ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಗೆ ಸಂಬಂಧ ಪಟ್ಟ ರೋಗಗಳು ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಅನಿಯಮಿತ ಆಹಾರ ಪದ್ಧತಿ ಮತ್ತು ವ್ಯಾಯಾಮ ರಹಿತ ಜೀವನ ಪದ್ಧತಿ. ಯುವ ಪೀಳಿಗೆಯಲ್ಲಿ, ಮಧ್ಯವಯಸ್ಕರಲ್ಲಿ ಹೆಲ್ತ್ ಕಾನ್ಷಿಯಸ್ನೆಸ್ ಜಾಸ್ತಿ ಕಂಡುಬರುತ್ತಿದ್ದರೂ ರೋಗ ಬಂದಾದ್ಮೇಲೇನೇ ವ್ಯಾಯಾಮ ಮಾಡೋವ್ರ ಸಂಖ್ಯೆ ಜಾಸ್ತಿ. ಎಕ್ಸರ್ಸೈಜ್ ಅನ್ನೋದು ಅವ್ರ ಅವ್ರ ದೇಹ ಪ್ರಕೃತಿಗೆ ಅನುಗುಣವಾಗಿ ಅಭ್ಯಾಸ ಮಾಡ್ಬೇಕಾಗುತ್ತೆ. ಕೆಲವರಿಗೆ ಯೋಗ ಬೇಕಾದ್ರೆ ಕೆಲವರಿಗೆ ಏರೋಬಿಕ್ಸ್, ಮತ್ತೆ ಕೆಲವರಿಗೆ ವಾಕಿಂಗ್ ಸಾಕಾಗುತ್ತೆ. ಎಲ್ಲ ವಯಸ್ಸಿನವರಿಗೂ ಸೂಟ್ ಆಗೋ ಅಂತ ವರ್ಕೌಟ್ ಅಂದ್ರೆ ಯೋಗ.. ಹಾಗಂದ ಮಾತ್ರಕ್ಕೆ ಅದ್ರಿಂದ ಯಾವದೇ ಸೈಡ್ ಎಫೆಕ್ಟ್ ಇಲ್ಲ ಅಂತಲ್ಲ..
೧) ಬೆನ್ನು ನೋವು ಇರೋವ್ರು ಮುಂದೆ ಬಗ್ಗಿ ಮಾಡೋ ಅಂತ ಆಸನ ಮಾಡಿದ್ರೆ ಬೆನ್ನು ನೋವು ಜಾಸ್ತಿ ಆಗುತ್ತೆ.
ಉದಾ: ಪಾದಹಸ್ತಾಸನ, ಪಶ್ಚಿಮೋತ್ತಾಸನ..
ಉದಾ: ಪಾದಹಸ್ತಾಸನ, ಪಶ್ಚಿಮೋತ್ತಾಸನ..
Also read: ಪ್ರತಿನಿತ್ಯ ನಾವೇಕೆ “ಯೋಗಾಭ್ಯಾಸ” ಮಾಡಬೇಕು? ಅನ್ನುವವರಿಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ…
೨) ಹೈ ಬಿಪಿ ಇರೋವ್ರು ಹಿಂದೆ ಬಗ್ಗಿ ಮಾಡೋ ಆಸನ ಮತ್ತೆ ಪೂರ್ತಿ ಮುಂದೆ ಬಗ್ಗಿ ಮಾಡೋ ಆಸನ, ತಲೆ ಕೆಳಗೆ ಮಾಡೋ ಆಸನ ಮಾಡ್ಬಾರ್ದು, ಸೂರ್ಯಾನುಲೋಮ ವಿಲೋಮ, ಭಸ್ತ್ರಿಕ ಪ್ರಾಣಾಯಾಮ ಮಾಡಬಾರ್ದು.
೩) ವರ್ಟಿಗೋ ಪ್ರಾಬ್ಲಮ್ ಇರೋವ್ರು ಹಿಂದೆ ಬಗ್ಗಿ ಮಾಡೋ ಆಸನ, ಬ್ಯಾಲೆನ್ಸಿಂಗ್ ಆಸನ ಮಾಡಬಾರ್ದು..
Also read: ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ದೇಹಕ್ಕೆ ಯೋಗ ಅಗತ್ಯ
೪) ಸ್ತ್ರೀಯರು ಮುಟ್ಟಾದಾಗ ಯೋಗಾಭ್ಯಾಸ ಮಾಡಬಾರ್ದು.

೫) ನಾರ್ಮಲ್ ಡೆಲಿವರಿ ಆಗಿ ಒಂದು ತಿಂಗಳಾದ್ಮೇಲೆ, ಸಿಸೇರಿಯನ್ ಡೆಲಿವರಿ ಆಗಿ ಮೂರು ತಿಂಗಳಾದ್ಮೇಲೆ ನಿಧಾನವಾಗಿ ಯೋಗ ಅಭ್ಯಾಸ ಮಾಡಬಹುದು.
೬) ಮಂಡಿ ನೋವು ಇರೋವ್ರು ಕೆಳಗೆ ಕುಳಿತು ಮಾಡುವ ಆಸನ ಮತ್ತು ಮಂಡಿ ಮೇಲೆ ಭಾರ ಹಾಕಿ ಮಾಡೋ ಆಸನವನ್ನು ಮಾಡಬಾರ್ದು. ಉದಾ: ಉತ್ಕಟಾಸನ, ವಜ್ರಾಸನ…
೭) ಕತ್ತು ನೋವು ಇರೋವ್ರು ಕತ್ತಿನ ಮೇಲೆ ಭಾರ ಹಾಕಿ ಮಾಡೋ ಆಸನ ಮಾಡ್ಬಾರ್ದು..
ಉದಾ: ಮತ್ಸ್ಯಾಸನ, ಶೀರ್ಷಾಸನ…೮) ಕಣ್ಣು, ಕಿವಿ ನೋವು, ಗ್ಲುಕೋಮಾ ಇರೋವ್ರು ತಲೆ ಮೇಲೆ, ಭುಜದ ಮೇಲೆ ಭಾರ ಹಾಕೋ ಆಸನ ಮಾಡ್ಬಾರ್ದು.
ಉದಾ: ಮತ್ಸ್ಯಾಸನ, ಶೀರ್ಷಾಸನ…೮) ಕಣ್ಣು, ಕಿವಿ ನೋವು, ಗ್ಲುಕೋಮಾ ಇರೋವ್ರು ತಲೆ ಮೇಲೆ, ಭುಜದ ಮೇಲೆ ಭಾರ ಹಾಕೋ ಆಸನ ಮಾಡ್ಬಾರ್ದು.
ಯೋಗ ಬರಿ ವ್ಯಾಯಾಮ ಅಲ್ಲ..ಅದೊಂದು ಚಿಕಿತ್ಸೆ ಸಹ .ನಿಮ್ಮ ದೇಹಕ್ಕೆ ಯಾವ್ದು ಒಳ್ಳೇದು ಅನ್ನೋದನ್ನ ಪರಿಣಿತ ವೈದರಿಂದ ತಿಳಿದುಕೊಂಡು ಆಮೇಲೆ ಅಭ್ಯಾಸ ಮಾಡೋದ್ರಿಂದ ಹೆಚ್ಚಿನ ಲಾಭ ಪಡೆಯೋದ್ರಲ್ಲಿ ಸಂಶಯನೇ ಇಲ್ಲ…ಯೋಗ ಶುರು ಮಾಡಬೇಕು ಅಂದ್ಕೊಂಡಿದೀರಾ?? ಹಾಗಿದ್ರೆ ಅದಕ್ಕೂ ಮುಂಚೆ ಈ ಹನ್ನೆರಡು ಸೂತ್ರಗಳನ್ನ ಪಾಲಿಸಿ ಹೆಚ್ಚಿನ ಲಾಭ ಪಡ್ಕೊಳ್ಳಿ !!