ಸ್ನೇಹಕ್ಕೆ ಧರ್ಮ ಯಾವ ಲೆಕ್ಕ? ಮುಸ್ಲಿಂ ಸ್ನೇಹಿತೆಗೆ ಕಿಡ್ನಿ ಕೊಡಲು ಮುಂದಾದ ಸಿಖ್​​ ಗೆಳತಿ; ಧರ್ಮದ ಹೆಸರಲ್ಲಿ ಕಿತ್ತಾಡುವ ಜನರು ಸ್ವಲ್ಪ ಈ ಸುದ್ದಿ ಓದಿ..

0
476

ಸ್ನೇಹ ಎಂಬುವುದು ಪವಿತ್ರವಾದ ಬಂಧ. ಪ್ರೀತಿ ಯಲ್ಲಿ ಬೇಕಾದರೆ ಅಸೂಯೆ ಬರಬಹುದು. ಸ್ನೇಹ ಎಂಬುದು ಪರಿಶುದ್ಧವಾದ ಅಂಶವಾಗಿದೆ. ಇದಕ್ಕೆ ಸಾಕ್ಷಿ ಜಮ್ಮು ಕಾಶ್ಮೀರದ ಮಂಜೋತ್​ ಸಿಂಗ್. ಸಿಖ್ ಧರ್ಮದವಳಾದ ಈ ಮಂಜೋತ್​ ತನ್ನ ಸ್ನೇಹಿತೆ ಮುಸ್ಲಿಂ ಧರ್ಮದ ಸಮ್ರೀನ್-ಗೆ ತನ್ನ ಕಿಡ್ನಿ ನೀಡಲು ಮುಂದೆ ಬಂದಿದ್ದಾಳೆ. ಈ ಮಹಾನ್ ಕೆಲಸ ಮಾನವನಾಗಿ ಹುಟ್ಟಿ ಸ್ನೇಹದಲ್ಲಿ ದ್ರೋಹ ಬಗೆಯುವ ಜನರಿಗೆ ಒಂದು ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಹೌದು ಕೇಳಲು ಯಾವದೋ ಕತೆಯಂತೆ ಇದ್ದರು ಅಸಲಿಗೆ ಸತ್ಯವಾಗಿದೆ. ಈಗಿನ ಸ್ನೇಹ ನೋಡಿದರೆ ಇನ್ನು ಕರ್ಣ ಮತ್ತು ದುರ್ಯೋಧನರ ಸ್ನೇಹ ಬದುಕಿದೆ ಅನ್ಸುತ್ತೆ.

ಏನಿದು ಸ್ನೇಹ ?

ಜಮ್ಮು ಕಾಶ್ಮೀರದ 23 ವರ್ಷದ ಸಿಖ್​ ಹುಡುಗಿ ಮಂಜೋತ್​ ಸಿಂಗ್ ಕೊಹ್ಲಿ, ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿರುವ ತನ್ನ ಮುಸ್ಲಿಂ ಗೆಳತಿ ಸಮ್ರೀನ್​ ಗೆ ಕಿಡ್ನಿ ದಾನ ಮಾಡಲು ಮುಂದಾದ ಹೃದಯ ಸ್ಪರ್ಶಿ ಘಟನೆ ಇದು ಈ ಸ್ನೇಹಿತೆಯರ ಸ್ನೇಹವು ಹೇಗಿದೆ ಅಂದರೆ ಎಲ್ಲಿಯ ಸಿಖ್​, ಎಲ್ಲಿಯ ಮುಸ್ಲಿಂ. ಆದರೆ ಅವರಿಬ್ಬರ ಮಧ್ಯೆ ಇರುವ ಗೆಳೆತನ ಮಾತ್ರ ಎಲ್ಲವನ್ನೂ ಮೀರಿದ್ದು. ಜಮ್ಮುವಿನ ಉಧಾಂಪುರ ಮೂಲದ ಮಂಜೋತ್​, 4 ವರ್ಷಗಳ ಹಿಂದೆ ಸಮ್ರೀನ್​ನ್ನು ಮತ್ತು. ಮಂಜೋತ್ ಇಬ್ಬರ ನಡುವೆ ಸ್ನೇಹವಾಗಿತ್ತು. ನಂತರ ಅವರಿಬ್ಬರೂ ಒಳ್ಳೆಯ ಗೆಳತಿಯರಾಗುತ್ತಾರೆ. ಈಗ ತನ್ನ ಸ್ನೇಹಿತೆಗೆ ಮೂತ್ರಪಿಂಡ ರೋಗಕ್ಕೆ ತುತ್ತಾಗಿದ್ದು ಅವಳಿಗೆ ಮಂಜೋತ್​ ತನ್ನ ಒಂದು ಕಿಡ್ನಿಯನ್ನು ದಾನಮಾಡಲು ಸಿದ್ದಳಾಗಿದ್ದಾಳೆ. ಇದು ದೇಶದ ಜನರಿಗೆ ಮಾದರಿಯಾಗಿದೆ.

ಸ್ನೇಹಿತೆಗೆ ತನ್ನ ಜೀವನವನ್ನೇ ನೀಡುತ್ತಿರುವ ಮಂಜೋತ್​ ಮಾತು:

ನಮ್ಮ ಸ್ನೇಹವು ಪವಿತ್ರವಾದದ್ದು ನಾನು ಸಾಮಾಜಿಕ ಕಾರ್ಯಕರ್ತೆಯಾಗಿದ್ದೇನೆ. ಸಮ್ರೀನ್​ ಕೂಡ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಳು. ಕ್ರಮೇಣ ನಾವು ಒಳ್ಳೆಯ ಸ್ನೇಹಿತೆಯರಾದೆವು” ಆದಕಾರಣ ನಾನು ಸಮ್ರೀನ್​ ಕುಟುಂಬವನ್ನು ಕೈಬಿಡಲು ಸಾಧ್ಯವಿಲ್ಲ. ಅವರು ತಮ್ಮ ಮಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂದು ನಾನು ಹೇಳಲಾರೆ. ಅವರ ದೃಷ್ಟಿಯಲ್ಲಿ ಅವರು ಮಾಡಿರುವುದು ಸರಿಯಾಗಿಯೇ ಇದೆ. ಕೆಲವೊಮ್ಮೆ ಕಷ್ಟಗಳು ಬಂದಾಗ ದೇವರೇ ನಮ್ಮನ್ನು ಕಳುಹಿಸಿದ್ದಾನೆ ಎಂದು ಭಾವಿಸಿ ಅವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು. ಎಲ್ಲಾ ಸಂಬಂಧಗಳು ಇಲ್ಲಿಯೇ ಉಳಿಯುತ್ತವೆ. ಒಂದು ಜೀವ ಉಳಿಸುವುದು ಕೂಡ ಮುಖ್ಯವಾಗುತ್ತದೆ. ನಾನು ಪ್ರಬುದ್ಧೆ. ನನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು” ಎಂದು ಮಂಜೋತ್​ ಹೇಳಿದ್ದಾರೆ.

ಇದಕ್ಕೆ ಸಮ್ರೀನ್ ಹೇಳಿದು:​

ಆಸ್ಪತ್ರೆಯಲ್ಲಿ ಡಯಾಲಿಸಿಸ್​ ಚಿಕಿತ್ಸೆ ಪಡೆಯುತ್ತಿರುವ ಸಮ್ರೀನ್​ ತನ್ನ ಗೆಳತಿ ಮಂಜೋತ್​ಗೆ ಧನ್ಯವಾದ ತಿಳಿಸಿದ್ದಾಳೆ. ನನ್ನ ತಾಯಿ ನನಗೆ ಕಿಡ್ನಿ ಕೊಡಲು ಮುಂದಾಗಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರಲಿಲ್ಲ. ನಮ್ಮ ಸಂಬಂಧಿಕರು ಯಾರಾದರೂ ಬಂದು ಕಿಡ್ನಿ ಕೊಡಬಹುದೇನೋ ಎಂಬ ಭರವಸೆ ಇತ್ತು. ಆದರೆ ಯಾರೊಬ್ಬರೂ ಬರಲಿಲ್ಲ ಎಂದು ಸಮ್ರೀನ್​ ದುಃಖಿತಳಾದಳು.

