ಭಾರಿ ಕುತೂಹಲ ಮೂಡಿಸಿದ್ದ ಸಿಎಂ ಸಿದ್ದರಾಮಯ್ಯನವರ ರಾಜ್ಯ ಬಜೆಟ್ ನ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ…!

0
532
 • ಭಾರಿ ಕುತೂಹಲ ಮೂಡಿಸಿದ್ದ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಚುನಾವಣೆ ಹತ್ತಿರವಿರುವ ಕಾರಣ ಈ ಬಜೆಟ್ ತುಂಬಾನೇ ನಿರೀಕ್ಷೆ ಮೂಡಿಸಿತ್ತು. ಹಾಗಾದರೆ ಈ ಬಾರಿಯ ಬಜೆಟ್ ನಲ್ಲಿ ಏನೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆ ನೋಡಿ.
 • ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಈ ಯೋಜನೆಯ ಮೂಲಕ 19.60 ಲಕ್ಷ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಗುರಿ ಇದೆ.
 • SSLC ಮತ್ತು PUCಯ ಪರೀಕ್ಷಾ ಅಕ್ರಮಗಳನ್ನು ತಡೆಯಲು “ಕರ್ನಾಟಕ ಸುರಕ್ಷಿತ ಪರೀಕ್ಷಾ ವ್ಯವಸ್ಥೆ” ಜಾರಿಗೆ ತರಲಾಗಿದೆ.
 • ಪ್ರಾಥಮಿಕ ಮತ್ತು ಪ್ರೌಢ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಲಾಗುತ್ತದೆ. ಹಂತ-ಹಂತವಾಗಿ ಸಿಸಿಟಿವಿ ಅಳವಡಿಸಲಾಗುತ್ತದೆ.
 • 100 ವರ್ಷ ಪೂರೈಸಿದ ಸರ್ಕಾರಿ ಶಾಲೆಗಳನ್ನು ಪಾರಂಪರಿಕ ಶಾಲೆಗಳು ಎಂದು ಘೋಷಣೆ ಮಾಡಿ ಹಂತ-ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 22,350 ಕೋಟಿ ಅನುದಾನ ನೀಡಲಾಗಿದೆ.
 • ಚಾಮರಾಜನಗರದಲ್ಲಿ ಕೃಷಿ ಕಾಲೇಜು ಸ್ಥಾಪನೆ. ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ.

 • ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇರುವ ಶುಲ್ಕ ವಿನಾಯಿತಿಯನ್ನು ಮಹಿಳೆಯರು ಮತ್ತು ವಿಕಲಚೇತನರಿಗೂ ವಿಸ್ತರಣೆ ಮಾಡಲಾಗುತ್ತದೆ.
 • ಧಾರವಾಡ ವಿಶ್ವವಿದ್ಯಾಲಯದಲ್ಲಿ 1 ಕೋಟಿ ವೆಚ್ಚದಲ್ಲಿ ಕೊಂಕಣಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಉನ್ನತ ಶಿಕ್ಷಣ ಇಲಾಖೆಗೆ 4,514 ಕೋಟಿ ಅನುದಾನ ಮೀಸಲು
 • ಬಸವಣ್ಣನವರ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ವನ್ನು 2 ಕೋಟಿ ವೆಚ್ಚದಲ್ಲಿ ಸ್ಥಾಪನೆ. ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆ.
 • 5 ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಶೇ 30ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಇದರಿಂದ 5.೯೩ ಲಕ್ಷ ನೌಕರರಿಗೆ ಅನುಕೂಲವಾಗಿದೆ.
 • ರೈತರಿಗೆ ಬಡ್ಡಿರಹಿತವಾಗಿ 3 ಲಕ್ಷದ ತನಕ ಸಾಲ ನೀಡಲಾಗುತ್ತದೆ. ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ 157 ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾಡಲಾಗುತ್ತಿದೆ.
 • 2018-19 ಸಾಲಿನಲ್ಲಿ 60 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಗುರಿ ಇದೆ. ಇದಕ್ಕಾಗಿ 24 ಕೋಟಿ ಅನುದಾನವನ್ನು ನೀಡಲಾಗುತ್ತದೆ.
