ಸಿದ್ದರ ತಪೋಭೂಮಿ ಮೂಲಿಕೆಗಳ ಆಗರವಾದ ಸಿದ್ದರ ಬೆಟ್ಟ ಜೀವಮಾನದಲ್ಲೇ ಒಮ್ಮೆಯಾದರೂ ನೋಡಲೇಬೇಕಾದ ಪುಣ್ಯ ಕ್ಷೇತ್ರ…

0
1896

Kannada News | Karnataka Temple History

“ತಲೆ ಬಾಗಿ ಒಳಗೆ ಬಾ ಯಾತ್ರಿಕನೆ, ಇದು ಸಂಜೀವಿನಿ ತಾಣ, ಪಣ ತೊಟ್ಟು ರಕ್ಷಿಸಿದರೆ ಉಳಿಯುವುದು ಮನುಜರ ಪ್ರಾಣ” ಇದು ಸಂಜೀವಿನಿ ಕ್ಷೇತ್ರವೆಂದು, ದಕ್ಷಿಣಾಕಾಶಿಯಂದು, ಋಷಿಮುನಿಗಳ, ಸಾಧುಸಂತರ,ಆಸ್ತಿಕರ ಪವಿತ್ರ ಕ್ಷೇತ್ರವೆಂದು ಕರೆಯಲ್ಪಡುವ ಸಿದ್ಧರಬೆಟ್ಟದಲ್ಲಿ ಕಂಡು ಬರುವ ಒಂದು ಬರಹ.

ಈ ಕ್ಷೇತ್ರ ಹಿಂದೆ ಸುವರ್ಣಗಿರಿಯಂದು ಕರೆಯಲ್ಪಡುತ್ತಿದ್ದು ಸುಮಾರು ೧೨೦೦ ವರ್ಷಗಳ ಹಿಂದೆ ಗೋಶಾಲೆ ಮಠದ ಶ್ರೀ ಸಿದ್ದೇಶ್ವರ ಸ್ವಾಮಿಯವರು ತಮ್ಮ ಶಿಷ್ಯರೊಡಗೂಡಿ ಇಲ್ಲಿ ಸಂಚರಿಸಿ ದಕ್ಷಿಣಕಾಶಿಯನ್ನಾಗಿ ಪರಿವರ್ತಿಸಿದಂತಹ ಪುಣ್ಯ ಕ್ಷೇತ್ರ.

 

ಅನಾದಿ ಕಾಲದಿಂದಲೂ ಸಾಧು ಸಂತರ, ಯೋಗಿಗಳ, ಸಿದ್ಧಪುರುಷರ ಪವಿತ್ರ ತಾಣವಾದ ಈ ಸಿದ್ದರ ಬೆಟ್ಟವು ಸಮೃದ್ಧ ಸಂಜೀವಿನಿಯುಳ್ಳ ಹಸಿರು ಸಂಪತ್ತನ್ನು ಹೊಂದಿದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮಿ ದೂರದಲ್ಲಿರುವ ಈ ಬೆಟ್ಟವು ಕೊರಟಗೆರೆಯಿಂದ ಮಧುಗಿರಿಗೆ ಹೋಗುವ ಹಾದಿಯಲ್ಲಿ ೧೫ ಕಿಮಿ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸ್ಮಾರ್ ೬೪೦೦೦ ಅಡಿ ಎತ್ತರದಲ್ಲಿರುವ ಈ ಬೆಟ್ಟದಲ್ಲಿರುವ ಗುಹೆಯೊಳಗಿನ ಅದ್ಬುತತಾಣಗಳು ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತವೆ.

ರಾಮಾಯಣದಲ್ಲಿ ಹನುಮಂತನು ಸಂಜೀವಿನಿ ಪರ್ವತವನ್ನು ಕೊಂಡೊಯ್ಯುವಾಗ, ಆ ಸ್ನಾಜೀವಿನಿ ಪರ್ವತದ ಒಂದು ತುಣುಕು ಇಲ್ಲಿ ಬಿದ್ದುದರಿಂದ ಇಲ್ಲಿಯ ಈಡಿ ಪ್ರದೇಶ ಸಂಜೀವಿನಿ ಶಕ್ತಿಯುಳ್ಳ ಗಿಡ ಮೂಲಿಕೆಗಳಿಂದ ಕೂಡಿದೆಎಂಬ ಪುರಾಣ ಕತೆಯು ಜನಜನಿತವಾಗಿದೆ.

ಗವಿಯ ಒಳಗೆ ಉದ್ಭವ ಶಿವಲಿಂಗವಿದೆ. ರೇವಣ ಸಿದ್ದರು ಪವಾಡದಿಂದ ಸೃಷ್ಟಿಯಾದ ಜಲ ತೀರ್ಥವು ಮಂಜುಗಡ್ಡೆಗಿಂತಲೂ ತಣ್ಣಗಿದ್ದು ರೋಗಾ ನಿರೋಧಕ ಶಕ್ತಿಯನ್ನು ಹೊಂದಿದೆ.
ಎಣ್ಣೆ ದೀಪ/ ಟಾರ್ಚ್ ಸಹಾಯದಿಂದ ಇಲ್ಲಿಯ ಗುಹೆಗಳನ್ನು ವೀಕ್ಷಿಸುವುದೇ ಒಂದು ರೋಚಕ ಅನುಭವ. ಶಿವಲಿಂಗದ ತೀರ್ಥಕುಂಡದ ಬಲಭಾಗದಿಂದ ಆರಂಭವಾಗುವ ಗುಹೆಯಲ್ಲಿ ಮೊದಲಿಗೆ ಕುಳಿತು ಕೆಲವೆಡೆ ತೆವಳಿಕೊಂಡು ಸಾಗುವ ಗುಹೆಯ ಹಾದಿ ಬಲು ಕಠಿಣ.ಇಂತಹ ವಿಸ್ಮಯ ತಾಣದಲ್ಲಿ ಅನೇಕ ಸಿದ್ದ ಪುರುಷರು ಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಈ ಸಿದ್ಧಪುರುಷರು ತಪಸ್ವಿಗಳು ಕುಳಿತು ಧ್ಯಾನಿಸುತ್ತಿದ್ದ ಸ್ಥಳಗಳು ಇಂದು ರುದ್ರಗವಿ, ಲಕ್ಷ್ಮಿ ಗವಿ, ಸೂರ್ಯ ಗವಿ ಮೊದಲಾದ ಹೆಸರಿನಿಂದ ಕರೆಯಲ್ಪಟ್ಟಿದೆ.

 

ಈಗಲೂ ಸಾಧು ಸಂತರು ಪೂಜಿಸುತ್ತಿದ್ದ ಶಿವಲಿಂಗಗಳು, ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದ ಜಾಗಗಳನ್ನು ಕಾಣಬಹುದು. ಬೆಟ್ಟದ ಮೇಲಿನ ಬಲಭಾಗದಲ್ಲಿ ಒಂದರ್ಧ ಕಿಮಿ ಸಾಗಿದ್ದಲ್ಲಿ ಕಾಡು ನಿಂಬೆ, ಮಾವು, ದ್ರಾಕ್ಷಿ, ಸೀಬೆ, ಮೆಣಸು, ಮಧುನಾಶಿನಿ, ದೇವದಾರು, ಬಾಳೆ, ಸೊಗದೆ ಬೇರು, ಹೀಗೆ ಅನೇಕ ವನಸ್ಪತಿಗಳನ್ನು ಕಾಣಬಹುದು.

ವಿಜಯನಗರದ ಅರಸರ ಕಾಲದಲ್ಲಿ ಕೊರುಂಗರಾಯ, ಹಲವು ಪಾಳೇಗಾರರು ಮತ್ತು ಹಾಗಲವಾಡಿ ದೊರೆಗಳು ಈ ಕ್ಷೇತ್ರವನ್ನು ಆಳಿದ್ದರು.ಇಲ್ಲಿ ಬರುವ ಭಕ್ತರಿಗೆ ಅನ್ನ ದಾಸೋಹದ ಹೊರತು ಊಟ, ವಸತಿಗಳ ಬೇರೆ ಸೌಲಭ್ಯವಿರುವುದಿಲ್ಲ. ತುಮಕೂರು, ಮಧುಗಿರಿ, ಕೊರಟಗೆರೆಗಳಿಂದ ಬಸ್ಸಿನ ಸೌಲಭ್ಯವಿದೆ.