ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
653

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತವು ನೂತನ ಶಾಖೆಯನ್ನು ಆರಂಭಿಸುತ್ತಿದ್ದು 250 ಹಿರಿಯ ಅಧಿಕಾರಿ,ಕಿರಿಯ ಅಧಿಕಾರಿ, ಚಾಲಕರು ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡುವುದುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 13,2019 ರೊಳಗೆ ಅರ್ಜಿ ಸಲ್ಲಿಸಬೇಕು.

Also read: ಸ್ಟಾಫ್ ಸೆಲೆಕ್ಷನ್ ಕಮಿಷನ್ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ (Name Of The Posts): ಹಿರಿಯ ಅಧಿಕಾರಿ,ಕಿರಿಯ ಅಧಿಕಾರಿ, ಚಾಲಕರು ಮತ್ತು ಇತರೆ ಹುದ್ದೆಗಳು

ಸಂಸ್ಥೆ (Organisation): ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ

ವಿದ್ಯಾರ್ಹತೆ (Educational Qualification): ಹಿರಿಯ ಅಧಿಕಾರಿ ಹುದ್ದೆಗಳಿಗೆ ಬಿ,ಕಾಂ / ಎಂ.ಕಾಂ ಎಂಬಿಎ / ಎಂಸಿಎ, ಕಿರಿಯ ಅಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ / ಬಿಸಿಎ /ಬಿಬಿಎ, ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣೆ ಹುದ್ದೆಗಳಿಗೆ ಬಿಸಿಎ / ಡಿಪ್ಲೋಮಾ / ಐಟಿಐ, ಡಿ.ಫಾರ್ಮಾ / ಬಿ. ಫಾರ್ಮಾ ಹುದ್ದೆಗಳಿಗೆ ಡಿ.ಫಾರ್ಮಾ / ಬಿ.ಫಾರ್ಮಾ ಮತ್ತು ಅಟೆಂಡರ್ /ಚಾಲಕ ಹುದ್ದೆಗಳಿಗೆ ಹತ್ತನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: ಹಿರಿಯ ಅಧಿಕಾರಿ ಹುದ್ದೆಗಳಿಗೆ 23 ರಿಂದ 35 ವರ್ಷ, ಕಿರಿಯ ಅಧಿಕಾರಿ ಹುದ್ದೆಗಳಿಗೆ 21 ರಿಂದ 35, ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣೆ ಮತ್ತು ಡಿ.ಫಾರ್ಮಾ / ಬಿ.ಫಾರ್ಮಾ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 40 ವರ್ಷ ಮತ್ತು ಸಿಪಾಯಿ / ವಾಹನ ಚಾಲಕರು ಹುದ್ದೆಗಳಿಗೆ ಕನಿಷ್ಟ 19 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅಜರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು 300/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಂತೆ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಅರ್ಜಿಯನ್ನು ಸೆಪ್ಟೆಂಬರ್‌ 13,2019ರೊಳಗೆ ಅಂಚೆ ಮೂಲಕ ಸಲ್ಲಿಸಬೇಕು.

ಕಚೇರಿಯ ವಿಳಾಸ: ಸಿದ್ಧಸಿರಿ ಸೌಹಾರ್ದ ಸಹಕಾರಿ ಲಿಮಿಟೆಡ್, ವಿಜಯಪುರ ಆಡಳಿತ ಕಚೇರಿ, ಶ್ರೀ ಸಿದ್ದೇಶ್ವರ ದೇವಾಲಯ ಆವರಣ, ಸಿದ್ಧೇಶ್ವರ ಮುಖ್ಯ ರಸ್ತೆ, ವಿಜಯಪುರ-586101.