ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ..!!

0
1900

Kannada News | Karnataka Temple History

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ರಾಜ್ಯದ ಪ್ರಸಿದ್ಧಿ ದೇವಸ್ಥಾನಗಳಲ್ಲಿ ಒಂದು. ಸಾವಿರಾರು ಇತಿಹಾಸವನ್ನು ಹೊಂದಿರುವ ಈ ದೇವಾಲಯ ಧೂರ್ವಾಸ ಮುನಿಗಳು ಕಟ್ಟಿದ್ದೆಂದು ಹೇಳಲಾಗುತ್ತದೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ೪೫ ಕಿಲೋಮೀಟರ್ ಸಂಚರಿಸಿದರೆ ಮಾಗಡಿ ತಾಲ್ಲೂಕಿನ ಸೂನುರಿನ ತಟ್ಟಕೇರೆ ಗ್ರಾಮದ ಬೆಟ್ಟದ ಮೇಲಿರುವ ಆ ದಿವ್ಯ ದೇಗುಲವೇ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ. ಪೌರಾಣಿಕ ಮಹಿಮೆಯನ್ನು ಹೊಂದಿರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನವನ್ನ ದ್ವಾಪರಯುಗ ಅಂತ್ಯವಾಗಿ ಕಲಿಯುಗ ಪ್ರಾರಂಭ ವಾಗುವ ಸಮಯದಲ್ಲಿ ಧೂರ್ವಾಸ ಮುನಿಗಳು ನಿರ್ಮಿಸಿದರೆಂದು ಹೇಳಲಾಗುತ್ತದೆ. ಲಕ್ಷ್ಮೀ ರಂಗನಾಥ ಸ್ವಾಮಿಯ ಎಡಭಾಗದಲ್ಲಿ ಲಕ್ಷ್ಮೀ ದೇವಿಯ ಮೂರ್ತಿ ಇದ್ದು ಬಲಭಾಗದಲ್ಲಿ ರಾಮಾನುಜಾಚಾರ್ಯರು ಇದ್ದಾರೆ. ಹಿಂದೆ ಧೂರ್ವಾಸ ಮುನಿಗಳು ಸ್ಥಾಪಿಸಿದ್ದ ಕಂಬದ ನರಸಿಂಹ ಸ್ವಾಮಿಯನ್ನು ಕಾಣಬಹುದಾಗಿದೆ. ಶ್ರೀ ರಂಗನಾಥ ಸ್ವಾಮಿಯ ಪರಮ ಭಕ್ತನಾಗಿದ್ದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಆಗಾಗ ಈ ದೇವಸ್ಥಾನಕ್ಕೆ ಭೇಟಿ ನಿಡುತ್ತಿದ್ದರಂತೆ.

ಹೀಗೆ ಒಮ್ಮೆ ರಂಗನಾಥ ಸ್ವಾಮಿಯ ದರ್ಶನಕ್ಕೆ ಬಂದಾಗ ಕಂಬದ ನರಸಿಂಹ ಸ್ವಾಮಿಯನ್ನು ಶ್ರೀ ರಂಗನಾಥ ಸ್ವಾಮಿ ಎಂದು ಕರೆಯಲು ಹೇಳಿದರಂತೆ ಆದುದರಿಂದ ಅಂದಿನಿಂದ ಈ ದೇವಸ್ಥಾನವನ್ನು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಎಂದು ಕರೆಯಲಾಗುತ್ತದೆ. ಕಂಬದ ನರಸಿಂಹನನ್ನು ಶ್ರೀ ಲಕ್ಷ್ಮೀ ನರಸಿಂಹ ಎಂದು ದೇವರನ್ನು ಇಲ್ಲಿ ಪೂಜಿಸಲಾಗುತ್ತದೆ. ಪ್ರತಿನಿತ್ಯ ಮುಂಜಾನೆಯ ಅಭೀಷೆಕದೊಂದಿಗೆ ಆರಂಭವಾಗುವ ದೇವರ ಪೂಜೆ ಪುನಸ್ಕಾರಗಳು ನೀರು ಹಾಲು ಮೊಸರು ಹೀಗೆ ಪಂಚಾಮ್ರುತಗಳಿಂದ ಮಾಡುವ ಅಭೀಷೇಕ ವನ್ನು ನೋಡುವುದೇ ಒಂದು ಭಾಗ್ಯ. ಭಗವಂತನಿಗೆ ಸರ್ವವನ್ನು ಸಮರ್ಪಿಸಿದ ಮೇಲೆ. ಭಗವಂತನನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ನಂತರ ಸ್ವಾಮಿಗೆ ಮಂಗಳಾರತಿಯನ್ನು ಮಾಡಲಾಗುತ್ತದೆ. ಎರಡು ಎಕರೆಯಷ್ಟು ದೇಗುಲದ ಜಾಗವಿದ್ದು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ದೇಗುಲ ನೂರಾರು ವರುಷಗಳ ಹಿಂದೆ ನಿರ್ಮಾಣಗೊಂಡಿದೆ. ಪೂರ್ವ ಅಭಿಮುಖವಾಗಿರುವ ದೇವಾಲಯದ ಗರ್ಭಗುಡಿಯು ಸ್ವಲ್ಪ ಬಲಭಾಗಕ್ಕೆ ತಿರುಗಿದೆ.

ಜೊತೆಗೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಮೂರ್ತಿಯು ಸ್ವಲ್ಪ ಬಲಬಾಗಕ್ಕೆ ತೀರುಗಿರುವುದು ವಿಶೇಷ. ಇನ್ನು ದೇವಸ್ಥಾನದ ಮುಂದೆ ಒಂದು ದೊಡ್ಡ ಕೊಳವಿದ್ದು, ಸುಮಾರು ೧೫ ಅಡಿಯಿಂದ ೨೦ ಅಡಿ ಆಳವಿದೆ. ಈ ಕಲ್ಯಾಣಿಯ ವಿಶೇಷವೇನೆಂದರೆ ಇದು ಬೆಟ್ಟದ ಮೇಲೆ ಇರುವ ಈ ಕೊಳದಲ್ಲಿ ಸದಾ ಕಾಲ ನೀರು ತುಂಬಿರುತ್ತದೆ ಅಲ್ಲದೆ ಈ ನೀರು ಪವಿತ್ರ ತೀರ್ಥ ಸ್ವರೂಪವನ್ನು ಪಡೆದುಕೊಂಡು ಭಕ್ತರು ಭಕ್ತಿಯಿಂದ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ. ಇನ್ನು ರಂಗನಾಥ ಸ್ವಾಮಿ ದೇವಾಲಯದ ಎದುರಿಗೆ ಸುಮಾರು ೫೦ ಅಡಿ ಎತ್ತರದ ಬೃಹತ್ ಗರುಡ ಕಂಬವಿದೆ ಮೂರು ಕಲ್ಲುಗಳಿಂದ ನಿರ್ಮಾನಗೊಂಡಿರುವ ಈ ಗರುಡಕಂಬ ನೋಡಲು ಯೆಕಶಿಲೆಯಂತೆ ಕಾಣುತ್ತದೆ. ಗರುಡ ಕಂಬದ ಎದುರಿಗೆ ಆಂಜನೇಯನ ಮೂರ್ತಿ ಇದೆ. ದೇವಸ್ಥಾನದ ಎಡ ಭಾಗದಲ್ಲಿ ವೀನಾಯಕಾನ ಮೂರ್ತಿ ಇದ್ದು ಎಡಭಾಗದಲ್ಲಿ ನವಗ್ರಹಗಳಿವೆ. ಗರುಡ ಕಂಬದ ಎಡಕ್ಕೆ ಗರುಡ ದೇವನ ವಿಗ್ರವನ್ನು ಕಾಣಬಹುದು. ಇದರ ಪಕ್ಕದಲ್ಲಿ ಧೂರ್ವಾಸ ಮುನಿಗಳ ತಪೋಮಂಟಪವನ್ನು ಕಾಣಬಹುದು.

ಹಿಂದೆ ಧೂರ್ವಾಸ ಮುನಿಗಳು ಇಲ್ಲಿಯೇ ಕುಳಿತು ತಪಸ್ಸು ಮಾಡಿದರೆಂದು ಹೇಳಲಾಗುತ್ತದೆ. ಲಕ್ಷ್ಮೀಶನ ಕವಿಯು ಕನ್ನಡ ಜೈಮಿನಿ ಭಾರತ ಕೃತಿಯನ್ನು ಈ ಸನ್ನಿಧಿಯಲ್ಲಿ ಕುಳಿತು ಪೂರ್ಣ ಗೊಳಿಸಿದ್ದರೆನ್ನುವುದು ಇಲ್ಲಿನ ಇನ್ನೊಂದು ಇತಿಹಾಸ. ಇಲ್ಲಿ ಪ್ರತೀ ವರ್ಷ ರಥಸಪ್ತಮಿಯಂದು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಜಾತ್ರೆಯನ್ನು ನಡೆಸಲಾಗುತ್ತದೆ. ಜಾತ್ರೆಯಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ವಿಜ್ರುಭಣೆ ಇಂದ ನಡೆಯುತ್ತದೆ. ಹಿಂದೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯನ್ನು ಕಲ್ಲಿನ ರಥದಲ್ಲಿ ಕುಡಿಸಿ ಸೋಲುರಿನ ವರೆಗೂ ರಥವನ್ನು ಎಳೆದುಕೊಂಡು ಹೋಗುತ್ತಿದ್ದರಂತೆ. ಆಗ ಇಲ್ಲಿಗೆ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ರತ್ಹೊಥ್ಸವದಲ್ಲಿ ಪಲ್ಗೊಳುತ್ತಿದ್ದರು ಎಂಬ ಉಲ್ಲೇಖಗಳು ಇವೆ. ಇನ್ನು ಪ್ರತಿಯೊಂದು ಹಬ್ಬಗಳಲ್ಲೂ ಶ್ರೀ ರಂಗನಾಥ ಸ್ವಾಮಿಯನ್ನು ವಿಶಿಷ್ಟವಾಗಿ ಪೂಜಿಸಲಾಗುತ್ತದೆ. ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಎಂದು ಹೇಳಲಾಗುತ್ತದೆ.

ವಿವಾಹ, ಸಂತನ, ಉದ್ಯೋಗ, ಶಿಕ್ಷಣ ಹೀಗೆ ನನಾತರಹದ ತೊಂದರೆಗಳನ್ನು ಹೊಂದಿರುವ ಭಕ್ತರು ಬಂದು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯಲ್ಲಿ ಬೇಡಿಕೊಳ್ಳುತ್ತಾರೆ. ವಿಶೇಷವಾಗಿ ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ ಸಂತಾನಕ್ಕಾಗಿ ಬೇಡಿ ಬರುವ ಭಕ್ತರು ಜಾಸ್ತಿಯಾಗಿದ್ದಾರಂತೆ.

Also Read: ವಿಶೇಷವಾದ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಯೋಗನರಸಿಂಹ ಸ್ವಾಮಿಯ ದರ್ಶನ ಮಾಡಿದರೆ ನಮ್ಮ ಪಾಪವೆಲ್ಲಾ ನಾಶವಾಗಿ ಪುಣ್ಯ ಪ್ರಪ್ತಿಯಗುತ್ತಂತೆ..!!