ಪದೇ ಪದೇ ಡೆಂಟಿಸ್ಟ್ ಹತ್ರ ಹೋಗಿ ದುಡ್ಡು ಕೊಡೋ ಬದಲು ಈ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಹಲ್ಲುಗಳನ್ನು ಗಟ್ಟಿಗೊಳಿಸಿ…

0
1717

ಆರೋಗ್ಯವಂತರಾಗಿ ಮತ್ತು ಸುಂದರವಾಗಿ ಬಾಳಲು ಮುಖ್ಯವಾಗಿ ಬೇಕಾಗಿರುವುದು ಹಲ್ಲುಗಳು ಈ ಸುಂದರ ಹಲ್ಲುಗಳನ್ನು ಹೊಂದಿದರೆ ನಿಮ್ಮ ನಗು ಉತ್ತಮವಾಗಿರುತ್ತೆ. ಹಲ್ಲುಗಳು ಮನುಷ್ಯನ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗಲಾರದು. ಇದರಿಂದಲೇ ಪ್ರತಿಯೊಬ್ಬರಿಗೂ ಇರುವ ಹೆಬ್ಬಯಕೆ ಅಂದ್ರೆ ತಮ್ಮ ಹಲ್ಲು ಯಾವತ್ತು ಪಳಪಳನೆ ವಜ್ರದಂತೆ ಹೊಳೆಯಬೇಕು ಎಂಬುದು. ಆದರೆ ಏನು ಮಾಡುವುದು ಕೆಲವೊಂದು ಬಣ ಮಿಶ್ರಣ ಆಹಾರ ಸೇವನೆಯಿಂದ ಮತ್ತು ದುಷ್ಟಚಟಗಳಿಂದ ಸುಂದರ ಹಲ್ಲುಗಳು ಹಾಳಾಗಿ ಹೋಗುತ್ತೆ ಇದಕ್ಕೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಹೊಂದಿರುವ ಆಯಿಲ್, ಪೇಸ್ಟ್, ಬ್ರಶ್ ಬಳಸಿ ಅಮೂಲ್ಯವಾದ ಹಲ್ಲನ್ನು ಹಾಳು ಮಾಡಿಕೊಳುತ್ತಿರುವರ ಸಂಖ್ಯೆ ಹೆಚ್ಚಾಗಿದೆ.

Also read: ಇನ್ನು ಮುಂದೆ ಹಲ್ಲುಗಳು ಹಳದಿ ಕರೆ ಕಟ್ಟುವುದರ ಚಿಂತೆ ಬೇಡ, ಇಲ್ಲಿದೆ ಅದಕ್ಕೆ ಸೂಕ್ತ ಪರಿಹಾರಗಳು…..!

ಇದರಿಂದ ಕೆಲವೊಂದು ಬಾಯಿಗೆ ಸಂಬಂಧಪಟ್ಟ ಖಾಯಿಲೆಗಳು ಕೂಡ ಬಂದು ತೊಂದರೆಗೆ ಸಿಲುಕಿಕೊಂಡು ಕೊನೆಯ ಬಾಯಿ ಕ್ಯಾನ್ಸರ್ ಅಂತ ರೋಗಗಳಿಗೆ ತುತ್ತಾಗುವುದು ಸಾಮಾನ್ಯವಾಗಿದೆ. ಇದೆಲ್ಲವೂ ಆಗಬಾರದು ನಮ್ಮ ಹಲ್ಲು ಸರಳವಾಗಿ ಸ್ವಚ್ಚ ಮತ್ತು ಹೊಳಪನ್ನು ಹೊಂದಿರಬೇಕು ಅಂದರೆ ಈ ನೈಸರ್ಗಿಕ ಮನೆಮದ್ದುಗಳನ್ನು ಬಳಸಿ. ನಿಮ್ಮ ನಗುವನ್ನು ಹೆಚ್ಚಿಸಿಕೊಳ್ಳಿ.

ನಿಂಬೆಯ ಹಣ್ಣು ಮತ್ತು ಪುಡಿ ಉಪ್ಪು:

ನಿಂಬೆಹಣ್ಣು ಉದ್ದವಾಗಿ ಹೆಚ್ಚಿ ಅದಕ್ಕೆ ಸಣ್ಣನೆಯ ಪುಡಿ ಉಪ್ಪು ಸೇರಿಸಿ ಹಲ್ಲಿಗೆ ಹಾಕಿ ಉಜ್ಜಿ ಇದರಿಂದ ಹಲ್ಲಿನ ಮೇಲಿರುವ ಕಲೆಗಳು ಮತ್ತು ಕಂದು ಬಣ ಹೋಗುತ್ತೆ. ಮೊದಲು ಸಾರಿ ಈ ಪ್ರಯೋಗ ಮಾಡುವಾಗೆ ಜುಮ್ಮ್ ಎನುತ್ತೆ ಹಾಗೆ ಎರಡು ದಿನ ಮಾಡಿದರೆ ರೂಡಿಯಾಗುತ್ತದೆ. ಮೊದಲು ಒಂದು ವಾರ ಈ ಪ್ರಯೋಗವನ್ನು ಮಾಡಿ ನಂತರ ವಾರದಲ್ಲಿ ಒಂದು ಸಾರಿ ಮಾಡಿದರು ಕೂಡ ಹಲ್ಲು ವಜ್ರದಂತೆ ಹೊಳೆಯುತ್ತೆ.

