ಇಫ್ತಾರ್ ಕೂಟ ಮಾಡಿ ಇತಿಹಾಸ ಸೃಷ್ಟಿ ಮಾಡಿದ ಉಡುಪಿ ಕೃಷ್ಣ ಮಠ..!

0
665

ನಮ್ಮ ಭಾರತ ಸರ್ವ ಧರ್ಮಗಳ ನಾಡು ಎಲ್ಲಾ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ದೇಶವಾಗಿದೆ. ಆದರೆ ಇವತ್ತಿನ ದಿನಗಳಲ್ಲಿ ಕೋಮುವಾದ ಅನ್ನೋದು ಎಲ್ಲಾಕಡೆ ಹೆಚ್ಚುತ್ತಿದು. ಮಾನವ ಅಂದ್ರೆ ಎಲ್ಲಾ ಮಾನವರು ಒಂದೇ ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಜನರು ಹೆಚ್ಚುತ್ತಿದ್ದು. ಇಂತಹ ಸಮಯದಲ್ಲಿಯೇ ಉಡುಪಿಯ ಶ್ರೀ ಕೃಷ್ಣ ಮಠ ಒಂದು ಐತಿಹಾಸಿಕ ಬೆಳೆವಣಿಗೆಗೆ ನಾಂದಿ ಹಾಡಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಲವು ವರ್ಷಗಳಿಂದ ನಿರಂತರ ಕೃಷ್ಣನ ಪೂಜೆ-ಭಜನೆ ಆರಾಧನೆ ನಡೆಯುತ್ತಾನೆ ಬಂದಿದೆ. ಆದ್ರೆ ಇಂದು ಕೃಷ್ಣನ ಪೂಜೆಯ ಜೊತೆ ಅಲ್ಲಾಹ್‍ನ ಆರಾಧನೆಯೂ ನಡೆಯಿತು. ರಂಜಾನ್ ತಿಂಗಳ ಉಪವಾಸ ಮುಗಿಸಿದ ಮುಸ್ಲಿಮರು ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಕೊನೆಯ ನಮಾಜ್ ಮಾಡಿ ಉಪವಾಸ ಅಂತ್ಯ ಮಾಡಿದರು. ಕೃಷ್ಣ ಮಠದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಪೇಜಾವರಶ್ರೀ ಆಯೋಜನೆ ಮಾಡಿದ್ದರು.

ಶ್ರೀ ಕೃಷ್ಣ ಮಠದ ಪೇಜಾವರ ಶ್ರೀಗಳು ಹಲವು ಮಠ ಮಾನ್ಯಗಳಿಗೆ ಆದರ್ಶವಾಗಿದ್ದರೆ. ಇವರು ಸರ್ವ ಧರ್ಮಗಳನ್ನು ಒಪ್ಪಿಕೊಳ್ಳುವಂತಹ ವ್ಯಕ್ತಿತ್ವ ಇವರದ್ದಾಗಿದೆ. ಪೇಜಾವರ ಶ್ರೀಗಳನ್ನು ಎಲ್ಲರೂ ಪ್ರೀತಿಯಿಂದ ಕಾಣುವಂತ ಮಠಾಧಿಪತಿ ಅಂದ್ರೆ ತಪ್ಪಿಲ್ಲ ಅನ್ಸುತ್ತೆ.