ಅಲ್ಲಾಡದೆ ಒಂದೇಕಡೆ ತುಂಬಾ ಹೊತ್ತು ಕೂತಿದ್ರೆ ಬೇಗ ಸತ್ತುಹೋಗ್ತೀರಾ ಹುಷಾರ್…ಹೇಗೆ ಅಂತೀರಾ ಈ ಆರ್ಟಿಕಲ್ ಓದಿ..

0
1515

ನಿಮ್ಮದು ಒಂದೇ ಕಡೆ ಜಾಸ್ತಿ ಹೊತ್ತು ಕೂತು ಮಾಡೋ ಕೆಲ್ಸನಾ? ಒಂದೇ ಸ್ಥಳದಲ್ಲಿ ಒಮ್ಮೆಲೇ ಒಂದು ಗಂಟೆಗಿಂತ ಹೆಚ್ಚಾಗಿ ಕುತ್ಕೊತಿದೀರಾ? ದಿನದಲ್ಲಿ ೭ ಗಂಟೆಗೂ ಅಧಿಕ ಕುಳಿತು ಕೆಲಸ ಮಾಡ್ತಾ ಇದಿರಾ?? ಹಾಗಿದ್ರೆ ನೀವು ಸಾವಿಗೆ ಹತ್ತಿರ ಆಗ್ತಾ ಇದಿರಾ ಜಾಗ್ರತೆ…

 

ಅಧ್ಯಯನಗಳ ಪ್ರಕಾರ ನೀವು ದಿನದಲ್ಲಿ ೭.೫ ಗಂಟೆಗಿಂತ ಅಧಿಕ ಹೊತ್ತು ಕುಳಿತಿದ್ರೆ ನಿಮ್ಮ ದೇಹದ ಅಂಗಾಂಗಗಳ ಕಾರ್ಯಕ್ಷಮತೆ ಕ್ಷೀಣಿಸಿ ಬಹು ಬೇಗ ಅನಾರೋಗ್ಯಕ್ಕೆ ಒಳಗಾಗುತ್ತವೆ.ದಿನದಲ್ಲಿ ಕನಿಷ್ಠ ಪಕ್ಷ ೫೦೦೦ ಹೆಜ್ಜೆಗಳನ್ನಿರಿಸದ ವ್ಯಕ್ತಿಯು ಜೀವನ ಶೈಲಿ ಸಂಬಂಧ ಪಟ್ಟ ರೋಗಗಳ ದಾಸನಾಗುವಲ್ಲಿ ಸಂಶಯವೇ ಇಲ್ಲ.

ಹೆಚ್ಚು ಹೊತ್ತು ಕುಳಿತಲ್ಲಿ ನಿಮ್ಮ ದೇಹದಲ್ಲಿ ಏನೆಲ್ಲಾ ತೊಂದರೆಗಳಾಗುತ್ತವೆ ಎಂದು ತಿಳಿಯಲು ಮುಂದೆ ಓದಿ..

೧) ಬೊಜ್ಜು/ ತೂಕ ಹೆಚ್ಚಾಗುತ್ತದೆ:

ಊಟ/ ತಿಂಡಿ ಮಾಡಿದ ತಕ್ಷಣ ಓಡಾಡದೆ  ಕುಳಿತ್ತಲ್ಲಿ ಸೇವಿಸಿದ ಆಹಾರವು ಫ್ಯಾಟ್ ಆಗಿ ಪರಿವರ್ತನೆಗೊಂಡು ದೇಹದಲ್ಲಿ ಶೇಕರಿಸಲ್ಪಡುತ್ತದೆ. ತುಂಬಾ ಹೊತ್ತು ಕುಳಿತು ಕೆಲಸ ಮಾಡುವವರಲ್ಲಿ ಹೊಟ್ಟೆಯ/ಸೊಂಟದ ಸುತ್ತ  ಬೊಜ್ಜು ಸಂಗ್ರಹವಾಗಿ ಮುಂದೆ ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳನ್ನು  ತಂದೊಡ್ಡುತ್ತದೆ.

೨) ಹೃದ್ರೋಗ ಸಮಸ್ಯೆ:

ಹೆಚ್ಚು ಹೊತ್ತು ಕುಳಿತ್ತಿದ್ದಲ್ಲಿ  ಹೃದಯದ  ಕಾರ್ಯದಕ್ಷತೆ ಕಡಿಮೆಯಾಗಿ ಅಲ್ಲಿಯ ಮಾಂಸಖಂಡಗಳ ಶಕ್ತಿ ಕುಂಠಿತಗೊಳ್ಳುತ್ತವೆ. ಇದರಿಂದ ಅಧಿಕ ರಕ್ತದೊತ್ತಡ, ಹಾರ್ಟ್ ಅಟ್ಯಾಕ್, ಇಸ್ಕೆಮಿಕ್ ಹಾರ್ಟ್ ಡಿಸೀಸ್ ಅಂತಹ ಹತ್ತು ಹಲವು ಸಮಸ್ಯೆಗಳು ಉಂಟಾಗುತ್ತದೆ.

೩) ಮಧುಮೇಹ:

ಹೆಚ್ಚು ಹೊತ್ತು ಕುಳಿತ್ತಿದ್ದಲ್ಲಿ ಜೀವಕೋಶಗಳಲ್ಲಿ ಇನ್ಸುಲಿನ್ ರೆಸಿಸ್ಟನ್ಸ ಉಂಟಾಗಿ ಸಕ್ಕರೆ ಅಂಶಗಳು ಜೀವಕೋಶವನ್ನು ತಲುಪಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ರಮೇಣ ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಾಗಿ ಮಧುಮೇಹ ಬರಲು ಕಾರಣವಾಗುತ್ತದೆ.

೪) ಜಠರ ಸಂಬಂಧಿ ಸಮಸ್ಯೆಗಳು:

ದೈಹಿಕ ಶ್ರಮವಿಲ್ಲದ ಜೀವನ ಶೈಲಿಯು ಹೊಟ್ಟೆಯ ಹಾಗಿತ್ತಾರೆ ಅಂಗಗಳ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಿ ಮಲಭಾದ್ದತೆ, ಅಜೀರ್ಣ, ಎದೆಯುರಿ, ಆಸಿಡಿಟಿಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ.

source: thehealthsite.com

೫) ಸ್ನಾಯುಗಳ ಬಿಗಿತ ಮತ್ತು ನೋವು;

ಹೆಚ್ಚು ಹೊತ್ತು ಕುಳಿತುಕೊಂಡಿರುವುದರಿಂದ ಬೆನ್ನು ಮತ್ತು ತೊಡೆಯ ಸ್ನಾಯುಗಳು ಸಂಕುಚಿತಗೊಂಡು ಸೆಳೆತ ಮತ್ತು ಬಿಗಿತ ಉಂಟಾಗುತ್ತದೆ.ಇದರಿಂದ  ಪಾಶ್ಚರ್ ಬದಲಾವಣೆಯಾಗಿ ಕತ್ತು, ಸೊಂಟ ಮತ್ತು ಮಂಡಿ ನೋವು ಕಾಣಿಸಿಕೊಳ್ಳುತ್ತದೆ.

೬) ಮನೋ ರೋಗಗಳು:

ಹೆಚ್ಚು ಕುಳಿತು ಕೆಲಸ ಮಾಡುವ ವ್ಯಕ್ತಿಗಳಲ್ಲಿ ಖಿನ್ನತೆ, ಅಸ್ಥಿರತೆ, ಏಕಾಗ್ರತೆ ಇಲ್ಲದಿರುವುದು, ಯೋಚನಾ ಶಕ್ತಿ ಕುಂಠಿತಗೊಳ್ಳುವುದು, ಒತ್ತಡ, ಆತಂಕಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಆದ್ದರಿಂದ ೩೦ ನಿಮಿಷಗಳಿಗಿಂತ ಹೆಚ್ಚು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ. ಪ್ರತಿ ಅರ್ಧಗಂಟೆಗೆ ಎದ್ದು ೫ ರಿಂದ ೧೦  ನಿಮಿಷ ಓಡಾಡಿ. ದಿನಕ್ಕೆ ಕನಿಷ್ಠ ೧ ಗಂಟೆ ನಿರಂತರ ದೈಹಿಕ ವ್ಯಾಯಾಮವನ್ನು ಮಾಡಿ. ಅತಿ ಹೆಚ್ಚು ಸಿಹಿ ಮತ್ತು ಎಣ್ಣೆಯುಳ್ಳ ಪದಾರ್ಥಗಳನ್ನು ಸೇವಿಸಬೇಡಿ. ಮಧ್ಯಪಾನ ಧೂಮಪಾನಗಳಂತಹ ವ್ಯಸನಗಳಿಂದ ದೂರವಿರಿ ಅರೋಗ್ಯಕರ ರೋಗ ಮುಕ್ತ ಜೀವನ ನಿಮ್ಮದಾಗಿಸಿಕೊಳ್ಳಿ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840