700 ವರ್ಷಗಳ ಇತಿಹಾಸವಿರುವ ಪುರಾತನವಾದ ಮೈಸೂರಿನ ಶ್ರೀವೇಣುಗೋಪಾಲ ಸ್ವಾಮಿ ದೇಗುಲ ಒಮ್ಮೆ ಹೋಗಿ..!

0
1121

Kannada News | Karnataka Temple History

 

ಮೈಸೂರು ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅರಮನೆ, ಮೃಗಾಲಯ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಮೈಸೂರು ಅಗ್ರಸ್ಥಾನವನ್ನು ಪಡೆದಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿನ ಸಂಸ್ಕøತಿ ಪ್ರವಾಸಿಗರನ್ನು ಸರ್ವ ಋತುಗಳಲ್ಲೂ ತನ್ನೆಡೆಗೆ ಕೈ ಬೀಸಿ ಕರೆಯುತ್ತದೆ. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸರ್.ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕಟ್ಟಲಾಗಿದ್ದು, ಇದು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ನೀರುಣಿಸುವ ಜೀವನಾಡಿಯಾಗಿದೆ. ಅಣೆಕಟ್ಟೆ ನಿರ್ಮಾಣವಾದ ನಂತರ ಇಲ್ಲಿನ ನೀರಿನ ಒಳಹರಿವಿನ ಮಟ್ಟ ಹೆಚ್ಚಿದಂತೆಲ್ಲ ಜಲಾಶಯವು ಇದರ ಹಿನ್ನೀರು ಪ್ರದೇಶದಲ್ಲಿರುವ ಸರ್ವಸ್ವವನ್ನೂ ತನ್ನ ಒಡಲೊಳಗೆ ಸೇರಿಸಿಕೊಳ್ಳುವುದು ಸಾಮಾನ್ಯ.

Related image

ಇದೇ ರೀತಿ ಹೊಯ್ಸಳರ ಕಾಲದಲ್ಲಿ ಕನ್ನಂಬಾಡಿ ಗ್ರಾಮದಲ್ಲಿ ನಿರ್ಮಾಣವಾಗಿದ್ದ 700 ವರ್ಷಗಳ ಇತಿಹಾಸವಿರುವ ಪುರಾತನವಾದ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯವೂ ಈ ಜಲಾಶಯದ ಒಡಲೊಳಗೆ ಸೇರಿಕೊಂಡು ಬಿಟ್ಟಿತ್ತು. ಮನೋಹರ ದೇವಾಲಯ ಮೈಸೂರಿಗೆ ಪ್ರವಾಸ ಹೊರಟಿರಿ ಎಂದಾದರೆ ಈ ಅಣೆಕಟ್ಟೆಯ ಹಿನ್ನೀರಿನ ದಡದಲ್ಲಿರುವ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯಕ್ಕೊಮ್ಮೆ ಭೇಟಿ ನೀಡುವುದನ್ನು ಮರೆಯದಿರಿ. ಏಕೆಂದರೆ ಈ ಪ್ರದೇಶ ಅತ್ಯಂತ ಪ್ರಶಾಂತವಾಗಿದ್ದು ನೋಡಲು ಅತ್ಯಂತ ಮನೋಹರವಾಗಿದೆ. ದೇವಾಲಯದ ತಟದಲ್ಲಿ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ಜಲರಾಶಿಯಷ್ಟೇ ಕಾಣುತ್ತದೆ. ದೂರದಲ್ಲಿ ಅಣೆಕಟ್ಟೆಯ ವಿಹಂಗಮ ನೋಟವು ಪ್ರವಾಸಿಗರನ್ನು ಉನ್ಮಾದಗೊಳಿಸುತ್ತವೆ.

watch:

 

ಕ್ರಿ.ಶ 13ನೇ ಶತಮಾನದಲ್ಲಿ ಹೊಯ್ಸಳರು ಸೊಮನಾಥಪುರ ದೇವಾಲಯವನ್ನು ನಿರ್ಮಿಸಿದ ಕಾಲದಲ್ಲಿ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯವನ್ನು ಕನ್ನಂಬಾಡಿ ಗ್ರಾಮದಲ್ಲಿ ಕಾವೇರಿ ನದಿಯ ತಟದದಲ್ಲಿ ನಿರ್ಮಿಸಿದರೆಂದು ಇತಿಹಾಸ ತಿಳಿಸುತ್ತದೆ. ಅಣೆಕಟ್ಟು ಮುಳುಗಡೆ 1909ರಲ್ಲಿ ಸರ್‍ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕನ್ನಂಬಾಡಿ ಅಣೆಕಟ್ಟು ರಚನೆಯ ಮೊದಲ ಹಂತದ ನಿರ್ಮಾಣದ ಸಂದರ್ಭದಲ್ಲಿ ಸುತ್ತಮುತ್ತಲಿನ ಆಯಕಟ್ಟು ಪ್ರದೇಶವೆಲ್ಲ ಮುಳುಗಡೆಯಾದಾಗ ಈ ದೇವಾಲಯದ ಜೊತೆಗೆ ಕನ್ನೇಶ್ವರ (ಈಶ್ವರ) ದೇವಾಲಯ ಮತ್ತು ಕಾಳಮ್ಮ (ಗ್ರಾಮದೇವತೆ) ಗುಡಿಯು ಸಂಪೂರ್ಣವಾಗಿ ಮುಳುಗಡೆಯಾಯಿತು. 2003ನೇ ಇಸವಿಯ ನಂತರ ರಾಜ್ಯವು ಬರ ಪೀಡಿತವಾದಾಗ ಅಣೆಕಟ್ಟೆಯ ನೀರು ಖಾಲಿಯಾಗುತ್ತಾ ಬಂದು ನಿಧಾನವಾಗಿ ಈ ದೇವಾಲಯದ ಇರುವಿಕೆಯ ಸುಳಿವು ಸಿಕ್ಕಿದ್ದು, ನಂತರದಲ್ಲಿ ಈ ದೇವಾಲಯವು ಸಂಪೂರ್ಣವಾಗಿ ಗೋಚರವಾಗತೊಡಗಿತು.