ಸಮ್ರೀನ್​ ತಂದೆಯ ಹೇಳಿದ್ದು:

ಸಮ್ರೀನ್​ ತಂದೆ ಮುಖ್ತಾರ್​​ ಅಹಮದ್​ ಮಲಿಕ್​, “ನಾನು ಒಬ್ಬ ದರ್ಜಿ. ಇಲ್ಲಿಯವರೆಗೆ ಸಮ್ರೀನ್​ ಚಿಕಿತ್ಸೆಗೆ 7-8 ಲಕ್ಷ ರೂ. ಖರ್ಚಾಗಿದೆ. ಅವಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಆಗ ನನ್ನ ಮಗಳ ಗೆಳತಿ ಮಂಜೋತ್​ ಬಂದು ತನ್ನ ಕಿಡ್ನಿ ನೀಡುವುದಾಗಿ ಹೇಳಿದರು. ಆದರೆ ಆಕೆಯ ತಂದೆಗೆ ಇದು ಇಷ್ಟವಿಲ್ಲ. ಮಂಜೋತ್​ ಕುಟುಂಬ ಆಕೆಯ ನಿರ್ಧಾರವನ್ನು ವಿರೋಧಿಸಿದ್ದಾರೆ. ಅವರು ಒಪ್ಪಿಗೆ ನೀಡಿದರೆ ನನ್ನ ಮಗಳ ಜೀವ ಉಳಿಯುತ್ತದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ, ತನ್ನ ಮಗಳು ಕಿಡ್ನಿ ದಾನ ಮಾಡಲು ನೀವು ಅನುಮತಿ ನೀಡಬಾರದು ಎಂದು ಮೆಡಿಕಲ್​ ಇನ್ಸ್​ಟಿಟ್ಯೂಟ್​​ಗೆ ಮಂಜೋತ್​ ತಂದೆ ಮನವಿ ಮಾಡಿದ್ದಾರೆ.

ತಂದೆಯ ಅಭಿಪ್ರಾಯಕ್ಕೆ ಮಂಜೋತ್ ಹೇಳಿಕೆ:

ಮಂಜೋತ್​ಗೆ ಮಾನವೀಯತೆಯೇ ಬದುಕು. ಆಕೆಯೇ ಹೇಳುವಂತೆ, “ನಾನು ಯಾವುದಕ್ಕೂ ಹೆದರುವುದಿಲ್ಲ. ಮಾನವೀಯತೆ ಕಳೆದುಕೊಳ್ಳಬಾರದು ಎಂಬುದು ನನಗಿರುವ ಒಂದೇ ಒಂದು ಕಾಳಜಿ. ನನ್ನ ಕುಟುಂಬ ಭಾವತಿರೇಕಕ್ಕೆ ಒಳಗಾಗಿದೆ. ಆದರೆ ನಾನು ನನ್ನ ಗುರಿಯನ್ನು ಬಿಡದೆ, ಮುಂದೆ ಸಾಗುತ್ತೇನೆ . ನಗೆ ಮಾನವೀಯತೆ ಮೇಲಿರುವ ಬಲವಾದ ನಂಬಿಕೆಯೇ ಪ್ರೇರಣೆ. ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಕೋಮು ಸಾಮರಸ್ಯ ಮೂಡುತ್ತದೆ. ನನ್ನ ಕುಟುಂಬ ನನಗೆ ಸಹಾಯ ಮಾಡಿದರೆ ಮತ್ತಷ್ಟು ಖುಷಿಯಾಗುತ್ತೇನೆ ಎಂದರು.