ಸಿದ್ದರಾಮಯ್ಯನವರಿಗೆ ಬಂದ ಬೆಳ್ಳಿ ಆಭರಣಗಳನ್ನು ಅವರು ಏನು ಮಾಡುತ್ತಿದ್ದಾರೆ ಗೊತ್ತಾ?

0
798

ಜನಪ್ರಿನಿಧಿಗಳಿಗೆ ಅಭಿಮಾನಿಗಳು ಉಡುಗೊರೆ ನೀಡುವುದು ಸಹಜ. ಆ ಉಡುಗೊರೆಗಳಸಿನ್ನು ಪಡೆದವರು ಸಾಮಾನ್ಯವಾಗಿ ತಮ್ಮ ಮನೆಯಲ್ಲಿ ಅಭಿಮಾನಿಗಳ ನೆನಪಿನಲ್ಲಿ ಇಟ್ಟಿರುತ್ತಾರೆ. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗಲ್ಲ. ಅವರಿಗೆ ಅಭಿಮಾನಿಗಳು ನೀಡಿದ ಬೆಳ್ಳಿ ವಸ್ತುಗಳನ್ನು ಯಾರಿಗೆ ಕೊಡ್ತಿದ್ದಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ..

ಬೇರೆ ಯಾರಿಗೂ ಅಲ್ಲ ಕಣ್ರೀ.. ಮಲೈ ಮಹದೇಶ್ವರ ಬೆಟ್ಟಕ್ಕೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಿದ್ದರಾಮಯ್ಯನವರ ಸೇವಾವಧಿಯಲ್ಲಿ ಅಭಿಮಾನಿಗಳು ನೀಡಿದ ಬೆಳ್ಳಿಯ ಗದೆ, ಬೆಳ್ಳಿಯ ವಸ್ತುಗಳು, ಬೆಳ್ಳಿಯ ಕಿರೀಟ ಮತ್ತಿತರ ಬೆಳ್ಳಿಯ ಆಭರಣಗಳನ್ನು ಉಡುಗೊರೆಯಾಗಿ ಬಂದಿವೆ. ಇವುಗಳನ್ನೆಲ್ಲಾ ಚಾಮರಾಜನಗರ ಜಿಲ್ಲೆಯ ಅದರಿಂದ ಮಹದೇಶ್ವರನಿಗೆ ಬೆಳ್ಳಿಯ ರಥ ಮಾಡಿಸುವಂತೆ ಅಲ್ಲಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವಾರ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಸಿಎಂ ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಿದ್ರು. ಈ ವೇಳೆ ಮಹದೇಶ್ವರ ಪ್ರಾಧಿಕಾರ ಸಮಿತಿಯ ಸಭೆಯಲ್ಲಿ ಅಧಿಕಾರಾವಧಿಯಲ್ಲಿ ತಮಗೆ ಬಂದಿರುವ ಬೆಳ್ಳಿಯ ಆಭರಣಗಳನ್ನು ನೀಡುತ್ತೇನೆ. ಅದರಿಂದ ದೇವರಿಗೆ ಬೆಳ್ಳಿಯ ರಥ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ತಮ್ಮ ಅಧಿಕಾರಾವಧಿಯಲ್ಲೇ ಈ ಕೆಲಸ ಮುಗಿಸಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದ

ರಥ ನಿರ್ಮಾಣಕ್ಕಾಗಿ ಸುಮಾರು 400 ಕೆ.ಜಿ.ಬೆಳ್ಳಿಯ ಅವಶ್ಯಕತೆ ಇದೆ. ಈಗಾಗಲೇ 800 ಕೆ.ಜಿ.ಬೆಳ್ಳಿ ಪ್ರಾಧಿಕಾರದಲ್ಲಿ ಇದೆ. ದಾನಿಗಳು ಬೆಳ್ಳಿ ನೀಡಲು ಮುಂದಾದಲ್ಲಿ ಅದನ್ನೂ ಸ್ವೀಕರಿಸಿ. ತಮಗೆ ಉಡುಗೊರೆಯಾಗಿ ಬಂದಿರುವ ಬೆಳ್ಳಿಗದೆ, ಕಿರೀಟ, ಇನ್ನಿತರ ಬೆಳ್ಳಿ ಪದಾರ್ಥಗಳನ್ನು ನೀಡುತ್ತೇನೆ ಎಂದರು.