ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ; ಸಿದ್ಧಾರ್ಥ್​​ ಸಾವು ಆತ್ಮಹತ್ಯೆಯೋ, ಕೊಲೆಯೋ??

0
571

ಇಡಿ ದೇಶದ ತುಂಬೆಲ್ಲ ಅನುಮಾನಕ್ಕೆ ಎಡೆಮಾಡಿದ ಉದ್ಯಮಿ ಸಿದ್ಧಾರ್ಥ್ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಮರಣೋತ್ತರ ಪ್ರಾಥಮಿಕ ವರದಿ ಬಹಿರಂಗವಾಗಿದೆ. ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾದ ಮೃತದೇಹವನ್ನು ಅಂದೇ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಮಾಡಲಾಗಿತ್ತು. ಈಗ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ (ಪ್ರೊವಿಷನಲ್‌ ರಿಪೋರ್ಟ್‌)ಯನ್ನು ಆಸ್ಪತ್ರೆಯ ಅಧೀಕ್ಷಕರು ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಸಿದ್ಧಾರ್ಥ ಅವರ ಸಾವಿಗೆ ಕಾರಣ ತಿಳಿಸಲಾಗಿದೆ.


Also read: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಡಿಕೆ ಶಿವಕುಮಾರ್ ಅವರೊಂದಿಗಿನ ಸ್ನೇಹ ಮಾಡಿದ್ದೆ, ಸಿದ್ಧಾರ್ಥ್ ಮೇಲೆ ಆದಾಯ ತೆರಿಗೆ ಒತ್ತಡ ಹೇರಲು ಕಾರಣವಾಯ್ತ?

ಕೊಲೇನೋ ಆತ್ಮಹತ್ಯೆನೋ?

ಹೌದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ, ‘ಕಾಫಿ ಡೇ’ ಕಂಪನಿಯ ಮಾಲಿಕ ವಿ.ಜಿ.ಸಿದ್ಧಾರ್ಥ ಅವರು ‘ನೀರಿಗೆ ಬಿದ್ದು ಉಸಿರುಗಟ್ಟಿಮೃತಪಟ್ಟಿದ್ದಾರೆಂದು’ ಮರಣೋತ್ತರ ಪರೀಕ್ಷೆಯ ಮಧ್ಯಂತರ ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಬಹುಕೋಟಿ ಮೌಲ್ಯದ ಕಂಪನಿಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವ ವಾದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತೆ ಆಗಿದ್ದು. ಆದರೆ ವರದಿ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ಸಿದ್ದಾರ್ಥ್ ಸಾವಿನ ಹಿಂದೆ ಕೊಲೆ ಅಥವಾ ಇನ್ನಾವುದೇ ರೀತಿಯ ಸಂಚು ಕೆಲಸ ಮಾಡಿದೆ ಎಂಬ ಊಹಾಪೋಹಗಳನ್ನು ವರದಿಯ ಸಾರ ತಳ್ಳಿಹಾಕಿದೆ ಎಂದು ತಿಳಿದುಬಂದಿದೆ.


Also read: ಉದ್ಯಮಿ ಸಿದ್ಧಾರ್ಥ್ ನದಿಗೆ ಹಾರಿದ ಸ್ಥಳದಿಂದ 4-5 ಕಿ.ಮೀ ದೂರದಲ್ಲಿ ಸಿಕ್ಕ ಮೃತದೇಹ; ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ ಸತ್ಯವೇನು??

ವರದಿಯಲ್ಲಿ ಏನಿದೆ?