 • ಕಬ್ಬು ಬೆಳೆಯಲ್ಲಿ ಲಾಭದಾಯಕ ಮತ್ತು ಸ್ಥಿರತೆ ಹೆಚ್ಚಿಸಲು ಕಬ್ಬು ಖರೀದಿ ಯಂತ್ರ ಖರೀದಿ ಮಾಡಲು ರೈತರಿಗೆ 20 ಕೋಟಿ ಅನುದಾನ ನೀಡಲಾಗುತ್ತದೆ.
 • ನಮ್ಮದು ರೈತ ಪರ ಸರ್ಕಾರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆದ ರೈತರು ಮೃತಪಟ್ಟರೆ 1 ಲಕ್ಷ ರೂ. ಸಾಲವನ್ನು ಮನ್ನಾ ಮಾಡಲಾಗುತ್ತದೆ.
 • ರೈತರಿಗೆ ಹೊಲದಲ್ಲಿ ಕೆಲಸ ಮಾಡುವಾಗ, ಹಾವು ಕಡಿತದಂತಹ ಪ್ರಕರಣದಿಂದ ರೈತರು ಮೃತಪಟ್ಟರೆ ನೀಡುವ ಪರಿಹಾರವನ್ನು 2 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ.
 • ರೈತರು ಬೆಳೆದ ಮರಗಳನ್ನು ತಾಲೂಕು ಮಟ್ಟದಲ್ಲಿ ಖರೀದಿ ಮಾಡಲು ಅನುಕೂಲವಾಗುವಂತೆ APMC ಯಲ್ಲಿಯೂ ಖರೀದಿ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತದೆ.
 • ಸಹಕಾರ ಕ್ಷೇತ್ರಕ್ಕೆ 1,666 ಕೋಟಿ ಅನುದಾನ ನೀಡಲಾಗುತ್ತದೆ. ಆಕಸ್ಮಿಕವಾಗಿ ರೈತರ ಬಣವೆಗೆ ಬೆಂಕಿ ಬಿದ್ದರೆ 20 ಸಾವಿರ ರೂ. ಪರಿಹಾರ ನೀಡಲಾಗುತ್ತದೆ.
 • ಕುರಿ ಮತ್ತು ಆಡು ಸಾಕಣೆಗೆ 25 ಸಾವಿರ ಘಟಕ ಸ್ಥಾಪನೆ ಮಾಡಲಾಗುತ್ತದೆ. ಅಲೆಮಾರಿಗಳಿಗೆ ಆಡು, ಕುರಿ ಸಾಕಲು ಅಗತ್ಯ ಸಹಹಾರ ನೀಡಲಾಗುತ್ತದೆ. ತಂತಿ, ಶೆಡ್ ನಿರ್ಮಾಣ ಮಾಡಲು 4 ಕೋಟಿ ವೆಚ್ಚದಲ್ಲಿ ಸಹಕಾರ ನೀಡಲಾಗುತ್ತದೆ.
 • ಕುರಿ, ಮೇಕೆ ಸಾಕಣೆಗೆ ಪಡೆದ ಸಾಲದಲ್ಲಿ 31/12/2013 ಕ್ಕೆ ಅನ್ವಯವಾಗುವಂತೆ 50 ಸಾವಿರ ರೂ. ಒಳಪಟ್ಟ ಹೊರಬಾಕಿ ಸಾಲಮನ್ನಾ ಮಾಡಲಾಗುತ್ತದೆ. ಇದರಿಂದ 12,200 ಸಾಕಣಿಕೆದಾರರಿಗೆ ಅನುಕೂಲವಾಗಲಿದೆ
 • ಮೇವಿನ ಕೊರತೆ ನೀಗಿಸಲು ಇನ್ನು ಮುಂದೆ ಮೇವು ಬೆಳೆ ಉತ್ಪಾದನೆ, ರಸ ಮೇವು ಉತ್ಪಾದನೆಗೆ ಆದ್ಯತೆ ನೀಡಲು ರಾಜ್ಯ ಮೇವು ಭದ್ರತಾ ನೀತಿ ರೂಪಿಸಲಾಗುತ್ತದೆ.
 • ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ರೇಷ್ಮೆ ಟೂರಿಸಂಗೆ ಆದ್ಯತೆ ನೀಡಲಾಗುತ್ತದೆ. ಚನ್ನಪಟ್ಟಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಲೈವ್ ಮ್ಯೂಸಿಯಂ ನಿರ್ಮಾಣ.
 • ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ “ಸಾಲುಮರದ ತಿಮ್ಮಕ್ಕ ಉದ್ಯಾನವನ” ನಿರ್ಮಾಣ ಮಾಡಲಾಗುತ್ತದೆ.

 • ಮೀನು ಮಾರಾಟಗರರು ಮಾರಾಟವಾಗದೆ ಉಳಿದ ಮೀನನ್ನು ಶೇಖರಿಸಿ ಇಡಲು ‘ಮತ್ಸ್ಯಾ ಜೋಪಾಸನೆ’ ಯೋಜನೆಯಡಿ 10 ಘಟಕಗಳನ್ನು ಪ್ರತಿ ಘಟಕಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
 • ಮೀನುಗಾರರಿಗೆ 35 mm ಬಲೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಯಾಂತ್ರೀಕೃತ ಮೀನುಗಾರಿಕೆ ಪ್ರೋತ್ಸಾಹ ನೀಡಲು 3,500 ಮೀನುಗಾರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ವರ್ಗಾವಣೆ.
 • ಕುಡಿಯವು ನೀರಿಗಾಗಿ ಸ್ಥಗಿತಗೊಂಡಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ. ಕೆರೆಗಳನ್ನು ಭರ್ತಿ ಮಾಡಲು 2276 ಕೋಟಿ ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ. ಎತ್ತಿನಹೊಳೆ ಯೋಜನೆಯಡಿ 527 ಕೆರೆಯನ್ನು ಭರ್ತಿ ಮಾಡಲಾಗುತ್ತದೆ.
 • 250 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸುತ್ತಮುತ್ತಲಿನ ಕೆರೆಗಳಿಗೆ ತುಂಗ-ಭದ್ರಾ ನದಿಯಿಂದ ನೀರು ಹರಿಸಲಾಗುತ್ತದೆ.
 • ರಾಜ್ಯದಲ್ಲಿ 43 ತಾಲೂಕುಗಳಲ್ಲಿ ಅಂತರ್ಜಲ ಅಭಿವೃದ್ಧಿಗೆ ಚೆಕ್ ಡ್ಯಾಂ ಅನ್ನು 50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ.
 • “ಪಶ್ಚಿಮ ವಾಹಿನಿ” ಯೋಜನೆಯಡಿ ದಕ್ಷಿಣ ಕನ್ನಡದ ಅರೆಕಳ ಎಂಬಲ್ಲಿ ನೇತ್ರಾವತಿ ನದಿಗೆ ಉಪ್ಪು ನೀರು ಸೇರುವುದನ್ನು ತಪ್ಪಿಸಲು ಕಿಂಡಿ ಅಣೆಕ್ಟಟ್ಟನ್ನು 174 ಕೋಟಿ ವೆಚ್ಚದಲ್ಲಿ ನಿರ್ಮಣ ಮಾಡಲಾಗುತ್ತದೆ.
 • ನದಿಗಳನ್ನು ಸಂರಕ್ಷಣೆ ಮಾಡಲು ನದಿಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಬೃಹತ್ ಗಿಡಗಳನ್ನು ನೆಡಲಾಗುತ್ತದೆ. ಇದಕ್ಕಾಗಿ 10 ಕೋಟಿ ರೂ. ಮೀಸಲು ಇಡಲಾಗಿದೆ.
 • ಪ್ರಾಣಿಗಳ ದಾಳಿಯಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಮತ್ತು ಅವರ ಕುಟುಂಬದವರಿಗೆ 5 ವರ್ಷಗಳ ಕಾಲ 2 ಸಾವಿರ ರೂ. ಮಾಶಾಸನ ವಿತರಣೆ ಮಾಡಲಾಗುತ್ತದೆ.
 • ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಲು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಎನ್‌ಎಬಿಎಚ್‌ ಅಡಿಯಲ್ಲಿ ಪ್ರಮಾಣೀಕರಣ ಮಾಡಲಾಗುತ್ತದೆ. ಚಿಕಿತ್ಸಾ ದರಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಪ್ರಕಟಿಸಲಾಗುತ್ತದೆ.
 • ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 1000 ಹಾಸಿಗೆಗಳ ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತದೆ. ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ 7.18 ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆ. ಗದಗ, ಕೊಪ್ಪಳ, ಚಾಮರಾಜನಗರ ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಲ್ಲಿ ಆಸ್ಪತ್ರೆಗಳ ನಿರ್ಮಾಣ.
 • ನಗರ ಪ್ರದೇಶಗಳಲ್ಲಿ 250 ಅಂಗನವಾಡಿ ನಿರ್ಮಾನ ಮಾಡಲು 17 ಕೋಟಿ ಅನುದಾನ.
 • ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 30 ಲಕ್ಷ ಫಲಾನುಭವಿಗಳಿಗೆ 1350 ಕೋಟಿ ವೆಚ್ಚದಲ್ಲಿ ಉಚಿತ ಅನಿಲ ಸಂಪರ್ಕ, 2 ಬರ್ನರ್ ಉಳ್ಳ ಗ್ಯಾಸ್ ಸ್ವವ್ ವಿತರಣೆ.
 • ನವೋದ್ಯಮಗಳ ಉತ್ತೇಜನಕ್ಕಾಗಿ ಕಲಬುರಗಿಯಲ್ಲಿ ದೇಶಪಾಂಡೆ ಫೌಂಡೇಷನ್ ಸಹಯೋಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಸ್ಥಾಪನೆ
 • ಬೆಂಗಳೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ. ಪತ್ರಕರ್ತರಿಗೆ ಅಪಘಾತ ಅಥವ ಅಕಾಲಿಕ ಮರಣದ ಸಂದರ್ಭದಲ್ಲಿ 5 ಲಕ್ಷ ರೂ. ವರೆಗಿನ ಸಮೂಹ ಜೀವ ವಿಮೆ ಸೌಲಭ್ಯದ ‘ಮಾಧ್ಯಮ ಸಂಜೀವಿನಿ’ ಯೋಜನೆ ಜಾರಿ.
 • ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿ ಕೆಎಸ್ಎಸ್‌ಐಡಿಸಿ ವತಿಯಿಂದ ಮೂಲ ಸೌಕರ್ಯ ಅಭಿವೃದ್ಧಿ.
 • ಮಡಿಕೇರಿ-ತಲಕಾವೇರಿ ರಸ್ತೆಯ ಆಯ್ದ ಭಾಗಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಹಾಗೂ ಅಭಿವೃದ್ಧಿ.
 • ಬೆಂಗಳೂರು ನಗರ ಪ್ರದೇಶಕ್ಕೆ ಜಾರಿಗೆ ತರಲಾದ ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು ‘ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ’ ಎಂಬ ಹೆಸರಿನಲ್ಲಿ ರಾಜ್ಯದ ಎಲ್ಲಾ ನಗರ ಪ್ರದೇಶಗಳಿಗೂ ವಿಸ್ತರಣೆ. ಮುಂದಿನ 5 ವರ್ಷದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 20 ಲಕ್ಷ ಮನೆಗಳ ನಿರ್ಮಾಣದ ಗುರಿ.

 • 25 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಮಹಿಳಾ ಕಾಲೇಜು. 2 ಮಾದರಿ ವಸತಿ ಶಾಲೆ, 25 ವಿದ್ಯಾರ್ಥಿ ನಿಲಯ, 10 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ, 4 ಬಿ.ಎಡ್ ಹಾಗೂ ಡಿ.ಎಡ್. ಆಂಗ್ಲ ಮಾಧ್ಯಮ ಬಾಲಕಿಯರ ವಸತಿ ಸಹಿತ ಕಾಲೇಜು ಮತ್ತು ಸಂಪನ್ಮೂಲ ಕೇಂದ್ರ ಆರಂಭ.
 • ಹಾಸನ, ಮೈಸೂರು, ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 15 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ಸ್ಥಾಪನೆ
 • ಕಲಬುರಗಿಯ ವೈದ್ಯಕೀಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಟ್ಟಗಾಯಗಳ ವಾರ್ಡ್ ಆರಂಭ
 • ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಂದು ಪೆಟ್ ಸಿ.ಟಿ. ಸ್ಕ್ಯಾನ್ ಸೌಲಭ್ಯ ಸ್ಥಾಪನೆ.
