ಬೆಳ್ಳಿ ಪಾತ್ರೆಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಪಾಲೀಶ್ ಮಾಡಿಸುವ ಬದಲು ಮನೆಯಲ್ಲೇ ಹೊಳೆಯುವಂತೆ ಮಾಡುವ ಸಿಂಪಲ್ ವಿಧಾನ.

0
4168

ಹೌದು, ಸಾಮಾನ್ಯವಾಗಿ ಬೆಲೆ ಬಾಳುವ ಬೆಳ್ಳಿ ಪಾತ್ರೆ ಗಳನ್ನು ದೇವರ ಮನೆಯಲ್ಲಿ ಪೂಜೆಗೆ ಉಪಯೋಗಿಸುತ್ತಿರುತ್ತೇವೆ.. ಇನ್ನೂ ಸ್ವಲ್ಪ ಮಂದಿ ಬೀರುವಿನಲ್ಲಿಟ್ಟು ಶುಭ ಸಮಾರಂಭಗಳಲ್ಲಿ ಹಬ್ಬಗಳಲ್ಲಿ ಬಳಸುತ್ತಾರೆ.. ಆದರೆ ದಿನ ಕಳೆದಂತೆ ಬೆಳ್ಳಿ ಕಪ್ಪಾಗುತ್ತದೆ.. ಅದಕ್ಕೆ ಸಾವಿರ ಗಟ್ಟಲೇ ಕೊಟ್ಟು ಪಾಲೀಶ್ ಮಾಡಿಸುತ್ತೇವೆ..

ಇದರ ಬದಲು ಮನೆಯಲ್ಲೇ ಖರ್ಚಿಲ್ಲದೇ ಸುಲಭವಾಗಿ ಫಳ ಫಳ ಹೊಳೆಯುವಂತೆ ಮಾಡಬಹುದು.. ಹೌದು ಇದಕ್ಕೇ ಬೇಕಿರುವುದು ಕೇವಲ ಟೂತ್ ಪೇಸ್ಟ್ ಅಥವಾ ಟೂತ್ ಪೌಡರ್ ಅಷ್ಟೇ..

ಬೆಳ್ಳಿ ಪಾತ್ರೆಗಳಿಗೆ ಟೂತ್ ಪೌಡರ್ ಮತ್ತು ನೀರನ್ನು ಹಾಕಿ ಸ್ವಲ್ಪ ಹೊತ್ತು ನೆನೆಯಲು ಬಿಡಿ.. ನಂತರ ಒಂದು ಬಿಳಿ ಕಾಟನ್ ಬಟ್ಟೆಯಲ್ಲಿ ಉಜ್ಜುತ್ತಾ ಬನ್ನಿ.. ಹೀಗೆ 2 ಭಾರಿ ಮಾಡಿ ಬೆಳ್ಳಿ ಪಾತ್ರೆಗಳು ಹೊಸದರಂತೆ ಆಗುವುದು.. ಪಾಲೀಶ್ ಮಾಡಿಸುವ ಹಣ ಉಳಿಯುವುದು.. ಇದಕ್ಕೆ ಟೂತ್ ಪೇಸ್ಟ್ ಕೂಡ ಉಪಯೋಗಿಸಬಹುದು.. ಆದರೆ ಬಿಳಿ ಬಣ್ಣದ ಟೂತ್ ಪೇಸ್ಟ್ ಉಪಯೋಗಿಸಲು ಮರೆಯಬೇಡಿ..

ಇನ್ನೂ ಒಂದು ಸಲಹೆ ಏನೆಂದರೇ ಬೆಳ್ಳಿ ಪಾತ್ರೆಯ ನಿರಂತರ ಹೊಳಪಿಗಾಗಿ.. ಸೋಪಿನ ಪೌಡರ್ ನಲ್ಲಿ ತೊಳೆಯುವ ಬದಲು ಸಬಿನಾ ಪೌಡರ್ ನಲ್ಲಿ ತೊಳೆಯಿರಿ.. ಇದು ಬೆಳ್ಳಿ ಪಾತ್ರೆ ಕಪ್ಪಾಗದಂತೆ ನೋಡಿಕೊಳ್ಳುವುದು..

ಪ್ರತಿ ಮನೆಯಲ್ಲೂ ಉಪಯೋಗವಾಗುವಂತ ಸಲಹೆ.. ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾದರೂ ವಾದೀತು..