ಸರಿ ಸುಮಾರು 70 ವರ್ಷಗಳಿಂದ ಈ ದೇವಾಲಯ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿಯೇ ಇತ್ತೆಂದು ಇಲ್ಲಿನ ಹಿರಿಯರು ಅಭಿಪ್ರಾಯಪಡುತ್ತಾರೆ.ವಿವಿಧ ಬಗೆಯ ಗೋಪುರಗಳು ಮೂಲ ದೇವಾಲಯದಲ್ಲಿ ಸುಮಾರು 46 ಗೋಪುರಗಳಿದ್ದು, ಇದರಲ್ಲಿ17 ದಕ್ಷಿಣಾಭಿಮುಖವಾಗಿ, 12 ಪಶ್ಚಿಮಾಭಿಮುಖವಾಗಿ ಹಾಗೂ 17 ಉತ್ತರಾಭಿಮುಖವಾಗಿವೆ. ವಿಷ್ಣುವಿನ ಹತ್ತು ಅವತಾರಗಳ ಸುಮಾರು 24 ಮೂರ್ತಿಗಳನ್ನು ಮತ್ತು ಬ್ರಹ್ಮ, ಸರಸ್ವತಿ, ಹಯಗ್ರೀವ ಮತ್ತು ಹರಿಹರ ಮೂರ್ತಿಗಳನ್ನು ಈ ಗೋಪುರಗಳಲ್ಲಿ ಕಾಣಬಹುದಾಗಿದೆ. ಮೂಲ ದೇವಾಲಯದ ಕೆತ್ತನೆಯಲ್ಲಿ ಹೊನ್ನೆ ಮರದ ಕೆಳಗೆ ದನಗಾಹಿಗಳು ಮತ್ತು ಗೋಪಿಕೆಯರ ಜೊತೆ ನಿಂತಿರುವ ಗೋಪಾಲಕೃಷ್ಣನನ್ನು ಕಾಣಬಹುದಾಗಿದೆ. ಕನ್ನಂಬಾಡಿಕಟ್ಟೆಯ ಗರಿಷ್ಟ ಎತ್ತರ ಸುಮಾರು 124.80 ಅಡಿ ಆಗಿದ್ದು, ಜಲಾಶಯ ನೀರಿನಿಂದ ಭರ್ತಿಗೊಂಡಾಗ ಇದರ ಹಿನ್ನೀರು ಈಗಿನ ದೇವಾಲದ ತಟದವರೆಗೂ ತಲುಪುತ್ತದೆ.

ಇಲ್ಲಿನ ಶಿಲ್ಪಕಲೆಯು ದ್ರಾವಿಡ ಮತ್ತು ಚಾಲುಕ್ಯ ಶೈಲಿಯನ್ನು ಹೋಲುತ್ತದೆ. ತಮಿಳುನಾಡು ತಜ್ಞರು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ದೇವಾಲಯವನ್ನು ಹೊಯ್ಸಳರ ವಾಸ್ತುಶಿಲ್ಪ ಶ್ಯೆಲಿಯನ್ನೇ ಅನುಸರಿಸಿಕೊಂಡು ಮತ್ತು ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಬಳಸಲಾದ ಕಲ್ಲುಗಳನ್ನೇ ದಡಕ್ಕೆ ತಂದು ಅವುಗಳನ್ನು ಬಳಸಿ ಈ ದೇವಾಲಯವನ್ನು ನಿರ್ಮಿಸಿರುವುದು ಇಲ್ಲಿನ ವಿಶೇಷತೆಯಾಗಿದೆ. ಈ ದೇವಾಲಯ ನಿರ್ಮಾಣದಲ್ಲಿ ಕುಶಲಕರ್ಮಿಗಳು ಮತ್ತು ಶಿಲ್ಪಿಗಳ ಜೊತೆಯಲ್ಲಿ ಸುಮಾರು ಅರ್ಧಡಜನ್ ಸಂಖ್ಯೆ ತಮಿಳುನಾಡಿನ ವಿಶೇಷ ತಜ್ಞರೂ ಇದರ ನಿರ್ಮಾಣದಲ್ಲಿ ಶ್ರಮಿಸಿದ್ದಾರೆ.

 

Also read: ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳಲ್ಲಿ ಒಂದಾದ ಘ್ರಷ್ಣೇಶ್ವರ ಜ್ಯೋತಿರ್ಲಿಂಗದ ಮಹಿಮೆ.