ಆನ್ಲೈನ್ ನಲ್ಲಿ ಸುದ್ದಿ ಮಾಡುತ್ತಿರುವ ಶುದ್ದಿ ಟ್ರೈಲರ್

0
1175

ಈಗಂತೂ ಬರಿ ಕನ್ನಡ ಫಿಲಿಮ್ ಇಂಡಸ್ಟ್ರಿ ಯದ್ದೇ ಸದ್ದು. ಕಿರಿಕ್ ಪಾರ್ಟಿ ಅಬ್ಬರ ಇನ್ನು ಕಮ್ಮಿ ಆಗಿಲ್ಲ , ಆಗಲೇ ಶುದ್ದಿ ಎಂಬಾ ಟ್ರೈಲರ್ ಯಾವ ಸ್ಟಾರ್ ಹೆಸರಿಲ್ಲದೆ ಸುದ್ದಿ ಮಾಡುತ್ತಿದೆ . ವಿಡಿಯೋ ನೋಡಿ ನೀವು ಕೇಳುತ್ತಿರಿ ಇದು ಯಾವ ಹಾಲಿವುಡ್ ಫಿಲಿಮ್ ಸರ್ ಅಂತ .

ಯುಟ್ಯೂಬ್ ನಲ್ಲಿ ಶಬ್ದ ಮಾಡಿ ಟ್ರೆಂಡ್ ಹಾಗುತ್ತಿರುವ ಟ್ರೈಲರ್ ಶುದ್ದಿ .. ಶುದ್ಧಿ ಟ್ರೈಲರ್ ಸಖತ್ತಾಗಿದೆ. ಕನ್ನಡ ಚಿತ್ರರಂಗ ಬೇರೆಯದೇ ಲೆವೆಲ್ ನಲ್ಲಿದೆ.

ಎಲ್ಲರಲ್ಲೂ ತಾಯಿಯನ್ನು ಕಾಣಲು ಸಾಧ್ಯವಿಲ್ಲದಿರಬಹುದು…ಆದರೆ ತಂಗಿ ,ಅಕ್ಕ ,ಗೆಳತಿಯನ್ನಾದರು ಕಾಣಬಹುದಲ್ಲವ ,ಹೆಣ್ಣನ್ನು ಗೌರವಿಸೋಣ…ನಮ್ಮ ಮನಸುಗಳನ್ನು ಶುದ್ಧಿಕರಿಸೋಣ…ಶುದ್ದಿ ಚಿತ್ರದ ಟ್ರೈಲರ್ ಒಂದು ತಾಂತ್ರಿಕ ಶ್ರಿಮಂತಿಕೆಯುಳ್ಳ ಅತ್ಯುತ್ತಮ ಅನುಭವ ನಿಡುವಂತದ್ದು. ಚಿತ್ರಕ್ಕಾಗಿ ಕಾಯುತ್ತಿದ್ದೆವೆ. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ..

ಈ ಹಾಲಿವುಡ್ ರೇಂಜ್ ಕನ್ನಡದ ಚಿತ್ರ ಶುರುವಾಗಿದ್ದು ಎರಡು ವರ್ಷಗಳ ಹಿಂದೆ, ಚಿತ್ರ ಕಂಪ್ಲೀಟ್ ಮಾಡೋಕೇ ಆಗದೇ, ಪದೇ ಪದೇ ಹಲವು ಸಮಸ್ಯೆಗಳಿಂದ ತೆರೆ ಕಾಣಲು ವಿಳಂಬವಾಗಿತ್ತು. ಆದ್ರೆ ಚಿತ್ರಕ್ಕೆ ಹಣದ ಸಮಸ್ಯೆ ಎದುರಾಗಿತ್ತು.ಅಂತೂ ಇಂತೂ ಆದರ್ಶ್ H ಈಶ್ವರಪ್ಪ ಸಾರಥ್ಯದ ಈ ಚಿತ್ರ ಕೊನೆಗೂ ಟ್ರೈಲರ್ ರಿಲೀಸ್ ಹಾಗಿದೆ. ಇಷ್ಟರ ನೆಡುವೆ ಅಂತೂ ಇಂತೂ ೨ ವರ್ಷ ಆದ ಮೇಲೆ ಸುದ್ದಿ ಮಾಡುತಿದೆ ಈ ಶುದ್ದಿ.

ಯಾವ ಸ್ಟಾರ್ ಹೆಸರಿಲ್ಲದೆ , ಬರಿ ಫಿಲಿಮ್ ಮೇಕಿಂಗ್ ಇಂದ ಗಮನ ಸೆಳೆಯುತಿದ್ದೆ ಈ ಶುದ್ದಿ ಮೂವಿ. ನಾವು ಕೂಡ ಈ ಮೂವಿ ರೆಲೀಸ್ ಗಾಗಿ ಕಾಯುತ್ತಿದ್ದೇವೆ. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ..