ನಿತ್ಯಾನಂದನಿಗೆ ಪ್ರಧಾನಿ ಮೋದಿ ತಲೆ ಬಾಗಿದ ಫೋಟೋ ವೈರಲ್; ಅತ್ಯಾಚಾರಿಗೆ ತಲೆ ಬಾಗಿಸಿದರೆ ಅವರ ತಲೆಯನ್ನು ಪರೀಕ್ಷಿಸಬೇಕಾಗುತ್ತದೆ. ನಟ ಸಿದ್ಧಾರ್ಥ್.!

0
4366

ಅತ್ಯಾಚಾರ ಆರೋಪಿ ನಿತ್ಯಾನಂದ ಹಲವು ದಿನಗಳಿಂದ ಸುದ್ದಿಯಲಿದ್ದು, ಸಧ್ಯ ದೇಶ ಬಿಟ್ಟು ಓಡಿ ಹೋಗಿದ್ದು. ದಕ್ಷಿಣ ಅಮೇರಿಕಾದಲ್ಲಿ ಸ್ವಂತ ದೇಶ ಕಟ್ಟುವ ಬಗ್ಗೆ ಸುಳಿವು ನೀಡಿದ ಕಳ್ಳಸ್ವಾಮಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ತಲೆ ಬಾಗಿ ಆಶೀರ್ವಾದ ಪಡೆದ ಫೋಟೋ ವೈರಲ್ ಆಗಿದೆ. ಈ ಫೋಟೋಕ್ಕೆ ಹಲವರು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದು, ಈ ಪೋಸ್ಟ್ ಗೆ ನಟ ಸಿದ್ಧಾರ್ಥ್ “ನಿತ್ಯಾನಂದ ಒಬ್ಬ ಕೋಡಂಗಿ, ವಂಚನೆ ಮತ್ತು ಅಪರಾಧಿ. ಸ್ವಯಂಪ್ರೇರಣೆಯಿಂದ ಯಾರಾದರೂ ಅವನ ಮುಂದೆ ತಲೆ ಬಾಗಿಸಿದರೆ ಅವರ ತಲೆಯನ್ನು ಪರೀಕ್ಷಿಸಬೇಕಾಗುತ್ತದೆ. ಎಂದು ಮೋದಿ ವಿರುದ್ಧ ಟ್ವೀಟ್ ಮಾಡಿದ್ದಾರೆ.

ಹೌದು ಕಳೆದ ಕೆಲವು ದಿನಗಳಿಂದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ರಚಿಸುತ್ತಿರುವ ಎಲ್ಲ ಕೋಲಾಹಲಗಳ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ತಲೆ ಬಾಗಿಸಿ ನಮಸ್ಕರಿಸುವ ಕೆಲವು ಚಿತ್ರಗಳು ಹೊರಬಿದ್ದಿದ್ದು. ಇದೆಲ್ಲ ನೋಡಿದರೆ ವಿವಾದಾತ್ಮಕ ವ್ಯಕ್ತಿತ್ವದಲ್ಲಿದ್ದರೂ, ನಿತ್ಯಾನಂದ ಅನುಯಾಯಿಗಳನ್ನು ಮತ್ತು ಭಕ್ತರನ್ನು ಪಡೆಯುತ್ತಲೇ ಇದ್ದಾರೆ. ಆದರೆ ಅತ್ಯಾಚಾರ ಆರೋಪಿ ನಿತ್ಯಾನಂದನ ಕುರಿತು ವಿದೇಶಗಳಲ್ಲೂ ಅಪಸ್ವರ ಎದ್ದಿದ್ದು, ಇದರ ಬೆನ್ನಲ್ಲೇ ಇದೀಗ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಅಜ್ಞಾತ ಸ್ಥಳದಿಂದ ನಿತ್ಯಾನಂದ ಈ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

Also read: ನಾನೇ ಪರಮಶಿವ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಯಾವುದೇ ಮೂರ್ಖ ನ್ಯಾಯಾಲಯವೂ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ನಿತ್ಯಾನಂದನ ವಿಡಿಯೋ ವೈರಲ್.!