ಸೇಬು ರಸದ ಎಣ್ಣೆ:

ಸೇಬು ರಸದ ಎಣ್ಣೆ ಹಲ್ಲುಗಳ ಮೇಲೆ ಕಟ್ಟಿರುವ ಕಿಟ್ಟವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಹಲ್ಲುಗಳ ಮೇಲಿರುವ ಮೊಂಡು ಕಲೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಧೂಮಪಾನದಿಂದ ಆಗಿರುವ ಕಲೆಗಳಿದ್ದರೆ ತೊಡೆದು ಹಾಕುತ್ತದೆ.

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿದ್ದು, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುವ ಶಕ್ತಿ ಹೊಂದಿದೆ. ಜತೆಗೆ ಇದು ಹಲ್ಲುಗಳನ್ನು ಶುಭ್ರಗೊಳಿಸಲು ಸಹಾಯ ಮಾಡುತ್ತದೆ.

ಅಡಿಗೆ ಸೋಡ:

Also read: ಹಲ್ಲು ನೋವು ಬಂದ್ರೂ ಡೆಂಟಿಸ್ಟ್ ಹತ್ರ ಹೋಗೋಕೆ ಭಯ ಪಡ್ತಿರೋವ್ರು ಈ ಮನೆಮದ್ದುಗಳನ್ನು ಪಾಲಿಸಿ ನೋವಿನಿಂದ ಮುಕ್ತಿ ಪಡೆಯಿರಿ..

ಅಡಿಗೆ ಸೋಡವನ್ನು ಬಾಯಿಯ ಆರೋಗ್ಯಕ್ಕಾಗಿ ಹಿಂದಿನ ಕಾಲದಿಂದಲೂ ಉಪಯೋಗಿಸುತ್ತಿದ್ದಾರೆ. ಒಂದು ಟೇಬಲ್ ಸ್ಪೂನ್ ಅಡಿಗೆ ಸೋಡ ತೆಗೆದುಕೊಂಡು ಉಪ್ಪಿನೊಂದಿಗೆ ಬೆರೆಸಿ ಹಲ್ಲಿನ ಮೇಲೆ ಉಜ್ಜಿ. ಇದು ನಿಮ್ಮ ಹಲ್ಲುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಸ್ಟ್ರಾಬೆರ್ರಿ:

ಸ್ಟ್ರಾಬೆರ್ರಿ ಹಣ್ಣುಗಳು ಕೇವಲ ತಿನ್ನಲು ಮಾತ್ರ ರುಚಿಕರವಲ್ಲ, ಬದಲಾಗಿ ಹಲ್ಲುಗಳ ಆರೋಗ್ಯಕ್ಕೂ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದ್ದು, ಹಲ್ಲುಗಳ ಮೇಲಿರುವ ಹಳದಿ ಬಣ್ಣವನ್ನು ಮಾಯಮಾಡುತ್ತದೆ. ಜತೆಗೆ ಇದರಲ್ಲಿರುವ ಮ್ಯಾಲಿಕ್ ಆ್ಯಸಿಡ್ ಅಂಶ ಹಲ್ಲುಗಳಲ್ಲಿನ ಕಲೆ ನಿವಾರಣೆ ಮಾಡುತ್ತದೆ.

ಇದ್ದಿಲ ಪೌಡರ್:

Also read: ಹಲ್ಲುಗಳ ಹಾಳಾಗೋದರಿಂದ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಆತಂಕ ಇದೆಯಾ…ಟೆನ್ಶನ್ ಬಿಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…

ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳುಪಾಗಿಸಲು ಸುಲಭ ಉಪಾಯವೆಂದರೆ ಇದ್ದಿಲ ಪುಡಿ. ಇದ್ದಿಲನ್ನು ಪುಡಿ ಮಾಡಿಕೊಂಡು, ಅದನ್ನು ಟೂತ್ ಬ್ರಶ್​​ನಿಂದ ಹಲ್ಲುಗಳ ಮೇಲೆ ಉಜ್ಜಿ. ಇದು ಕೊಳೆ ನಿವಾರಣೆ ಮಾಡಿ ಹಲ್ಲುಗಳನ್ನು ಪಳಪಳ ಹೊಳೆಯುವಂತೆ ಮಾಡುತ್ತದೆ.

ಕಬ್ಬಿನ ಹಾಲು ಕುಡಿಯೋದು, ಕಚ್ಚಿ ಕಬ್ಬನು ತಿನ್ನೋದು:

ಕಬ್ಬಿನಲ್ಲಿ ನಾರಿನಂಶ ವಿರುತ್ತದೆ ಇದನ್ನು ಬಾಯಿಯಲ್ಲಿ ಜಗಿದು ತಿಂದರೆ ಹಲ್ಲಿನ ನರಗಳು ಗಟ್ಟಿಯಾಗುತ್ತೇವೆ ಮತ್ತು ಹಲ್ಲಿನಲ್ಲಿರುವ ಬಹುದಿನದ ಕಲೆಗಳು ಹೋಗುತ್ತೆ ಕೀಟಗಳು ನಿವಾರಣೆ ಮಾಡುತ್ತೆ. ಹಾಗೆ ಕಬ್ಬಿನ ಹಾಲಿನಲ್ಲಿರುವ ಸಿಹಿ ಅಂಶದಿಂದ ಹಲ್ಲಿಗೆ ಸೈನಿಗ್ ಬರುತ್ತದೆ.