ಪರೀಕ್ಷೆಯನ್ನೂ ಲೆಕ್ಕಿಸದೇ ನಡೆಯಿತು ಮುಖ್ಯಮಂತ್ರಿಯವರ ಭಾಷಣದಿಂದ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಗಲಿಲ್ಲ… ನ್ಯಾಯ ಎಲ್ಲಿದೆ??

0
575

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿ ಹೋದರಲ್ಲಿ ಸುದ್ದಿಯಾಗುತ್ತಿದ್ದಾರೆ, ವೈದ್ಯರ ಮುಷ್ಕರದ ಬಿಸಿ ಇನ್ನು ತಣ್ಣಗಾಗಿಲ್ಲ, ಆಗಲೇ ಸಿಎಂ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ, ಯಾವ ಸುದ್ದಿ, ಎಲ್ಲಿ ನಡೀತು ಅಂತೀರಾ, ಅದು ನಡೆದಿದ್ದು ವಿಜಯಪುರದಲ್ಲಿ, ಈ ಬಾರಿ ಸಿಎಂ ವಿದ್ಯಾಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ, ಇಂಡಿ ತಾಲೂಕಿನ, ಚಡಚಣ ಪಟ್ಟಣದಲ್ಲಿ ಏತ ನೀರಾವರಿ ಯೋಜನೆಯ ಅಡಿಗಲ್ಲು ಸಮಾರಂಭ ನಡೆಯಿತು. ಪರೀಕ್ಷಾ ಕೇಂದ್ರದ ಪಕ್ಕದಲ್ಲಿ ಕೇವಲ ೫೦ ಮೀಟರ್ ದೂರದ ಪಟ್ಟಣದ ಸಂಗಮೇಶ್ವರ ಪದವಿ ಕಾಲೇಜು ಆವರಣದಲ್ಲಿ, ಬೃಹತ್ ವೇದಿಕೆಯಲ್ಲಿ ಸಿಎಂ ಕಾರ್ಯಕ್ರಮ ನಡೆಯಿತು.

ಕಾಲೇಜಿಗೆ ರಜೆ ಇದ್ದಿದ್ದರೆ ಪರವಾಗಿಲ್ಲ ಆದರೆ, ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಸಿಎ, ಬಿಎಸ್‌‌ಡಬ್ಲ್ಯೂ ೫ ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಸಿಎಂ ಅವರ ಈ ಕಾರ್ಯಕ್ರಮದ ಗಲಾಟೆಯಿಂದ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ತುಂಬ ತೊಂದರೆ ಅನುಭವಿಸಿದರು. ಸೆಮಿಸ್ಟರ್ ಪೂರ್ತಿ ಕಷ್ಟಪಟ್ಟು ಓದಿ, ಶ್ರದ್ದೆಯಿಂದ ಪರೀಕ್ಷೆ ಕೊಡುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಸಿಎಂ ವಿಲ್ಲನ್ ಆಗಿದ್ದು ವಿಪರ್ಯಾಸವೇ ಸರಿ.

ಅಂದಹಾಗೆ ಈ ಬೃಹತ್ ಕಾರ್ಯಕ್ರಮ ನಾಗಠಾಣ ಕಾಂಗ್ರೆಸ್ ಶಾಸಕ ಪ್ರೊ.ರಾಜು ಆಲಗೂರ ನೇತೃತ್ವದಲ್ಲಿ ನಡೆಯಿತು, ಆಯೋಜಕರ ಯಡವಟ್ಟಿನಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಯಿತು.