ಈಶ್ವರ ಸಾನಿದ್ಯ ಹಾಗು ವಿಷ್ಣುವಿನ ಸಾನಿಧ್ಯ ಒಟ್ಟೆಗೆ ಇರುವ ಅತ್ಯಂತ ಪುರಾತನ ದೇವಾಲಯವಾದ ಉಡುಪಿಯ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಇತಿಹಾಸ..!!

0
3056

ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ. ಶಿವಳ್ಳಿ ಎಂದು ಈ ಗ್ರಾಮಕ್ಕೆಹೆಸರು ಬರಲು ಕಾರಣವಾದ ದೇವಾಲಯ. ಶಿವಳ್ಳಿಯ ಮೂಲ ರೂಪ ಶಿವಳ್ಳಿ ಪ್ರಾಚಿನ ಗ್ರಂಥಗಳಲ್ಲಿ ಇದನ್ನು ಶಿವ ಬೆಳ್ಳಿ ಎಂದು ಕರೆದಿದ್ದಾರೆ. ಈ ಮಾತನ್ನು ಸಂಸ್ಕೃತದಲ್ಲಿ “ರೂಪ್ಯಪೀಠ”, “ರಜತಪೀಠ” ಎಂದೆಲ್ಲ ಪ್ರಸಿದ್ಧವಾಯಿತು. ಹೀಗೆ ಉಡುಪಿಗೆ ರೂಪ್ಯಪೀಠಪುರ ಎಂದು ಹೆಸರು ಬಂದದ್ದು ಈ ದೇವಾಲಯದಿಂದ ಬಂದಿದ್ದು ಐತಿಹ್ಯ.

Also read: ಕಾಂಬೋಡಿಯಾದ ಆಂಗ್ಕೋರ್ ವಾಟ್ ನಲ್ಲಿರುವ ವಿಶ್ವದ ಅತೀ ದೊಡ್ಡ ದೇವಾಲಯದ ಅಚ್ಚರಿ ಸಂಗತಿಗಳನ್ನು ಕೇಳಿದ್ರೆ ಹಿಂದೂ ಧರ್ಮದ ಬಗ್ಗೆ ಹೆಮ್ಮೆಯುಂಟಾಗುತ್ತದೆ..

ಇಲ್ಲಿರುವ ಮೂರ್ತಿ ಶೈವರಿಗೆ ಶಿವ; ವೈಷ್ಣವರಿಗೆ ವಿಷ್ಣುವೂ ಹೌದು. ಅದಕ್ಕೆಂದೆ ಇಲ್ಲಿರುವುದು ಲಿಂಗ. ಆದರೆ ಪ್ರಾಚೀನ ಉತ್ಸವಮೂರ್ತಿ ಅನಂತ ಪದ್ಮನಾಭ. ಹೀಗೆ ಇದೊಂದು ಹರಿಹರ ಕ್ಷೇತ್ರವಾಗಿದೆ. ಹರ ಲಿಂಗದಲ್ಲಿ ಹರಿ ನೆಲೆಸಿದ ಕ್ಷೇತ್ರ ಎಂಬುವುದು ಹಲವು ಗ್ರಂಥಗಳಲ್ಲಿ ಪ್ರಸಿದ್ಧಿ ಪಡೆದಿದೆ. ಶ್ರೀ ವಾದಿರಾಜ ತಮ್ಮ ಗ್ರಂಥದಲ್ಲಿ ಶ್ರೀ ಅನಂತೇಶ್ವರಸ್ವಾಮಿ ಬಗ್ಗೆ ಕೊಂಡಾಡಿದ್ದಾರೆ.

ಮದ್ವಾಚಾರ್ಯರ ತಂದೆ ಈ ದೇವಸ್ಥಾನದ ಅರ್ಚಕರಾಗಿದ್ದರು ಎಂದು ಐತಿಯ್ಯ. ಅವರು ಇಲ್ಲಿಂದ ಪಾಜಕಕ್ಕೆ ಹೋಗಿ ನೆಲೆಸಿದಾಗ ಈ ಅಧಿದೈವತದ ನೆನಪಿಗಾಗಿ ಒಂದು ಅನಂತ ಪದ್ಮನಾಭನ ಪ್ರತೀಕವನ್ನು ತಮ್ಮ ಉಪಾಸ್ಯಮೂರ್ತಿಯಾಗಿ ಪಾಜಕದಲ್ಲಿ ತಂದಿಟ್ಟುಕೊಂಡರು. ಆ ವಿಗ್ರಹ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆಚಾರ್ಯರ ಪೂರ್ವದಲ್ಲೆ ಅಲ್ಲಿ ವಿಷ್ಣುವಿನ ಆರಾಧನೆ ನಡೆಯುತ್ತಿತ್ತು ಎನ್ನುವುದಕ್ಕೆ ಇದೂ ಒಂದು ಸಾಕ್ಷಿ. ಈ ಅಧಿದೈವತೆಯ ಸೇವೆಯನ್ನು ನಡಿಲ್ಲಾಯ ದಂಪತಿಗಳು ಹರಕೆಹೊತ್ತು ನಡೆಸಿದ ಫಲವಾಗಿಯೆ ಆಚಾರ್ಯ ಮಧ್ವರ ಅವತಾರವಾಯಿತು ಎಂಬುವುದು ಉಲ್ಲೇಖ.

