ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
2274

ಉದ್ಯೋಗದ ನೀರಿಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಯು ಮೇಲ್ವೀಚಾರಕ 101, ನಗದು ಸಹಾಯಕ 251, ಕಛೇರಿ ಸಹಾಯಕರ 141, ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.

Also read: ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಈ ಹುದ್ದೆಯಲ್ಲಿ ಒಂದು ತಾಲೂಕಿನ ನಾಲ್ಕರಿಂದ ಐದು ಹೋಬಳಿಗಳಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಬೇಕಾಗುವುದು.

ವಿದ್ಯಾರ್ಹತೆ: ಮೇಲ್ವೀಚಾರಕ ಹುದ್ದೆಗೆ ಎಮ್.ಎಸ್.ಡಬ್ಲ್ಯು/ಬಿ.ಎಸ್. ಡಬ್ಲ್ಯು/ಬಿ.ಎ/ಎಮ್.ಎ. ಎಸ್.ಎಸ್.ಎಲ್.ಸಿ/ಪಿಯುಸಿ( ಮೂರು ವರ್ಷದ ಅನುಭವವಿರಬೇಕು) ನಗದು

ಸಹಾಯಕ ಹುದ್ದೆಗೆ: ಯಾವುದೇ ಪದವಿ. ಕಛೇರಿ ಸಹಾಯಕರ ಹುದ್ದೆಗೆ: ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನ ತಿಳಿದಿರಬೇಕು.

ವಯೋಮಿತಿ: ಮೇಲ್ವೀಚಾರಕ ಹುದ್ದೆಗೆ 01.06.2019 ಕ್ಕೆ ಅನ್ವಯವಾಗುವಂತೆ 30 ವರ್ಷ, ನಗದು ಸಹಾಯಕ ಹುದ್ದೆ, ಕಛೇರಿ ಸಹಾಯಕರ ಹುದ್ದೆಗೆ 01.06.2019 ಕ್ಕೆ
ಅನ್ವಯವಾಗುವಂತೆ 25 ವರ್ಷ ಒಳಗಿನವರಾಗಿರಬೇಕು.

ವೇತನ: ಮೇಲ್ವೀಚಾರಕ ಹುದ್ದೆಗೆ: 12000-19000, ನಗದು ಸಹಾಯಕ ಹುದ್ದೆಗೆ: 11300-15000 ಕಛೇರಿ ಸಹಾಯಕರ ಹುದ್ದೆಗೆ: 12000-16000. ಮತ್ತು ಇತರ
ಸೌಲಭ್ಯಗಳು: ರಜಾ ಸೌಲಭ್ಯ, ಸರ್ಕಾರದ ನಿಯಮದಂತೆ ಪಿ.ಎಫ್, ಗ್ರಾಚ್ಯುಟಿ,

ಭಡ್ತಿ ಪ್ರಕ್ರಿಯೆ: ಯೋಜನೆಯ ಅಗತ್ಯಗಳಿಗನುಸಾರವಾಗಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಸಲುವಾಗಿ ಅರ್ಹ ಕಾರ್ಯಕರ್ತರಿಗೆ ಭಡ್ತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಬಳಿಕ ಕಾರ್ಯಕರ್ತರ ಕಾರ್ಯವೈಖರಿಯ ಬಗ್ಗೆ ಮೇಲಾಧಿಕಾರಿಗಳ ಶಿಪಾರಸ್ಸಿನಂತೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಂಕಗಳ ಆಧಾರದಲ್ಲಿ ಭಡ್ತಿ ನೀಡಲಾಗುವುದು.

ತರಬೇತಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ನಮ್ಮ ಸಂಸ್ಥೆಯ ತರಬೇತಿ ಕೇಂದ್ರಗಳಲ್ಲಿ 2 ತಿಂಗಳು ತರಬೇತಿಯನ್ನು ನೀಡಲಿದ್ದು, ಈ ಅವಧಿಯಲ್ಲಿ ಮಾಸಿಕ ಗೌರವಧನ ನೀಡಲಾಗುವುದು ಮತ್ತು ಮೊದಲ 6 ತಿಂಗಳ ಅವಧಿ ಪ್ರೋಬೆಷನರಿ ಅವಧಿಯಾಗಿದ್ದು, ಕಾರ್ಯಕ್ಷಮತೆ ಉತ್ತಮವಾಗಿದ್ದಲ್ಲಿ ಹುದ್ದೆಯಲ್ಲಿ ಖಾಯಾಮಾತಿ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತಿ ಇರುವ ಯುವಕ/ಯುವತಿಯರು ದಿನಾಂಕ 01.06.2019ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧರ್ಮಸ್ಥಳ -574216 ಇವರಿಗೆ ಇ-ಮೇಲ್ ಮೂಲಕ skdrdprecruitment@gmail.com ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.