ಪ್ರತಿದಿನ ಅಲಾರ್ಮ್ ಇಟ್ಟುಕೊಂಡು ಎಳುತ್ತಿರಾ ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ಯಾಕೆ ಅಂತ ಈ ಮಾಹಿತಿ ನೋಡಿ..

0
1313

ಈ ಬ್ಯುಸಿ ಕಾಲದಲ್ಲಿ ಸಮಯದ ಮಹತ್ವ ಮುಖ್ಯವಾಗಿದೆ. ಅದಕ್ಕಾಗಿ ಪ್ರತಿದಿನ ಬೆಳಗ್ಗೆ ಏಳಲು ಮನಸ್ಸಿಲ್ಲದಿದ್ದರು ಎಬ್ಬಿಸುವ ಒಂದು ಭೂತವನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದು ಪ್ರತಿಯೊಬ್ಬರ ದಿನಚರಿಯಲ್ಲಿ ಸೇರಿದೆ. ಅದಕ್ಕಾಗಿ ಗಡಿಯಾರದಲ್ಲಿ ಅಥವಾ, ಮೊಬೈಲ್-ಗಳಲ್ಲಿ ಅಲಾರ್ಮ್ ಇಟ್ಟುಕೊಂಡು ಮಲಗುವುದು ಸಾಮಾನ್ಯವಾಗಿದೆ. ಇದರಿಂದ ದಿನವೂ ಅರ್ಧ ನಿದ್ರೆ ಆಗುವುದು ಸಾಮಾನ್ಯವಾಗಿದೆ. ಬೆಳಗ್ಗೆ 6 ಘಟನೆಗೆ ಅಲಾರ್ಮ್ ಇಟ್ಟರೆ ಏಳುವುದು ಕೂಡ 7 ರ ಹೊತ್ತಿಗೆ ಅಂದರೆ ಅಲಾರ್ಮ್ ಶಬ್ದ ಹತ್ತಾರು ಸಲ ಹೊಡೆದ ನಂತರ ಎಚ್ಚರವಾಗುತ್ತೆ, ಈ ನಡುವೆ ಹಲವು ಬಾರಿ ನಿದ್ದೆ ಹತ್ತುವುದು ಮತ್ತೆ ಎಚ್ಚರವಾಗುವುದು ಇದ್ದೆ ಇರುತ್ತದೆ, ಇದರಿಂದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಹಲವು ಅಧ್ಯಯನಗಳು ತಿಳಿಸಿವೆ.

Also read: ಸರಿಯಾಗಿ ನಿದ್ದೆ ಮಾಡದೆ ಇದ್ರೆ ಎಷ್ಟೊಂದು ತೊಂದರೆ ಗೊತ್ತಾ? ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡಿದರೆ ಹೃದಯದ ಕಾಯಿಲೆ ಬರಬಹುದಂತೆ..

ಹೌದು ಬೆಳಗ್ಗೆ ಏಳಲು ಇಡುವ ಅಲಾರ್ಮ್-ನಿಂದ ಆರೋಗ್ಯದ ಮೇಲೆ ಸಾಕಷ್ಟ ಪರಿಣಾಮ ಬಿರುತ್ತೇವೆ. ಅದು ಹೇಗೆ ಎಂದರೆ ಬೆಳಗ್ಗಿನ ಜಾವ ಹೆಚ್ಚು ನಿದ್ದೆ ಇರುತ್ತದೆ. ಇಂತಹ ಸುಖಕರ ನಿದ್ದೆಯಲ್ಲಿ ದೇಹವು ಸಂಪೂರ್ಣ ವಿಶ್ರಾಂತಿಯಲ್ಲಿರುತ್ತದೆ. ಅಂದರೆ ಕೋಮಾಕ್ಕಿಂತ ಹೆಚ್ಚು ವಿಶ್ರಾಂತಿಯಲ್ಲಿರುತ್ತದೆ. ಈ ಸಮಯದಲ್ಲಿ ಅಲಾರ್ಮ್ ಶಬ್ದದಿಂದ ಒಂದೇ ಸಮನೆ ಎದ್ದರೆ. ಹೃದಯ ಬಡಿತದಲ್ಲಿ ಹೆಚ್ಚಳವಾಗಿ, ಹೃದಯಾಘಾತ ಸಂಭವಿಸಬಹುದು, ಅಥವಾ ದೇಹದಲ್ಲಿ ನೋವು ಕಾಣಿಸಬಹುದು. ಮತ್ತು ತೀವ್ರ ನೋವು, ಮೈಗ್ರೇನ್‌ಗೆ ಕಾರಣವಾಗಬಹುದು. ಏಕೆಂದರೆ ನಿದ್ರೆಯಲ್ಲಿರುವಾಗ ಮೇಲೇಳಲು ಸ್ವಲ್ಪ ಸಮಯ ಬೇಕಾಗುತ್ತದೆ.

ಇಂತಹ ಸಮಯದಲ್ಲಿ ಕಿರು ನಿದ್ದೆಗೆ ಜಾರುವುದು ಹೆಚ್ಚಾಗಿರುತ್ತದೆ. ಶಬ್ದ ಮಾಡಿದಾಗೆಲ್ಲ ಎಚ್ಚರವಾಗುತ್ತೆ ಮತ್ತೆ ನಿದ್ದೆಗೆ ಒಯುತ್ತೆ, ಇದರ ನಡುವೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತೆ. ಇದನ್ನು ಸ್ಲೀಪ್ ಇನರ್ಶಿಯಾ ಅಥವಾ ನಿದ್ರೆಯ ಜಡತ್ವ ಎಂದು ಕರೆಯಲಾಗುವ ಕಿರಿಕಿರಿಯ ಭಾವವನ್ನು ಉಂಟು ಮಾಡುತ್ತದೆ. ಇದರಿಂದ ಗೊಂದಲವೂ ಹೆಚ್ಚುತ್ತದೆ ಮತ್ತು ಸ್ಲೀಪ್ ಇನರ್ಶಿಯಾ ದಿನವಿಡೀ ಮುಂದುವರಿಯುತ್ತದೆ. ಕೆಲಸದ ವೇಳೆ ದೇಹದಲ್ಲಿ ನೋವು ಕಾಣುತ್ತದೆ.

Also read: ನೀವು ನಿದ್ದೆಯಲ್ಲಿ ಕನಸು ಕಾಣೋದು ಕಡಿಮೆಯಾಗಿದೀಯಾ?? ಹಾಗಿದ್ರೆ ನೀವು ರೋಗಕ್ಕೆ ಹತ್ರವಾಗ್ತಿದೀರಾ ಜಾಗ್ರತೆ…

ಕಿರು ನಿದ್ದೆಯಿಂದ ಹೇಗೆ ಅಪಾಯ?

ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಅಲಾರ್ಮ್ ಇಡುವುದು ಮತ್ತು ಏಳು ಗಂಟೆಗೆ ಏಳುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕಾರವಾಗಿದೆ. ನಿಮ್ಮ ಅಲಾರ್ಮ್ ಗಡಿಯಾರದಂತೆ ನಿಮ್ಮೊಳಗೂ ಜೈವಿಕ ಗಡಿಯಾರವು ಇರುತ್ತದೆ ಮತ್ತು ದೇಹಕ್ಕಾಗಿ ಸಮಯಗಳನ್ನು ನಿಗದಿಗೊಳಿಸುತ್ತದೆ. ಈ ವೇಳಾಪಟ್ಟಿ ನೀವು ಯಾವಾಗ ಮಲಗಬೇಕು ಮತ್ತು ಯಾವಾಗ ಏಳಬೇಕು ಎನ್ನುವುದನ್ನು ನಿಮಗೆ ಸೂಚಿಸುತ್ತದೆ. ಕೆಲವರಿಗಂತೂ ನಿದ್ದೆಯ ಸಮಯ ಫಿಕ್ಸ್ ಆಗಿರುತ್ತದೆ. ಮಲಗುವುದು ಅದೇ ಸಮಯಕ್ಕೆ ಆದರೆ ಏಳುವುದು ಕೂಡ ಒಂದೇ ಸಮಯಕ್ಕೆ ಆಗಿರುತ್ತೆ. ಇದರಿಂದ ಅವರ ದೇಹದಲ್ಲಿ ಯಾವುದೇ ತೊಂದರೆಗಳು ಕಂಡು ಬರುವುದಿಲ್ಲ, ಆದರೆ ಈಗಿನ ಜನರಲ್ಲಿ ಮೊಬೈಲ್-ನಿಂದ ನಿದ್ದೆ ಮಾಡುವುದೇ ಕಡಿಮೆಯಾಗಿದ್ದು, ಹೆಚ್ಚು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಈ ಅಪಾಯದಿಂದ ಹೊರಬರುವುದು ಹೇಗೆ?

Also read: ನಿದ್ದೆ ಮಾಡೋದು ಒಳ್ಳೇದೇ, ಆದರೆ ಅದು ಜಾಸ್ತಿ ಆದರೆ ದೇಹಕ್ಕೆ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತೆ ಗೊತ್ತ?

ಪ್ರತಿದಿನ ರೂಡಿಸಿಕೊಂಡ ಅಲಾರ್ಮ್ ಪದ್ದತಿಯನ್ನು ಬದಲಿಸಿಕೊಂಡು ಏಳುವುದು ಮುಖ್ಯವಾಗಿದೆ. ಹೇಗೆಂದರೆ ಒಂದೇ ಸಾರಿ ಅಲಾರ್ಮ್ ಶಬ್ದವಾದರೆ ಸ್ವಲ್ಪ ಸಮಯ ತೆಗೆದುಕೊಂಡು ನಿಧಾನವಾಗಿ ಎದ್ದೇಳಿ. ಮತ್ತೆ ಅಲಾರ್ಮ್ ಬಟನ್ ಒತ್ತಿ, ಹತ್ತು ನಿಮಿಷ ಬಿಟ್ಟು ಏಳುವ ಪದ್ದತಿಯನ್ನು ಕೈ ಬಿಟ್ಟರೆ ಆರೋಗ್ಯದಲ್ಲಿ ಯಾವುದೇ ತೊಂದರೆಗಳು ಕಂಡು ಬರುವುದಿಲ್ಲ ಮತ್ತು ಪ್ರತಿದಿನವೂ ಸಹಜ ನಿದ್ದೆ ಬರಲು ಸಾಧ್ಯವಾಗುತ್ತದೆ.