Also read: ಈ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾ ಕಟಾಕ್ಷ ದೊರೆತು ಮೋಕ್ಷ ಲಭಿಸುವುದಂತೆ..! ತಪ್ಪದೆ ನೀವು ಒಮ್ಮೆ ಭೇಟಿ ಕೊಡಿ.

ಅನಂತೇಶ್ವರ ದೇವಾಲಯಕ್ಕೆ ಪ್ರಾಚೀನ ಹೆಸರು ಪಡು ದೇವಾಲಯ. ಪಡು ದೇವಾಲಯದ ಮಹಾದೇವರು ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖ ಉಂಟು. ಅದರ ಪೂರ್ವದಲ್ಲಿರುವ ಚಂದ್ರೇಶ್ವರನ ಮಂದಿರವೇ ಮೂಡು ದೇವಾಲಯ.

ಆಚಾರ್ಯ ಮಧ್ವರು ತನ್ನ ಶಿಷ್ಯರಿಗೆ ಪ್ರವಚನ ನಡೆಸುತ್ತಿದ್ದದ್ದು ಈ ದೇವಾಲಯದ ಒಳ ಆವರಣದಲ್ಲಿ. ಆಚಾರ್ಯರು ಇಲ್ಲಿ ಐತರೇಯ ಪ್ರವಚನ ಮಾಡುತ್ತಿದ್ದಾಗ ಮುಗಿಲಿನಿಂದ ಪುಷ್ಪವೃಷ್ಟಿಯಾದ ಪ್ರಸಂಗವನ್ನೂ ಮಧ್ವವಿಜಯ ಉಲ್ಲೇಖಿಸುತ್ತದೆ.

ಆಚಾರ್ಯರು ಪ್ರವಚನ ಮಾಡುವಾಗ ಕೂಡುತ್ತಿದ್ದ ಶಿಲಾಫಲಕ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆ ಫಲಕದ ಮೇಲೆ ಬೇರೆ ವಿಗ್ರಹವಿಲ್ಲ. ಶಿಲಾಫಲಕಕ್ಕೆ ಪೂಜೆ. ಅದರಲ್ಲಿ ಆಚಾರ್ಯ ಮಧ್ವರು ಸದಾ ಸನ್ನಿಹಿತರಾಗಿದ್ದಾರೆ ಎಂದು ಶ್ರೀ ವಾದಿರಾಜರು ಬಣ್ಣಿಸಿದ್ದಾರೆ.

ಶ್ರೀ ಗಣಪತಿ ದೇವಸ್ಥಾನ

ಅನಂತೇಶ್ವರಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ನೆಲೆಸಿರುವ ಗಣಪತಿಯ ಶಕ್ತಿ ಅಪಾರ ಇಲ್ಲಿನ ಗಣಪತಿಯನ್ನು ಕಂಡರೆ ಸಾಕು ಮೈ ಮನಸ್ಸು ಚೈತನ್ಯಗೊಳುತ್ತದೆ. ಏನೋ ಒಂದು ರೀತಿಯ ಶಕ್ತಿ ಬಂದಂತಾಗುತ್ತದೆ. ಬೆಳ್ಳಿ ಖಚಿತ ವಿಗ್ರವಾಗಿರುವ ಗಣಪತಿಯ ಕಂಡು ಜಪಿಸಿದರೆ ನೂರೆಂಟು ಗಣಪನ ಕಂಡಂಥಹ ಅನುಗ್ರಹ ಪ್ರಾಪ್ತಿಯಾಗುತ್ತದೆ .

Also read: ಸೌಂದರ್ಯ ಹಾಗೂ ಭವ್ಯತೆಯಿಂದ ಕೂಡಿರುವ ಈ ಮಂದಿರದಲ್ಲಿ ಇರುವ 1444 ಕಂಬಗಳ ವೈಶಿಷ್ಟ್ಯತಿಳಿದರೆ ಆಶ್ಚರ್ಯ ಪಡತೀರಾ..!

