ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಹ್ವಾನ; ಕರ್ನಾಟಕದಲ್ಲಿ ರಾಹುಲ್ ಸ್ಪರ್ಧೆಯ ಬಗ್ಗೆ ನಿಮ್ಮ ಅಭಿಪ್ರಾಯ?

0
269

ಲೋಕಸಭಾ ಚುನಾವಣೆಯ ಕಾಯು ದಿನದಿಂದ ದಿನಕ್ಕೆ ಏರಿತ್ತಿದ್ದು. ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ಜಟಾಪಟಿಯಲ್ಲಿ ನಾಯಕರ ಪ್ರಚಾರ ಜೋರಾಗಿದೆ. ಇದರ ನಡುವೆ ರಾಜಕೀಯವಾಗಿ ಮತ್ತೊಂದು ಬೆಳವಣಿಗೆ ಕಂಡು ಬರುತ್ತಿದ್ದು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕರ್ನಾಟಕದಲ್ಲಿ ಸ್ಪರ್ಧೆಗೆ ಇಳಿಯುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರೆ. ಇದು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ಸಾಬೀತಾಗಿದೆ. ನಮ್ಮ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಸಹ ಕರ್ನಾಟಕದಿಂದ ಸ್ಪರ್ಧಿಸಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ರಾಹುಲ್ ಸ್ಪರ್ಧೆ?

ಕರ್ನಾಟಕ ಯಾವಾಗಲು ಕಾಂಗ್ರೆಸ್​ ನಾಯಕರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದು ಶ್ರೀಮತಿ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರಕರಣದಲ್ಲಿ ಸಾಬೀತಾಗಿದೆ. ನಮ್ಮ ಮುಂದಿನ ಪ್ರಧಾನಿ ರಾಹುಲ್​ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎಂಬುದು ನಮ್ಮೆಲ್ಲರ ಬಯಕೆ,” ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು ಕೂಡ ರಾಹುಲ್​ ಗಾಂಧಿ ಉತ್ತರ ಭಾರತ ಮತ್ತು ದಕ್ಷಿಣ ಕರ್ನಾಟಕ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಎಂದು ಮನವಿ ಮಾಡಿ ಟ್ವೀಟ್​ ಮಾಡಿದ್ದಾರೆ.

ಚಿಕ್ಕಮಗಳೂರು ನಲ್ಲಿ ರಾಹುಲ್?

ರಾಜ್ಯದಲ್ಲಿ ಈ ಹಿಂದೆ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಕೂಡ ಸ್ಪರ್ಧಿಸಿ ಗೆದ್ದಿದ್ದಾರೆ. ರಾಹುಲ್​ ಗಾಂಧಿ ಇಲ್ಲಿಂದ ಸ್ಪರ್ಧೆ ಮಾಡ ಬಯಸಿದರೆ, ನಾವು ಸ್ವಾಗತಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಇಂದು ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತು ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯವಾಗಿ ಮರುಜನ್ಮ ಪಡೆದ ಐತಿಹಾಸಿಕ ಉದಾಹರಣೆಗೆ ಕರ್ನಾಟಕ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಕೂಡ ಕರ್ನಾಟಕದಿಂದ ಸ್ಪರ್ಧಿಸಿದರೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ಪಡೆಯಬಹುದು. ಈ ಹಿನ್ನೆಲೆಯಲ್ಲಿ ರಾಹುಲ್​ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಲಿ ಎಂಬುದು ರಾಜ್ಯ ನಾಯಕರ ಕಳಕಳಿಯಾಗಿದೆ.

ರಾಹುಲ್ ಆಯ್ಕೆ ಕರ್ನಾಟಕವೇ ಸೂಕ್ತ?

ತಮಿಳುನಾಡಿನಲ್ಲಿ ಆಳುವ ಸರ್ಕಾರ ಬಿಜೆಪಿ ಜೊತೆಗೆ ಕೈಜೋಡಿಸಿದೆ. ಕಾಂಗ್ರೆಸ್‌ಗೆ ಸಹ ಅಷ್ಟು ಬಿಗಿಯಾದ ಹಿಡಿತ ಅಲ್ಲಿ ಇಲ್ಲ. ಹಾಗಾಗಿ ರಾಹುಲ್ ಅವರ ಆಯ್ಕೆ ಕರ್ನಾಟಕವೇ ಆಗಲಿದೆ ಎಂಬುದು ಎಲ್ಲರ ಊಹೆ. ದಕ್ಷಿಣದಲ್ಲಿ ತಮ್ಮ ಪ್ರಭಾವ ಹೆಚ್ಚು ಮಾಡಿಕೊಳ್ಳಲು ರಾಹುಲ್ ಅವರು ಎರಡನೇ ಕ್ಷೇತ್ರವನ್ನಾಗಿ ಕರ್ನಾಟಕದ ಯಾವುದಾದರೂ ಕಾಂಗ್ರೆಸ್ ಪ್ರಭುತ್ವವಿರುವ ಕ್ಷೇತ್ರವನ್ನೇ ಆಯ್ದುಕೊಳ್ಳಲಿದ್ದಾರೆ.

ರಾಹುಲ್ ಆಹ್ವಾನಕ್ಕೆ ಬಿಜೆಪಿ ವ್ಯಂಗ್ಯ;

ಮುಂದಿನ ಪ್ರಧಾನಿ ರಾಹುಲ್‌ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಲಿ ಎಂದು ಹೇಳಿದ್ದರು. ಈ ಹಿನ್ನೆಲೆ, ಸಿದ್ದರಾಮಯ್ಯ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಟೀಕೆ ಮಾಡಿದೆ. ವಿಧಾನಸಭೆ ಚುನಾವಣೆ – 2018 ರಲ್ಲಿ ತನ್ನ ಚಾಮುಂಡೇಶ್ವರಿ ಕ್ಷೇತ್ರವನ್ನೇ ಗೆಲ್ಲದ ವ್ಯಕ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಸೋತ ಮತ್ತೊಬ್ಬ ವ್ಯಕ್ತಿಗೆ ಕಾರ್ಪೆಟ್‌ ಹಾಕಿ ಸ್ವಾಗತ ಕೋರುತ್ತಿದ್ದಾರೆ” ಎಂದು ಬಿಜೆಪಿ ಕರ್ನಾಟಕ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಲಾಗಿದೆ. ಅಲ್ಲದೆ ಕೋತಿ ತಾನೂ ಕೆಡೋದಲ್ದೆ ಎಂದೂ ಗಾದೆಯನ್ನು ಅರ್ಧಂಬರ್ಧ ಟ್ವೀಟ್‌ ಮಾಡಿದ್ದು, ರಾಹುಲ್ ಗಾಂಧಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ಟ್ವೀಟ್‌ ಮೂಲಕ ಕಾಲೆಳೆದಿದೆ.

Also read: ಕಾಂಗ್ರೆಸ್ ಪಕ್ಷ ಸೇನೆಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಸೋನಿಯಾ ಆಪ್ತ ಟಾಮ್ ವಡಕ್ಕನ್ ಬಿ.ಜೆ.ಪಿ. ಸೇರಿದ್ದಾರೆ; ಇವರ ಈ ನಡೆಯನ್ನು ಒಪ್ಪುತ್ತೀರಾ??