ಚಿಕಿತ್ಸೆ ಫಲಕಾರಿಯಾಗದೆ ಕಾಡಾನೆ ‘ಸಿದ್ದ’ ಅಸ್ತಂಗತ

0
475

ಗುರುವಾರ ರಾಮನಗರದ ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ಜೀವ ಬಿಟ್ಟಿ ಕಾಡಾನೆ ಸಿದ್ದ.

ಬೆಂಗಳೂರು ಹೊರವಲಯದಲ್ಲಿರುವ ದೊಡ್ಡೇರಿಯಲ್ಲಿ ಸ್ಥಳೀಯರು ಕಾಡಾನೆ ಸಿದ್ಧನನ್ನು ಹೆದರಿಸಿ ಓಡಿಸುತ್ತಿದ್ದಾಗ, ಗುಂಡಿಗೆ ಬಿದ್ದು ಗಾಯಗೊಂಡಿತ್ತು. ಇಪ್ಪತ್ತೈದರಿಂದ ಮೂವತ್ತು ವರ್ಷ ವಯಸ್ಸಾಗಿತ್ತು.

ಅಕ್ಟೊಬರ್ 26 ರಂದು ಸಿದ್ದ ಮಂಚನಬೆಲೆ ಜಲಾಶಯದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಅದರ ಮುಂಗಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿ ಕಾಲಿನ ಮೂಳೆ ಮುರಿದಿತ್ತು. ತನ್ನ ಶಕ್ತಿಯನ್ನೆಲ್ಲಾ ಬಳಸಿ ಜಲಾಶಯದಿಂದ ಹೊರಬಂದ ಮತ್ತೆ ಕುಸಿದು ಬಿದ್ದಿದ್ದ. ಸಿದ್ದನ ನೋವಿಗೆ ಸ್ಪಂದಿಸಿದ ಅರಣ್ಯ ಇಲಾಖೆಯು ಸಿದ್ದನ ಚಿಕಿತ್ಸೆಗಾಗಿಯೇ ಸಮಿತಿಯೊಂದನ್ನು ರಚಿಸಿತ್ತು. ಅದರಲ್ಲಿ ತಜ್ಞರೂ ಇದ್ದರು. ಗುವಾಹತಿಯಿಂದ ಡಾ.ಕುಶಾಲ್ ಶರ್ಮಾ, ಕೇರಳದಿಂದ ಡಾ.ಅರುಣ್ ಅವರು ಬಂದು ಚಿಕಿತ್ಸೆ ನೀಡಿದ್ದರು.

ತೀವ್ರವಾದ ಪೆಟ್ಟಿನಿಂದ ಸಿದ್ದ ಏಳಲಾಗದೆ ಇದ್ದ ಜಾಗದಲ್ಲೇ ಮಲಗಿದ್ದು; ಅದರ ನೋವನ್ನು ನೋಡಲಾಗುತ್ತಿರಲಿಲ್ಲ.
WSOS ಸಂಸ್ಥೆಯ ಕಾರ್ಯಕರ್ತರು ಸಿದ್ಧನಿಗೆ ಅಗತ್ಯವಾದ ನೆರವು, ಆಹಾರ ಮತ್ತು ಔಷಧಗಳನ್ನು ನೀಡುತ್ತಿದ್ದರು. ಕಾಲಿಗೆ ಪೆಟ್ಟು ಬಿದ್ದಿರುವ ಕಾರಣದಿಂದಾಗಿ ಪಶು ವೈದ್ಯರು ಸಿದ್ದ ಎದ್ದು ನಿಂತಾಗ ಮಾತ್ರ ಅವನಿಗೆ ‘ದೀರ್ಘಾವಧಿಯ ಚಿಕಿತ್ಸೆ’ [long term treatment] ನೀಡಬಹುದು ಎಂದು ಹೇಳಿದ್ದರಿಂದ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯಾದ NGO Wildlife SOS ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ಎದ್ದು ನಿಲ್ಲುವ ಭಾಗ್ಯ ಸಿದ್ಧನಿಗೆ ಸಿಕ್ಕಿತ್ತು. ಚೇತರಿಕೆ ಕಂಡಿದ್ದ ಕಾಡಾನೆ ಸಿದ್ದ ೯೯ ದಿನಗಳ ಕಾಲ ಯಮನೊಂದಿಗೆ ಹೋರಾಟ ನಡೆಸಿತ್ತು. ಆದರೆ ಗುರುವಾರ ರಾಮನಗರದ ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ಜೀವ ಬಿಟ್ಟಿದೆ.