ಸಿದ್ದು ಸರ್ಕಾರದಿಂದ ಅನ್ನ ಭಾಗ್ಯದ ನಂತರ ಈಗ ಮಾಂಸ ಭಾಗ್ಯ ಶುರು ಆಗ್ತಿದೆ ಅಂತೆ.. ಇದೆಲ್ಲ ಚುನಾವಣೆಗೆ ಗಿಮ್ಮಿಕ್ಸ್??

0
418

2013 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ರಾಜ್ಯದ ಜನರಿಗೆ ಒಂದಲ್ಲ ಒಂದು ರೀತಿ ಹೊಸ ಯೋಜನೆಗಳನ್ನು ನೀಡುತ್ತ ಬಂದಿವೆ. ಈ ಬಾರಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದವರಿಗೆ ಮತ್ತೊಂದು ವಿನೂತನ ಯೋಜನೆಯನ್ನು ಹೊರತಂದಿದೆ, ಅದೇ ಕೋಳಿ ಭಾಗ್ಯ, ಕುರಿ ಭಾಗ್ಯ.

ಹೌದು, ಈ ವಿಷಯವನ್ನು ಖುದ್ದು ಸಚಿವ ಎ.ಮಂಜು ಅವರೇ ತಿಳಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ಜನರಿಗೆ ಉಪಯೋಗವಾಗಲು ಹಾಗು ಜನರು ಪ್ರಾಣಿ-ಪಶು ಸಾಕಾಣಿಕೆ ಪ್ರೋತ್ಸಾಹಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ, ಒಬ್ಬ ವ್ಯಕ್ತಿ ವಾರ್ಷಿಕ 11 ಕೆಜಿಗಳಷ್ಟು ಮಾಂಸವನ್ನು ಸೇವಿಸುತ್ತಾನೆ. ಆದರೆ ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕೇವಲ 3 ಕೆ.ಜಿ.ಯಷ್ಟಿದೆ. ಅಂದರೆ ಬೇಡಿಕೆಯ ಪ್ರಮಾಣಕ್ಕಿಂತಲು ತಲಾ 8 ಕೆಜಿಗಳಷ್ಟು ಮಾಂಸದ ಕೊರತೆ ಇದೆ.

ರಾಜ್ಯದಲ್ಲಿ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಹೊರ ರಾಜ್ಯಗಳಿಂದ ಕುರಿ, ಮೇಕೆ, ಕೋಳಿಗಳನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿಯಿದೆ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಕುರಿ, ಮೇಕೆ, ಕೋಳಿಗಳನ್ನು ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಎರಡು ಕುರಿ, ಮೇಕೆ ಮತ್ತು ಹಲವು ಕೋಳಿಗಳನ್ನು ನೀಡಲಾಗುವುದು. ಇವುಗಳ ಪಾಲನೆ, ಪೋಷಣೆ ಮಾಡುವುದರ ಮೂಲಕ ವರ್ಷಕ್ಕೆ 35 ರಿಂದ 40 ಸಾವಿರ ರೂ.ಗಳಷ್ಟು ಆದಾಯಗಳಿಸಬಹುದು ಎಂದರು.

ಒಟ್ಟಿನಲ್ಲಿ ರಾಜ್ಯ ಸರಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕು.