಟಬೇಕಾ?

ಖಾತೆ ತೆರೆದು 14 ದಿನಗಳೊಳಗೆ ಮುಚ್ಚಿದರೆ ಬ್ಯಾಂಕ್​ಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. 1 ವರ್ಷಕ್ಕೆ ತೆರೆದ ನಂತರ 14 ದಿನಗಳ ಅವಧಿಯಲ್ಲಿ ಅದನ್ನು ಮುಚ್ಚಲು ಯಾರಾದರೂ ಬಯಸಿದರೆ, ಅವನು ಖಾತೆ ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ, ನೀವು ಒಂದು ವರ್ಷಕ್ಕಿಂತ ಹಳೆಯದಾದ ಖಾತೆಯನ್ನು ಮುಚ್ಚಿದರೆ ಯಾವುದೇ ಶುಲ್ಕವಿರುವುದಿಲ್ಲ. ಖಾತೆ ಮುಚ್ಚುವ ಅಫ್ಲಿಕೇಶನ್​​ ಜೊತೆಗೆ ಬಳಕೆಯಾಗದ ಚೆಕ್ ಬುಕ್ ಮತ್ತು ಡೆಬಿಟ್ ಕಾರ್ಡ್​​ನ್ನು ಬ್ಯಾಂಕ್​ಗೆ ನೀಡಬೇಕು.

ಖಾತೆಯಲ್ಲಿರುವ ಹಣ ತೆಗೆಯುವುದು ಹೇಗೆ?

ಮುಚ್ಚಬೇಕಾದ ಖಾತೆಯಲ್ಲಿ ಹಣವಿದ್ದರೆ, 20,000 ರೂ. ವರೆಗೆ ಮಾತ್ರ ನಗದು ರೂಪದಲ್ಲಿ ಹಣ ತೆಗೆದುಕೊಳ್ಳಬಹುದು. ಈ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸುವ ಅವಕಾಶವಿದೆ. ಒಂದು ವೇಳೆ ಖಾತೆಯಲ್ಲಿ ದೊಡ್ಡ ಮೊತ್ತದ ಹಣವಿದ್ದರೆ, ಅದನ್ನು ಕ್ಲೋಸ್​ ಮಾಡಿಸುವ ಮೊದಲು ಮತ್ತೊಂದು ಖಾತೆಗೆ ವರ್ಗಾಯಿಸಬೇಕು.