ಶುಕ್ರ ದೆಶೆಯಿಂದ ಶ್ರೀಮಂತರಾಗುತ್ತಾರೆ ಎನ್ನುವುದು ಸುಳ್ಳೇ….!

0
1751

ಶುಕ್ರ ದೆಶೆ ಒಟ್ಟು 20 ವರ್ಷಗಳು ನಮ್ಮ ಜೀವನದಲ್ಲಿ ಬಂದು ಹೋಗುತ್ತದೆ ಯಾರಿಗಾದರು ಶುಕ್ರ ದೆಶೆ ನಡೆಯುತ್ತಿದೆ ಅಂದರೆ ಅವರಿಗೆ ಒಳ್ಳೆಯ ದಿನಗಳು ಧನವಂತ, ಶ್ರೀಮಂತರಾಗುತ್ತಾರೆ ಎಂದು ತಿಳಿದರೆ ತಪ್ಪು. ಯಾಕೆಂದರೆ ಜಾತಕದಲ್ಲಿ ಶುಕ್ರ ನೀಚನಿದ್ದು ಶತ್ರು ಗ್ರಹ ಜೊತೆಯಿದ್ದರೆ ಮತ್ತು ಕೆಟ್ಟಗ್ರಹಗಳ ದೃಷ್ಟಿಯಿದ್ದರೆ ಶುಕ್ರ ದೆಶೆ ನಡೆಯುವಾಗ ಜಾತುಕನು ಕೆಟ್ಟ ಫಲಗಳನ್ನೇ ಅನುಭವಿಸುತ್ತಾರೆ. ಶುಕ್ರ ಉಚ್ಚಕ್ಷೇತ್ರ, ಕೇಂದ್ರ, ತ್ರಿಕೋನ, ಶುಭ ಸ್ಥಾನದಲ್ಲಿ ಇದ್ದರೆ ಶುಕ್ರ ದೆಶೆಯಲ್ಲಿ ಒಳ್ಳೆಯ ಫಲಗಳು ಅನುಭವಿಸುತ್ತಾರೆ ಹೀಗೆ ಶುಕ್ರನು ನಿಮ್ಮ ಜಾತಕದ ಪ್ರಕಾರ ಶುಭ ಅಶುಭ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

ಶುಕ್ರ ದೆಶೆಯಲ್ಲಿ ಶುಕ್ರನೂ ಸೇರಿ ಎಲ್ಲಾ ಗ್ರಹಗಳ ಭುಕ್ತಿ, ಅಂತರಭುಕ್ತಿಗಳು ಬರುತ್ತದೆ. ಗ್ರಹಗಳ ಭುಕ್ತಿ ಸಮಯದಲ್ಲಿ ಗ್ರಹಗಳ ಮಿತ್ರತ್ವ ಮತ್ತು ಶತ್ರುತ್ವಗಳನ್ನು ಮತ್ತು ಸ್ಥಾನಗಳನ್ನು ಪರಿಶೀಲಿಸಿ ಅದರ ಫಲವನ್ನು ತಿಳಿದುಕೊಳ್ಳಬೇಕು.

ಉಚ್ಚಕ್ಷೇತ್ರ – ಮೀನ ರಾಶಿ
ಸ್ವಕ್ಷೇತ್ರ – ವೃಷಭ, ತುಲಾ ರಾಶಿ
ಕೇಂದ್ರ – ಲಗ್ನದಿಂದ 1,4,7,10ನೇ ಮನೆ
ತ್ರಿಕೋನ – ಲಗ್ನದಿಂದ 1,5,9 ನೇ ಮನೆ
ಮಿತ್ರರು – ಬುಧ, ಶನಿ

ಶುಕ್ರನು ಜಾತಕದಲ್ಲಿ ಉಚ್ಚಕ್ಷೇತ್ರ, ಸ್ವಕ್ಷೇತ್ರ, ಮೂಲತ್ರಿಕೋನ, ಕೇಂದ್ರ, ಮಿತ್ರಗ್ರಹಗಳ ಮನೆಯಲ್ಲಿ ಇದ್ದರೆ ಶುಭಗ್ರಹಗಳ ದೃಷ್ಟಿ ಇದ್ದರೆ ಜಾತುಕನು ರಾಜಾಧಿಕಾರದ ಐಶ್ವರ್ಯವೂ, ಧನ-ಧಾನ್ಯ ಲಾಭವು, ವಾಹನಗಳನ್ನು ಕರೀದಿಸುವುದು, ಕಲೆಗೆ ಸಂಬಂದಪಟ್ಟ ಕೆಲಸದಲ್ಲಿ ಆಸಕ್ತಿ ಮತ್ತು ಅದರಿಂದ ಅಭಿವೃದಿ, ಒಳ್ಳೆಯ ಹೆಸರು ಸಿಗುವುದು, ಸಕಲ ವಿದ್ಯಾ ಪಾರಂಗತವಾಗಿರುತ್ತಾರೆ, ಹೆಚ್ಚು ಒಡವೆ ಕರೀದಿಸುತ್ತಾರೆ, ಮನೆ, ಭೂಮಿಯನ್ನು ಕರೀದಿಸುತ್ತಾರೆ, ನೃತ್ಯದಲ್ಲಿ ಮತ್ತು ಸಂಗೀತ ಕ್ಷೇತ್ರದಲ್ಲಿ ಅಸಕ್ತಿ, ಸುಂದರ ಮುಖ ದೇಹ, ಸ್ತ್ರೀಯರಲ್ಲಿ ಅಸಕ್ತಿ, ಪ್ರೀತಿ ಪ್ರೇಮ, ಕಾಮಾಸಕ್ತಿ, ಉತ್ತಮ ವೈವಾಹಿಕ ಜೀವನ ನಡೆಸುತ್ತಾರೆ. ಪುರುಷರಿಗೆ ಕಳತ್ರ ಕಾರಕ ಕಳತ್ರ ಎಂದರೆ ಹೆಂಡತಿ, ಪತ್ನಿ ಸೌಖ್ಯ, ಉತ್ತಮ ಪತ್ನಿ ಸಿಗುವುದು, ಹೆಣ್ಣು ಸಂತತಿ ಹೆತ್ಚು, ಚಲನ ಚಿತ್ರದಲ್ಲಿ, ನಾಟಕರಂಗದಲ್ಲಿ ಯಶಸ್ಸು ಗೌರವ ದೊರಕುವುದು, ಪುರುಷರಿಗೆ ಮದುವೆ ಯೋಗ, ಪ್ರೀತಿಸಿ ಮದುವೆಯಾಗುವು ಹೆಚ್ಚು, ಹಿಂದೆ ಮಾಡಿದ ಸಾಲ ತೀರುವುದು ಇನ್ನೂ ಮುಂತಾದ ಶುಭಫಲಗಳನ್ನು ಅನುಭವಿಸುವಿರಿ.

ನೀಚಕ್ಷೇತ್ರ – ಕನ್ಯಾ ರಾಶಿ
ಶತ್ರುಗ್ರಹ – ರವಿ, ಚಂದ್ರ
ದುಸ್ಥಾನ – ಲಗ್ನದಿಂದ 6,8,12 ನೇ ಮನೆ

ಶುಕ್ರನು ನೀಚ ಸ್ಥಾನದಲ್ಲಿ, ಕ್ರೂರ ಗ್ರಹಗಳ ದೃಷ್ಟಿಯಿದ್ದಲ್ಲಿ, ಶತ್ರು ಕ್ಷೇತ್ರದಲ್ಲಿ  ಲಗ್ನದಿಂದ ಶುಕ್ರನು 6,8,12, ಸ್ಥಾನದಲ್ಲಿ ಇದ್ದರೆ ಧನ ನಾಶ, ಸಾಲದ ಮೇಲೆ ಸಾಲಗಳು, ವಸ್ತ್ರಾಭರಣಾದಿಗಳು ನಾಶ, ಆಸ್ಥಿ ಮಾರುವುದು, ನಿಮ್ಮ ವಾಹನವನ್ನು ಅಪಹರಿಸುವುದು, ಕಲಹಗಳು, ಮದುವೆ ಸಂಬಂದಪಟ್ಟ ತೊಂದರೆಗಳು,ಸ್ತ್ರೀಯರಿಗೆ ಅಪವಾದಗಳು, ಪುರುಷರಿಗೆ ಸ್ತ್ರೀಯಿಂದತೊಂದರೆಗಳು, ಸ್ತ್ರೀಯರಿಂದ ವ್ಯವಹಾರ, ಅಧಿಕಾರ, ಹಣ, ಸಂಪತ್ತುಗಳ ನಷ್ಟ, ಹೆಂಡತಿಯರ ಮೇಲೆ ಅಪವಾದಗಳು, ಕೆಟ್ಟ ಸ್ತ್ರೀಯರ ಸಹವಾಸಗಳು, ಕುಡಿಯುವ ಚಟಗಳು,ಗಂಡ ಹೆಂಡತಿಯರಲ್ಲಿ ಹೊಂದಾಣಿಕೆ ಕಡಿಮೆಯಾಗುವುದು, ಲೈಂಗಿಕ ವ್ಯಾಧಿಗಳು, ಸ್ವರ ವಿಕಾರ, ಕಾಲರ, ಶೀತತೊಂದರೆಗಳು ಕಾಣುವಿರಿ.