ಈ ದೇವಾಲಯದ ವಾಸ್ತುವೂ ಇದರ ಪ್ರಾಚೀನತೆಗೆ ಸಾಕ್ಷಿ. ಗಜಪೃಷ್ಠಾಕಾರದ ಗರ್ಭ ಗೃಹ ಇದರ ಪುರಾತನತೆಯನ್ನು ಸಾರುತ್ತದೆ. ಅನೆ ಆಕರದಲ್ಲಿ ದೇಗುಲ ನಿರ್ಮಾಣವಾಗಿದೆ. ಗರ್ಭಗುಡಿಯೊಳಗೆ ಸಂಪೂರ್ಣ ಕತ್ತಲಿದೆ ಕೇವಲ ದೀಪದ ಬೆಳಕಿನಲ್ಲಿ ದೇವರ ದರ್ಶನ ವಾಗುತ್ತದೆ. ನಂಬಿದವರ ಕೈ ಬಿಡದ ಶಿವನು ಈ ಕ್ಷೇತ್ರದಲ್ಲಿ ಕಲಿಯುಗದಲ್ಲಿಯು ಪವಾಡಗಳನ್ನು ಸೃಷ್ಟಿಸುತ್ತಿದ್ದಾನೆ.

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಇತಿಹಾಸ

ಶ್ರೀ ಅನಂತೇಶ್ವರ ದೇವರ ಎದುರುಗಡೆಯೇ ಪೂರ್ವದಿಕ್ಕಿನಲ್ಲಿ ಪುಟ್ಟ ದೇವಸ್ಥಾನ. ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳು ದೊರೆತಿಲ್ಲ.

ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ. ಉಡುಪಿಯ ಕೇಂದ್ರದಿಂದ ಸುಮಾರು ಅರ್ದ ಕಿ.ಮೀ ದೂರದಲ್ಲಿ ಅಬ್ಜಾರಣ್ಯ(ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು)ಎಂಬ ಬನವೊಂದಿದೆ. ಅಲ್ಲಿ ಒಂದು ಪುಷ್ಕರಣಿಯೂ ಇದೆ. ಇಲ್ಲಿ ಚಂದ್ರ ತಪಸ್ಸು ಮಾಡಿದನಂತೆ. ಅದಕ್ಕೆಂದೆ ಈ ಸ್ಥಳಕ್ಕೆ ಅಬ್ಜಾರಣ್ಯ ಎಂದು ಹೆಸರಿಸಲಾಯಿತಂತೆ. ಚಂದ್ರನ ತಪಸ್ಸಿಗೆ ಮೆಚ್ಚಿ ಒಲಿದ ಶಿವ ತಾಣವೇ ಚಂದ್ರಮೌಳೀಶ್ವರನ ದೇವಾಲಯ. ಹೀಗೆಂದು ಒಂದು ನಂಬಿಕೆ ಇಲ್ಲಿ ಪ್ರಚಲಿತವಾಗಿದೆ.

Also read: ಶಿವ ಹಾಗೂ ಪಾರ್ವತಿಗೆಂದೇ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹಿನ್ನಲೆ.!

ಚಂದ್ರಮೌಳೀಶ್ವರ ದೇವಾಲಯ ಗಾತ್ರದಲ್ಲಿ ಅನಂತೇಶ್ವರ ದೇವಸ್ಥಾನಕ್ಕಿಂತ ಚಿಕ್ಕದು. ಹಿಂದಿನ ಕಾಲದಲ್ಲಿ ಈ ದೇವಸ್ಥಾನವನ್ನು “ಮೂಡು ದೇವಾಲಯ”(ಮಹೇಂದ್ರ ದಿಗಾಲಯ)ಎಂದು ಕರೆಯುತ್ತಿದ್ದರು ಎಂದು ಮಧ್ವವಿಜಯದಿಂದ ತಿಳಿದುಬರುತ್ತದೆ. ಗ್ರಾಮದ ಪ್ರಧಾನ ದೇವಸ್ಥಾನವಾಗಿದ್ದ ಶ್ರೀ ಅನಂತೇಶ್ವರಕ್ಕಿಂತ ಮೂಡು ದಿಕ್ಕಿನಲ್ಲಿರುವುದರಿಂದ ಈ ಹೆಸರು ಬಂತು.

ಇಂದಿಗೂ ಸ್ವಾಮೀಜಿಯವರು ಪರ್ಯಾಯಕ್ಕೆ ಕೂಡುವ ಮುನ್ನ ಚಂದ್ರಮೌಳೀಶ್ವರನ ದರ್ಶನ ಮಾಡಿ ಅನಂತರ ಶ್ರೀ ಅನಂತಾಸನ ಸಂದರ್ಶನ, ನಂತರ ಶ್ರೀಕೃಷ್ಣ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ನಡೆದುಬಂದಿದೆ.

ದೇವಸ್ಥಾನದ ಪೂಜಾ ಸಮಯ
ಬೆಳಿಗ್ಗೆ ೦5:೦೦ ಘಂಟೆಗೆ ದೇವಸ್ಥಾನದ ಬಾಗಿಲು ತೆರೆಯುವುದು.
ಬೆಳಿಗ್ಗೆ : 09:30 – 10:00 ರವರೆಗೆ
ಸಾಯಂಕಾಲ : 07:30 – 08:00 ರವರೆಗೆ

ದೇವಸ್ಥಾನದ ವಿಳಾಸ:
ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ,
ರಥಬೀಧಿ,
ಉಡುಪಿ