ವಿವಾಹಿತ ಮಹಿಳೆ ಕಾಲುಂಗುರ ಧರಿಸುವ ಮಹತ್ವವೇನು..? ತಿಳಿಯಿರಿ…

0
6446

ಹೌದು ಬೆಳ್ಳಿಯಿಂದ ಮಾಡಿದಂತಹ ಈ ಆಭರಣದಲ್ಲಿ ಹಲವಾರು ವೈಜ್ಞಾನಿಕ ಅಂಶಗಳು ಅಡಗಿವೆ.  ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ. ಇದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಬಂಧನದಲ್ಲಿರುತ್ತಾರೆ ಮತ್ತು ಧರ್ಮ ಪಾಲನೆ ಮಾಡುತ್ತಾರೆ ಎಂಬುದು ಮಾತ್ರ ನಿಮಗೆ ತಿಳಿದಿರಬಹುದು. ಆದರೆ ಅದರ ಮಹತ್ವ ಸಾಕಷ್ಟಿದೆ.

kalungura importance

ಇದು ಮದುವೆ ಆಗಿರುವುದನ್ನು ತೋರಿಸುವುದಕ್ಕೆ ಮಾತ್ರವಲ್ಲ, ಇದರ ಹಿಂದೆ ಒಂದು ವೈಜ್ಞಾನಿಕ ತತ್ವವಿದೆ. ಕಾಲುಂಗುರವನ್ನು ಸಾಮಾನ್ಯವಾಗಿ ಎರಡೇ ಬೆರಳಿಗೆ ಹಾಕಿಕಳ್ಳುವುದು ಎಂದು ನೆನಪಿಸಿಕೊಳ್ಳಿ. ಈ ಕಾಲುಂಗುರ ಉಷ್ಣವನ್ನು ಹೀರಿಕೊಳ್ಳುತ್ತದೆ. ಈ ಕಾಲುಂಗುರು ನೆಲಕ್ಕೆ ತಾಗಿದಾಗ ಅದು ಎನರ್ಜಿಯನ್ನು ಸೆಳೆದುಕೊಂಡು ನರಗಳ ಮೂಲಕ ಮಹಿಳೆಯರ ಬೆರಳಿಂದ ಒಂದು ನರ ಗರ್ಭಕೋಶವನ್ನು ಹಾದು ಹೃದಯದವರೆಗೂ ಹೋಗೂತ್ತದೆ. ಈ ಬೆರಳಿಗೆ ಉಂಗುರ ಹಾಕಿಕೊಳ್ಳುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಚೆನ್ನಾಗಿ ಆಗಿ ಶಕ್ತಿ ಪಡೆಯುತ್ತದೆ ಹಾಗೂ ಸರಿಯಾಗಿ ಮುಟ್ಟಾಗುತ್ತದೆ. ಅಲ್ಲದೇ ಸರಿಯಾಗಿ ಗರ್ಭಧಾರಣೆ ಆಗಲು ಸಹಾಯ ಮಾಡುತ್ತದೆ.

Also read:  ಮಕ್ಕಳಲ್ಲಿ ಕಾಡುವ ಖಿನ್ನತೆ ಎಂಬ ಮಹಾ ಮಾರಿಯ ಬಗ್ಗೆ ನಿಮಗೆಷ್ಟು ಗೊತ್ತು