ಇವೆಲ್ಲದರ ನಡುವೆ ಈಗ ಟ್ವಿಟ್ಟರ್ ಬಳಕೆದಾರರೊಬ್ಬರು ನಿಥಾಯಾನಂದ ಮತ್ತು ನರೇಂದ್ರ ಮೋದಿಯವರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾರತದ ಪ್ರಧಾನಿ ಯಾವಾಗ ತಮ್ಮ ದೇಶಕ್ಕೆ ಭೇಟಿ ನೀಡಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. “ಪಿಎಂ ಮೋದಿ ಅವರು ಹೊಸ ರಾಷ್ಟ್ರವಾದ ಕೈಲಾಸಾಗೆ ಯಾವಾಗ ಭೇಟಿ ನೀಡುತ್ತಾರೆ ಎಂದು ಹೇಳಿರುವುದು ಆಶ್ಚರ್ಯಕರವಾಗಿದ್ದು, ನಿತ್ಯಾನಂದ ಅವರು ರಾಷ್ಟ್ರದ ಸ್ಥಾಪಕ ಮತ್ತು ಅಧ್ಯಕ್ಷರೊಂದಿಗೆ ದೀರ್ಘ ಮತ್ತು ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ” ಎಂದು ಬಳಕೆದಾರರ ಟ್ವೀಟ್ ಮಾಡಿದ್ದಾರೆ.

Also read: ದೇಶಬಿಟ್ಟು ತಲೆಮರೆಸಿಕೊಂಡ ನಿತ್ಯಾನಂದ; ಅಮೆರಿಕದಲ್ಲಿ ದ್ವೀಪ ಖರೀದಿಸಿ ಹೊಸ ದೇಶವನ್ನೇ ಕಟ್ಟಿ ಪೌರತ್ವ ಪಡೆಯುವುದು ಸದವಕಾಶ ನೀಡಿದ್ದಾನೆ.!

ಈ ಪೋಸ್ಟ್ ನೋಡಿದ ನಟ ಸಿದ್ಧಾರ್ಥ್ ತಮ್ಮ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇವರು ಈ ಹಿಂದೆ ರಾಜಕೀಯವಾಗಿ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ, ಈಗ ಟ್ವೀಟ್ ಮಾಡುವ ಮೂಲಕ ನಿತ್ಯಾನಂದರಂತಹ ವಂಚನೆಗೆ ತಲೆಬಾಗಿದ್ದಕ್ಕಾಗಿ ಪ್ರಧಾನ ಮಂತ್ರಿಯನ್ನು ಬಹಿರಂಗವಾಗಿ ವಿರೋದ್ಧಿಸಿದ್ದು. “ನಿತ್ಯಾನಂದ ಒಬ್ಬ ಕೋಡಂಗಿ, ವಂಚನೆ ಮತ್ತು ಅಪರಾಧಿ. ಸ್ವಯಂಪ್ರೇರಣೆಯಿಂದ ಯಾರಾದರೂ ಅವನ ಮುಂದೆ ತಲೆ ಬಾಗಿಸಿದರೆ ಅವರ ತಲೆಯನ್ನು ಪರೀಕ್ಷಿಸಬೇಕಾಗುತ್ತದೆ. ಎಂದು ಅವರು ತಮ್ಮ ಟ್ವೀಟ್‌ ಮಾಡಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡ ಆರೋಪಿ ಮೊನ್ನೆತಾನೇ ನಾನು ಪರಮಶಿವ ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು, ನಿತ್ಯಾನಂದನ ವಿಡಿಯೋದಲ್ಲಿ ದಿನಾಂಕ ಸ್ಪಷ್ಟವಾಗಿಲ್ಲ, ನವೆಂಬರ್ 22ರಂದು ಟ್ವಿಟ್ಟರಿನಲ್ಲಿ ಈ ವಿಡಿಯೋ ಹಾಕಲಾಗಿದೆ. ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸತ್ಯವೇನೆಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ತೋರಿಸುತ್ತೇನೆ. ಈಗ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ನಿಜವನ್ನು ಹೇಳುತ್ತೇನೆ. ನಾನು ಪರಮಶಿವ- ಅರ್ಥವಾಯಿತೇ? ನಿಜವನ್ನು ಬಾಯ್ಬಿಡಿಸಲು ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ವಿಚಾರಣೆಗೊಳಪಡಿಸಬೇಕಿಲ್ಲ ಎಂದು ವಿಡಿಯೋದಲ್ಲಿ ನಿತ್ಯಾನಂದ ಹೇಳಿಕೊಂಡಿದ್ದಾನೆ.