 • 135 ಕೋಟಿ ವೆಚ್ಚದಲ್ಲಿ ದಾವಣಗೆರೆ ತಾಲೂಕಿನ ಬೇತೂರು, ಮಾಗನಳ್ಳಿ, ರಾಮ್ ಪುರ, ಮೇಗಲಗೇರಿ ಮತ್ತು ಖಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗಭದ್ರಾ ನದಿಯ ನೀರಿನ ಮೂಲಕ ತುಂಬಲಾಗುತ್ತದೆ.
 • 250 ಕೋಟಿ ವೆಚ್ಚದಲ್ಲಿ ಜಗಳೂರು ತಾಲೂಕಿನ 46 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತದೆ
 • ಬೆಳಗಾವಿಯ ರಾಮದುರ್ಗ ತಾಲೂಕಿನ 46 ಕೆರೆಗಳಿಗೆ 540 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ನೀರು ಹರಿಸುವ ಸಾಲಾಪುರ ಏತ ನೀರಾವರಿ ಯೋಜನೆ.
 • 70 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಚೆನ್ನರಾಯಪಟ್ಟಣ ತಾಲೂಕಿನ ಅಮಾನಿಕೆರೆಯಿಂದ ತಾಲೂಕಿನ 25 ಕೆರೆಗಳನ್ನು ತುಂಬಿಸುವ ಕಾಮಗಾರಿ.

 • ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ)ಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ.
 • ಮದ್ಯದ 2 ರಿಂದ 18ನೇ ಘೋಷಿತ ಬೆಲೆ ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರ ಹಾಲಿ ಇರುವ ದರಗಳ ಮೇಲೆ ಶೇ 8ರಷ್ಟು ಹೆಚ್ಚಳ.
 • ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಮತ್ತು ಹೈವೇ ಅಮಿನಿಟೀಸ್ ನಿರ್ಮಾಣ.
 • ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇರುವ ಫ್ಲೈ ಬಸ್ ಸೇವೆಯನ್ನು 7 ನಗರಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
 • ದೇಶದಲ್ಲಿಯೇ ಮೊದಲ ಬಾರಿಗೆ ನಗರಗಳ ನಡುವೆ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ 10 ಡಬ್ಬಲ್ ಡೆಕ್ಕರ್ ಬಸ್ಸುಗಳ ಕಾರ್ಯಾಚರಣೆ.
 • ಬೆಂಗಳೂರು ಸಮೀಪ 400 ಎಕರೆಯಲ್ಲಿ ಮತ್ತು ಹುಬ್ಬಳ್ಳಿಯಲ್ಲಿ 50 ಎಕರೆಯಲ್ಲಿ ಬಹುಮಾದರಿಯ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ
 • ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್ ಬಳಿ 20 ಕೋಟಿ ವೆಚ್ಚದಲ್ಲಿ ಬಹುಮಹಡಿ ವಾಹನ ಪಾರ್ಕಿಂಗ್ ನಿಲ್ದಾಣ ನಿರ್ಮಾಣ.
 • ದೆಹಲಿಯ ಕರ್ನಾಟಕ ಭವನ-1ರ ಮುಂಭಾಗವನ್ನು ಕೆಡವಿ ಮುಂದಿನ 2 ವರ್ಷಗಳಲ್ಲಿ 30 ಕೋಟಿ ವೆಚ್ಚದಲ್ಲಿ ಹೊಸ ಭವನ ನಿರ್ಮಾಣ.
 • ತಿರುಮಲದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಸುಸಜ್ಜಿತ ಅತಿಥಿ ಗೃಹ ನಿರ್ಮಾಣ.
 • ಆನ್‌ಲೈನ್ ಹಾಗೂ ಓವರ್ ದಿ ಕೌಂಟರ್ ಮೂಲಕ ಜಾತಿ, ಆದಾಯ ಮತ್ತು ವಾಸದ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡುವ ಪದ್ಧತಿ ‘ಈ ಕ್ಷಣ’ವನ್ನು ನಗರ ಪ್ರದೇಶ ಸೇರಿದಂತೆ ರಾಜ್ಯದ ಎಲ್ಲಾ ಕಡೆ ವಿಸ್ತರಣೆ ಮಾಡಲಾಗುತ್ತದೆ.