ವಿ.ಜಿ.ಸಿದ್ಧಾರ್ಥ ಅವರು ‘ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು’ ಮರಣೋತ್ತರ ಪರೀಕ್ಷೆಯ ಮಧ್ಯಂತರ ವರದಿಯಲ್ಲಿ ಹೇಳಲಾಗಿದೆ. ವರದಿಯಲ್ಲಿ ಸಿದ್ಧಾರ್ಥ ಅವರ ಸಾವಿಗೆ ಬೇರೆ ಯಾವುದೇ ಕಾರಣ ನಮೂದಿಸಿಲ್ಲ. ಕೇವಲ ನೀರಿಗೆ ಬಿದ್ದು ಸಾವು ಸಂಭವಿಸಿದೆ ದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮೃತದೇಹ ಸಿಕ್ಕ ನಂತರ ಹಲವು ಅನುಮಾನಗಳು ಮೂಡಲು ಸಿದ್ಧಾರ್ಥ್ ಅವರ ದೇಹದ ಮೇಲೆ ಹಲವು ಗಾಯಗಳು ಕಂಡು ಬಂದಿದ್ದು, ಮತ್ತು ಅವರ ಮೈಮೇಲಿರುವ ಶರ್ಟ್ ಕೂಡ ಇರಲಿಲ್ಲ, ಇದರಿಂದ ಪ್ರತಿಯೊಬ್ಬರಿಗೂ ಸಂಶಯ ಮೂಡಿ ಪಕ್ಕಾ ಕೊಲೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದವು.


Also read: ಕಾಡುಗಳ್ಳ ವೀರಪ್ಪನ್‍ನಿಂದ ಡಾ. ರಾಜಕುಮಾರ್ ಬಿಡುಗಡೆ ಮಾಡಿದ್ದರ ಹಿಂದೆ ಕಾಫಿ ಕಿಂಗ್ ಸಿದ್ಧಾರ್ಥ್ ಅವರೇ ಮುಖ್ಯ ವ್ಯಕ್ತಿಯಂತೆ..!

ಅದರಂತೆ ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಸಾಕಷ್ಟುಅನುಮಾನಗಳಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಪರೀಕ್ಷೆಗೆ ಅವರ ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸುವಂತೆ ಆಸ್ಪತ್ರೆ ವೈದ್ಯರನ್ನು ಕೋರಿದ್ದರು. ಅದರಂತೆ ಫೆರೋನ್ಸಿಕ್‌ ತಜ್ಞರು ಸಿದ್ಧಾರ್ಥ ದೇಹದ ವಿವಿಧ ಭಾಗಗಳನ್ನು ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಅಲ್ಲಿಂದ 10 ದಿನದೊಳಗೆ ವರದಿ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ. ಈ ಪ್ರಥಾಮಿಕ ವರದಿಯಲ್ಲಿ ಸಿದ್ಧಾರ್ಥರ ಸಾವಿಗೆ ಕಾರಣ ಏನಿರಬಹುದು? ಎಂಬುದರ ಸುಳಿವು ಸಿಕ್ಕಿದೆ. ಇವರ ದೇಹದ ಯಾವ ಭಾಗಕ್ಕೆ ಏಟಾಗಿತ್ತು ಎಂಬ ಮಾಹಿತಿ ದೊರಕಿದೆ. ಆದರೆ, ಅಂತಿಮ ವರದಿ ಬಂದ್ಮೇಲೆ ಮಾತ್ರವೇ ಸಾವಿಗೆ ನಿಜವಾದ ಕಾರಣ ಎಂದು ಗೊತ್ತಾಗಲಿದೆ ಎನ್ನುತ್ತಿವೆ ಆಸ್ಪತ್ರೆಯ ಮೂಲಗಳು. ಇದಕ್ಕೆ ಸಂಬಂಧಪಟ್ಟ ಮಂಗಳೂರು ದಕ್ಷಿಣ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿಸಿಬಿ ಪೊಲೀಸ್ ತಂಡ ಮತ್ತೊಮ್ಮೆ ಬೆಂಗಳೂರಿಗೆ ಆಗಮಿಸಿ ಅಲ್ಲಿಯೂ ತನಿಖೆ ನಡೆಸಲಿದೆ. ಎನ್ನಲಾಗಿದೆ.