 • ಮಲೆನಾಡು ಅಭಿವೃದ್ಧಿ ಮಂಡಳಿ 70, ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ 55 ಮತ್ತು ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ 25 ಕೋಟಿ ಅನುದಾನ.
 • ಗ್ರಾಮೀಣ ಮಣ್ಣಿನ ಕುಸ್ತಿ ಉತ್ತೇಜನಕ್ಕಾಗಿ ಜಾಗತಿಕ ಮಟ್ಟದ ವಾರ್ಷಿಕ ‘ಕರ್ನಾಟಕ ಕುಸ್ತಿ ಹಬ್ಬ’ ಆಯೋಜನೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೊರಾಂಗಣ ಜಿಮ್ ಸೌಕರ್ಯ.
 • ದೇವನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ತಾವರೆಕೆರೆ ಹಾಗೂ ವರ್ತೂರಿನಲ್ಲಿ 20 ಕೋಟಿ ವೆಚ್ಚದಲ್ಲಿ ಆಧುನಿಕ ಕ್ರೀಡಾ ಸೌಲಭ್ಯ ಭವನ ನಿರ್ಮಾಣ
 • ಕನ್ನಡ ತಂತ್ರಾಶ ಅಭಿವೃದ್ಧಿ ಹಾಗೂ ಕನ್ನಡ ತಾಂತ್ರಿಕ ವಿಷಯಗಳಲ್ಲಿ ಸಂಶೋಧನೆ ನಡೆಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಫೆಲೋಷಿಪ್.
 • ಪುಸ್ತಕ ಸಂಸ್ಕೃತಿ ಬೆಳೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ 1.5 ಕೋಟಿ ವೆಚ್ಚದಲ್ಲಿ ಪುಸ್ತಕ ಜಾಥಾ ಕಾರ್ಯಕ್ರಮ ಆಯೋಜನೆ
 • ಕುವೆಂಪು ಅವರ ಮೈಸೂರಿನ ನಿವಾಸ ‘ಉದಯರವಿ’ಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಅಭಿವೃದ್ಧಿ.
 • 2018-19ರಲ್ಲಿ 105.55 ಕಿ.ಮೀ. ಉದ್ದದ ಬೆಂಗಳೂರು ಮೆಟ್ರೋ ಹಂತ – 3 ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಅಗತ್ಯ ಕ್ರಮ.
 • ಬೆಂಗಳೂರಿನ ಗಾಂಧಿ ಬಜಾರ್, ಗಾಂಧಿ ನಗರದ ಸುಖ್ ಸಾಗರ್ ಹೋಟೆಲ್, ರೇಸ್ ಕೋರ್ಸ್, ಜಯನಗರ ಕಾಂಪ್ಲೆಕ್ಸ್ ಬಳಿ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ಕಟ್ಟಡ ವಾಹನ ನಿಲ್ದಾಣ ಆರಂಭ.
 • ಬೆಂಗಳೂರು ಮತ್ತು ಧಾರವಾಡದಲ್ಲಿ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರ ಸಂಸ್ಥೆಯಲ್ಲಿ ಸಾರಿಗೆ ಇಲಾಖೆಯಿಂದ 100 ಹಾಗೂ ಬೆಂಗಳೂರು ಮಹಾನಗರ ಸಂಸ್ಥೆಯಿಂದ 1000 ಮಹಿಳಾ ಅಭ್ಯರ್ಥಿಗಳಿಗೆ ಲಘು ಮೋಟಾರ್ ವಾಹನ ತರಬೇತಿ.
 • ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಯನ್ನು ಹಾಲಿ ಇರುವ ಎಲ್ಲಾ ತಾಲೂಕುಗಳು ಮತ್ತು ಹೊಸದಾಗಿ ರಚಿಸಿದ 50 ತಾಲೂಕುಗಳಲ್ಲಿ ಹೊಸ ಅಗ್ನಿಶಾಮಕ ಠಾಣೆಗಳ ಆರಂಭ.
 • ಸೈಬರ್ ಪೊಲೀಸ್ ಠಾಣೆಗೆ ಅನುಕೂಲವಾಗುವಂತೆ 5 ಕೋಟಿ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪನೆ.
 • ಪಾರಂಪರಿಕ ಪ್ರವಾಸಿತಾಣಗಳಾದ ಹಂಪಿ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ನಂದಿಬೆಟ್ಟ, ಸನ್ನತಿ ಮತ್ತು ಕಲಬುರಗಿ ಕೋಟೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ.
 • ಎಲ್ಲಾ ಜಿಲ್ಲಾ ಕಾರಾಗೃಹಗಳು ಹಾಗೂ ನ್ಯಾಯಾಲಯಗಳಿಗೆ ವಿಡಿಯೋ ಲಿಂಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಕೈದಿಗಳಿಗೆ ವಿವಿಧ ವೃತ್ತಿಗಳಲ್ಲಿ ಕೌಶಲ್ಯ ತರಬೇತಿ ನೀಡಿ ಪುನರ್ವಸತಿಗೆ ನೆರವಾಗಲು ಕರ್ನಾಟಕ ಕಾರಾಗೃಹ ಅಭಿವೃದ್ಧೀ ಮಂಡಳಿ ಸ್ಥಾಪನೆ
 • ಮಂಗಳೂರಿನಲ್ಲಿ 85 ಕೋಟಿ ವೆಚ್ಚದಲ್ಲಿ ಹೊಸ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣ. ಬೆಂಗಳೂರು ಕಾರಾಗೃಹದಲ್ಲಿ 100 ಕೋಟಿಯಲ್ಲಿ ಅತ್ಯುನ್ನತ ಭದ್ರತಾ ವಿಭಾಗದ ಸ್ಥಾಪನೆ

 • ಪೊಲೀಸ್ ಇಲಾಖೆಯಲ್ಲಿ ಮುಂದಿನ 5 ವರ್ಷದಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 25ರಷ್ಟು ಹೆಚ್ಚಳ. ಎಲ್ಲಾ ಪೊಲೀಸ್ ಆಯಕ್ತರ ಕಚೇರಿಯಲ್ಲಿ ‘ನಿರ್ಭಯ ಕೇಂದ್ರ’ಗಳ ಸ್ಥಾಪನೆ.
 • ರಾಜ್ಯದ 5 ಜಿಲ್ಲೆಗಳಲ್ಲಿ ಮಹಿಳಾ ಕ್ರೀಡಾಪಟುಗಳಿಗಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಪ್ರತ್ಯೇಕ ಮಹಿಳಾ ಕ್ರೀಡಾ ವಸತಿ ನಿಲಯ ಆರಂಭ.
 • SC ಹುಡುಗ ಬೇರೆ ಜಾತಿಯ ಯುವತಿಯನ್ನು ವಿವಾಹವಾದರೆ ನೀಡುತ್ತಿರುವ ಪ್ರೋತ್ಸಾಹಧನವನ್ನು 3 ಲಕ್ಷ ರೂ.ಗಳಿಗೆ ಏರಿಕೆ. SCಹುಡುಗಿ ಬೇರೆ ಜಾತಿಯ ಹುಡುಗನನ್ನು ವಿವಾಹವಾದರೆ ನೀಡುವ ಪ್ರೋತ್ಸಹಧವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುತ್ತದೆ.
 • ಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ ಪರಂಪರೆ ಬಿಂಬಿಸುವ ‘ಕಲಬುರಗಿ ಕಲಾವನ’ ನಿರ್ಮಾಣ.
 • ಇಷ್ಟೆಲ್ಲ ಯೋಜನೆ ಜಾರಿತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಸುಮಾರು 3 ಗಂಟೆಗೂ ಅಧಿಕವಾದ ಬಜೆಟ್ ಘೋಷಿಸಿದ ಸಿಎಂ. ಮದ್ಯಾಹ್ನದ ವೇಳೆಗೆ ತಮ್ಮ ಭಾಷಣವನ್ನು ಅಂತ್ಯಗೊಳಿಸಿದರು.